ಪ್ರಿಯಾಂಕಾ ಚೋಪ್ರಾ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ ಅಕೌಂಟ್‌ಗಳಲ್ಲಿ ತಮ್ಮ ಹೆಸರಿನ ಮುಂದಿದ್ದ ಪತಿಯ ಹೆಸರನ್ನು ಕೈಬಿಟ್ಟಿದ್ದರು. ಇದರಿಂದ ಸ್ಟಾರ್‌ ಜೋಡಿಯ ದಾಂಪತ್ಯದಲ್ಲಿ ಬಿರುಕುಂಟಾಗಿದೆ ಎಂದು ನೆಟ್ಟಿಗರು ಊಹಿಸಿದ್ದರು. ಆದರೆ ಇದೆಲ್ಲ ಸುಳ್ಳು ಸುದ್ದಿ, ಇದಕ್ಕೆ ಕಿವಿಗೊಡಬೇಡಿ ಎಂದು ಪ್ರಿಯಾಂಕಾರ ತಾಯಿ ಮಧು ಚೋಪ್ರಾ ಸ್ಪಷ್ಟನೆ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾರವರು ನಿಕ್‌ ಜೋನಾಸ್‌ರನ್ನು ವಿವಾಹವಾದ ಮೇಲೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹೆಸರನ್ನು ‘ಪ್ರಿಯಾಂಕಾ ಚೋಪ್ರಾ ಜೋನಾಸ್‌ʼ ಎಂದು ಬರೆದುಕೊಂಡಿದ್ದರು. ಈಗ ‘ಜೋನಾಸ್‌’ ಕೈಬಿಟ್ಟಿದ್ದು, ‘ಪ್ರಿಯಾಂಕಾ’ ಎಂಬುದನ್ನಷ್ಟೇ ಉಳಿಸಿಕೊಂಡಿದ್ದಾರೆ. ಪ್ರಿಯಾಂಕಾ ಹೀಗೆ ತಮ್ಮ ಹೆಸರನ್ನು ಬದಲಾಯಿಸಿದ್ದೇ ತಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾದವು. ಇವರ ದಾಂಪತ್ಯದಲ್ಲಿ ಬಿರುಕಾಗಿದೆ ಊಹಾಪೋಹಗಳು ಹರಡಿದವು. ಇದು ಇವರು ದೂರವಾಗುತ್ತಿರುವ ಮೊದಲ ಹೆಜ್ಜೆ ಎಂದೆಲ್ಲಾ ನೆಟ್ಟಿಗರು ಗಾಸಿಪ್‌ ಮಾಡಿದರು. ಆದರೆ ಈ ಗಾಸಿಪ್‌ಗಳೆಲ್ಲ ಬರೀ ವದಂತಿಗಳು ಎಂದು ಖುದ್ದು ಅವರೇ ಸ್ಪಷ್ಟನೆ ನೀಡಿದ್ದಾರೆ.

ನಿಕ್‌ ನಿನ್ನೆಯಷ್ಟೇ ‘Monday motivation’ ಎಂದು ಬರೆದುಕೊಂಡು ಜಿಮ್‌ ವರ್ಕೌಟ್‌ನ ಸಣ್ಣ ವೀಡಿಯೋ ಕ್ಲಿಪ್‌ವೊಂದನ್ನು ಪೋಸ್ಟ್‌ ಮಾಡಿದ್ದರು. ಇದಕ್ಕೆ ಪತ್ನಿ ಪ್ರಿಯಾಂಕಾ ‘I just died in Your arms’ ಎಂದು ಕಮೆಂಟ್‌ ಮಾಡಿದ್ದಾರೆ. ಇದಕ್ಕೆ ನಿಕ್‌ ಕೂಡ ‘ನೀನು ನನ್ನ ಶಕ್ತಿʼ ಎಂಬ ಅರ್ಥದಲ್ಲಿ ಇಂಗ್ಲೀಷ್‌ನಲ್ಲಿ ರೀ ಕಮೆಂಟ್‌ ಮಾಡಿದ್ದಾರೆ. ಈ ಮೂಲಕ ತಮ್ಮ ದಾಂಪತ್ಯದಲ್ಲಿ ಯಾವುದೇ ಬಿರುಕಿಲ್ಲ. ತಾವು ಅನ್ಯೋನ್ಯವಾಗಿದ್ದೇವೆ ಎಂದು ಪ್ರಿಯಾಂಕಾ ಮತ್ತು ನಿಕ್‌ ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ ದಾಂಪತ್ಯದಲ್ಲಿನ ಬಿರುಕಿನ ವದಂತಿ ದೂರಾಗಿದೆ.

Previous articleಟ್ರೈಲರ್ | ನೆಟ್‌ಫ್ಲಿಕ್ಸ್‌ನಲ್ಲಿ ರವೀನಾ ಟಂಡನ್; ‘ಅರಣ್ಯಕ್’ ಸರಣಿಯ ಪೊಲೀಸ್ ಪಾತ್ರದಲ್ಲಿ ನಟಿ
Next articleವೆಬ್‌ ಸರಣಿಯಾಗಬೇಕಿದ್ದ ಕಂಟೆಂಟ್‌ ಸಿನಿಮಾ ಆಯ್ತು; ಹತ್ತು ವಿವಿಧ ಅವತಾರಗಳಲ್ಲಿ ನಟ ಶರಣ್

LEAVE A REPLY

Connect with

Please enter your comment!
Please enter your name here