ನಟ ಜ್ಯೂನಿಯರ್ ಎನ್‌ಟಿಆರ್‌ ನಿರೂಪಣೆಯ ‘ಎವರು ಮೀಲೊ ಕೋಟೀಶ್ವರುಲು’ ಕ್ವಿಜ್‌ ಶೋನ ಮಹೇಶ್ ಬಾಬು ಎಪಿಸೋಡ್‌ನ ಟೀಸರ್ ಬಿಡುಗಡೆಯಾಗಿದೆ. ತಮಾಷೆ, ಆಸಕ್ತಿಕರ ಮಾತುಕತೆಯ ಈ ಎಪಿಸೋಡ್‌ನ ನಿರೀಕ್ಷೆಯಲ್ಲಿದ್ದಾರೆ ಈ ಇಬ್ಬರು ನಟರ ಅಭಿಮಾನಿಗಳು.

ನಟ ಜ್ಯೂನಿಯರ್ ನಿರೂಪಣೆಯ ‘ಎವರು ಮೀಲೋ ಕೋಟೀಶ್ವರುಲು’ ಕ್ವಿಜ್‌ ಶೋ ಬಹು ಜನಪ್ರಿಯವಾಗಿದೆ. ಜೆಮಿನಿ ಟೀವಿಯಲ್ಲಿ ಮೂಡಿಬರುವ ಈ ಶೋನ ಸ್ಪೆಷಲ್ ಎಪಿಸೋಡ್‌ನಲ್ಲಿ ನಟ ಮಹೇಶ್ ಬಾಬು ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಈ ಎಪಿಸೋಡ್‌ನ ಟೀಸರ್ ಬಿಡುಗಡೆಯಾಗಿದ್ದು, ಜೆಮಿನಿ ಟೀವಿ ಇದನ್ನು ‘ಸೂಪರ್ ಟೈಗರ್ ಎಪಿಸೋಡ್‌’ ಎಂದು ಕರೆದಿದೆ. ಮಹೇಶ್ ಬಾಬು ಅವರನ್ನು ಜ್ಯೂ.ಎನ್‌ಟಿಆರ್‌ ಶೋಗೆ ಆಹ್ವಾನಿಸುವುದರೊಂದಿಗೆ ಪ್ರೊಮೋ ಶುರುವಾಗುತ್ತದೆ. ಇಬ್ಬರ ಆಲಂಗಿನದ ನಂತರ ಮಹೇಶ್ ಬಾಬು ಹಾಟ್ ಸೀಟ್‌ ಅಲಂಕರಿಸುತ್ತಾರೆ. ತಮ್ಮ ಸ್ಪೆಷಲ್ ಎಂಟ್ರಿಗೆ ಮಾಡಿದ ಅರೇಂಜ್‌ಮೆಂಟ್‌ಗೆ ಅವರು ಮನಸೋಲು ‘ಸ್ಪ್ಲೆಂಡಿಡ್‌’ ಎನ್ನುತ್ತಾರೆ. ಇಬ್ಬರು ಸ್ಟಾರ್ ಹೀರೋಗಳ ಮಧ್ಯೆಯ ಮಾತುಕತೆ ಆಸಕ್ತಿಕರವಾಗಿ ಇರುವುದಂತೂ ಹೌದು. ಈ ಸಂಚಿಕೆ ಪ್ರಸಾರವಾಗುವ ದಿನಾಂಕವಿನ್ನೂ ನಿಗದಿಯಾಗಿಲ್ಲ. ಈ ಮೊದಲು ಶೋನಲ್ಲಿ ಟಾಲಿವುಡ್ ತಾರೆಯರಾದ ರಾಮ್ ಚರಣ್ ತೇಜಾ, ಸಮಂತಾ, ರಾಜಮೌಳಿ, ಕೊರಟಾಲ ಶಿವಾ, ದೇವಿಶ್ರೀ ಪ್ರಸಾದ್, ಎಸ್‌.ತಮನ್‌ ಭಾಗವಹಿಸಿದ್ದರು.

https://youtu.be/DCwU8pNi9A8

LEAVE A REPLY

Connect with

Please enter your comment!
Please enter your name here