ಅಮಿತ್‌ ರೈ ನಿರ್ದೇಶನದ ವರ್ಷದ ಬಹುನಿರೀಕ್ಷಿತ ಹಿಂದಿ ಸಿನಿಮಾ ‘OMG 2’ ಟೀಸರ್‌ ಬಿಡುಗಡೆಯಾಗಿದೆ. ಅಕ್ಷಯ್‌ ಕುಮಾರ್‌, ಯಾಮಿ ಗೌತಮ್‌, ಪಂಕಜ್‌ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಆಗಸ್ಟ್‌ 11ರಂದು ಥಿಯೇಟರ್‌ಗೆ ಬರಲಿದೆ.

ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘OMG 2’ ಹಿಂದಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಇದು 2012ರ ‘OMG’ ಚಿತ್ರದ ಮುಂದುವರಿದ ಭಾಗ. ಪಾರ್ಟ್‌ 2 ಚಿತ್ರವನ್ನು ಅಮಿತ್ ರೈ ನಿರ್ದೇಶಿಸಿದ್ದಾರೆ. ಪಂಕಜ್ ತ್ರಿಪಾಠಿ, ಅಕ್ಷಯ್ ಕುಮಾರ್ ಮತ್ತು ಯಾಮಿ ಗೌತಮ್ ನಿರ್ವಹಿಸಿದ ಪಾತ್ರಗಳನ್ನು ಒಳಗೊಂಡ ಒಂದು ನೋಟವನ್ನು ಟೀಸರ್ ನೀಡುತ್ತದೆ. ಚಿತ್ರದಲ್ಲಿ ಯಾಮಿ ಗೌತಮ್ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಪಂಕಜ್ ತ್ರಿಪಾಠಿ ದೇವರಲ್ಲಿ ದೃಢ ನಂಬಿಕೆ ಹೊಂದಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಅಕ್ಷಯ್ ಕುಮಾರ್ ಅವರ ಪೋಟೋ ಬಿಡುಗಡೆ ಮಾಡಿದೆ. ಅಕ್ಷಯ್‌ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಟೀಸರ್‌ ವಿಡಿಯೋ ಮತ್ತು ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.

ಅಕ್ಷಯ್‌ರನ್ನು ಶಿವನ ರೂಪದಲ್ಲಿ ಕಾಣಬಹುದು. ಅಕ್ಷಯ್ ಅವರ ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್‌ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ರಮಾನಂದ್ ಸಾಗರ್‌ ಅವರ ರಾಮಾಯಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಅರುಣ್ ಗೋವಿಲ್ ಅವರು ಭಗವಂತ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಗಸ್ಟ್ 11ರಂದು ಸಿನಿಮಾ ಬಿಡುಗಡೆಯಾಗಲಿದೆ. ಕಾಂಜಿ ಲಾಲ್ಜಿ ಮೆಹ್ತಾ ಪಾತ್ರವನ್ನು ನಿರ್ವಹಿಸಿದ್ದ ಪರೇಶ್ ರಾವಲ್ ಮತ್ತು ಮಿಥುನ್ ಚಕ್ರವರ್ತಿ ಚಿತ್ರದ ಎರಡನೇ ಭಾಗದಲ್ಲಿ ನಟಿಸಿಲ್ಲ. ಅಕ್ಷಯ್ ಕುಮಾರ್ ಮತ್ತು ಗೋವಿಂದ್ ನಾಮದೇವ್ ಹೊರತುಪಡಿಸಿ, ಉಳಿದ ಎಲ್ಲಾ ಕಲಾವಿದರು ಹೊಸಬರೇ ಆಗಿದ್ದಾರೆ. ಈ ಚಿತ್ರದ ಬಿಡುಗಡೆಯ ದಿನವೇ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಸೀಕ್ವೆಲ್ ಚಿತ್ರ ‘ಗದರ್ 2’ ಬಿಡುಗಡೆಯಾಗಲಿದೆ.

Previous articleನಟನೆಯಿಂದ ವಿರಾಮ ಪಡೆಯಲಿರುವ ಸಮಂತಾ | ಮಯೋಸಿಟಿಸ್‌ಗೆ ಅಮೆರಿಕದಲ್ಲಿ ಚಿಕಿತ್ಸೆ
Next article‘LGM’ ಟ್ರೈಲರ್‌ | ಧೋನಿ ನಿರ್ಮಾಣದ ರೊಮ್ಯಾಂಟಿಕ್‌ ಕಾಮಿಡಿ ತಮಿಳು ಸಿನಿಮಾ

LEAVE A REPLY

Connect with

Please enter your comment!
Please enter your name here