ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ ಕಿರಿಯ ಸಹೋದರಿ ಪೂಜಾ ಕಣ್ಣನ್‌ ‘ಚಿಥಿರೈ ಸೆವ್ವಾನಂ’ ತಮಿಳು ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ತಂಗಿಗೆ ಶುಭಾಶಯ ಕೋರಿರುವ ಸಾಯಿ ಪಲ್ಲವಿ ಅವರೊಂದಿಗೆ ಬೆಳೆದ ದಿನಗಳನ್ನು ನೆನಪು ಮಾಡಿಕೊಂಡು ಇನ್‌ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಸಿಲ್ವಾ ನಿರ್ದೇಶನದ ‘ಚಿಥಿರೈ ಸೆವ್ವಾನಂ’ ಚಿತ್ರದೊಂದಿಗೆ ನಟಿ ಸಾಯಿ ಪಲ್ಲವಿ ಕಿರಿಯ ಸಹೊದರಿ ಪೂಜಾ ಕಣ್ಣನ್‌ ಸಿನಿಮಾ ಪ್ರವೇಶಿಸಿದ್ದಾರೆ. ಎರಡು ವರ್ಷದ ಹಿಂದಿನ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಕಥಾವಸ್ತು ಇಲ್ಲಿದೆ. ಸಮುದ್ರಖನಿ ಮತ್ತು ರೀಮಾ ಕಲ್ಲಿಂಗಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ZEE5 ಓಟಿಟಿಯಲ್ಲಿ ನೇರವಾಗಿ ಸ್ಟ್ರೀಮ್ ಆಗಿದೆ. ನಟಿ ಸಾಯಿ ಪಲ್ಲವಿ ತಮ್ಮ ಪ್ರೀತಿಯ ಸಹೋದರಿ ಪೂಜಾರನ್ನು  ಸಿನಿಮಾರಂಗಕ್ಕೆ ಸ್ವಾಗತಿಸಿ ಶುಭಾಶಯ ಕೋರಿದ್ದಾರೆ. “ನನ್ನ ಪಾಲಿಗೆ ಇದು ವಿಶೇಷ ದಿನ. ತುಂಟತನ ಮಾಡಿಕೊಂಡು ನನ್ನೊಂದಿಗೆ ಬೆಳೆದ ಮುದ್ದಿನ ತಂಗಿ ಪ್ರಬುದ್ಧ ನಟಿಯಾಗಿ ಕಾಣಿಸುತ್ತಿದ್ದಾಳೆ. ಆಕೆಯ ಚೊಚ್ಚಲ ಸಿನಿಮಾ ‘ಚಿಥಿರೈ ಸೆವ್ವಾನಂ’ ಸ್ಟ್ರೀಮ್ ಆಗುತ್ತಿದೆ. ನಿರ್ದಶಕ ಸಿಲ್ವಾ ಸರ್, ನಟ ಸಮುದ್ರಖನಿ ಸರ್‌ ಮತ್ತು ಚಿತ್ರತಂಡದ ಎಲ್ಲರಿಗೂ ಶುಭಾಶಯ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪತ್ರ ಬರೆದಿದ್ದಾರೆ.

“ಪಾತ್ರದಲ್ಲಿ ನೀನು ತಲ್ಲೀನಳಾಗಿ ಅಭಿನಯಿಸಿದರೆ ಪ್ರೇಕ್ಷಕರು ಖುಷಿಯಿಂದ ನಿನ್ನನ್ನು ಹರಸುತ್ತಾರೆ. ಸಕಾರಾತ್ಮಕ ಮನೋಭಾವದಿಂದ ಹೆಜ್ಜೆ ಹಾಕು. ನಿನ್ನ ಜರ್ನೀಯನ್ನು ಎಂಜಾಯ್ ಮಾಡು. ಈ ಎಲ್ಲಾ ಅನುಭವಗಳು ನಿನ್ನ ವ್ಯಕ್ತಿತ್ವವನ್ನು ಮತ್ತಷ್ಟು ಚೆಂದಗೆ ರೂಪಿಸುತ್ತವೆ. ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತಾ, ನಿನ್ನ ರಕ್ಷಣೆಗಿರುತ್ತೇನೆ” ಎನ್ನುವ ಒಕ್ಕಣಿ ಸಾಯಿ ಪಲ್ಲವಿ ಪತ್ರದಲ್ಲಿದೆ. ಮೂಲತಃ ಸ್ಟಂಟ್ ಕೊರಿಯೋಗ್ರಾಫರ್ ಆದ ಸಿಲ್ವಾ ಚೊಚ್ಚಲ ನಿರ್ದೇಶನದ ಸಿನಿಮಾ ‘ಚಿಥಿರೈ ಸೆವ್ವಾನಂ’. ತಂದೆ – ಮಗಳ (ಸಮುದ್ರಖನಿ ಮತ್ತು ಪೂಜಾ ಕಣ್ಣನ್) ಎಮೋಷನಲ್ ಡ್ರಾಮಾ ಸಿನಿಮಾ.

LEAVE A REPLY

Connect with

Please enter your comment!
Please enter your name here