ದುಲ್ಕರ್‌ ಸಲ್ಮಾನ್‌, ಅದಿತಿ ರಾವ್‌ ಹೈದರಿ ಮತ್ತು ಕಾಜಲ್‌ ಅಗರ್‌ವಾಲ್‌ ಅಭಿನಯದ ‘ಹೇ ಸಿನಾಮಿಕಾ’ ತಮಿಳು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಸಮಕಾಲೀನ ದಿನಗಳ ರೊಮ್ಯಾನ್ಸ್‌, ಮದುವೆ, ಪ್ರೀತಿಯ ಕತೆ ಹೇಳುವ ಸಿನಿಮಾ ಮಾರ್ಚ್‌ 3ರಂದು ತೆರೆಕಾಣಲಿದೆ.

ಕಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್‌ ಬೃಂದಾ ಚೊಚ್ಚಲ ನಿರ್ದೇಶನದ ರೊಮ್ಯಾಂಟಿಕ್‌ ಡ್ರಾಮಾ ‘ಹೇ ಸಿನಾಮಿಕಾ’ ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಮಲಯಾಳಿ ಯುವಕ ಯಾಹ್ಝಾನ್‌ (ದುಲ್ಕರ್‌ ಸಲ್ಮಾನ್‌) ತಮಿಳು ರೇಡಿಯೋ ಶೋವೊಂದರ ನಿರೂಪಕ. ಸಿಕ್ಕಾಪಟ್ಟೆ ಮಾತನಾಡುತ್ತಾನೆ ಎನ್ನುವುದು ಯಾಹ್ಝಾನ್‌ ಕುರಿತಂತೆ ಪತ್ನಿ ಮೋನಾ (ಅದಿತಿ ರಾವ್‌ ಹೈದರಿ) ದೂರು. ಪತಿ ದುಡಿಯಬೇಕು, ಪತ್ನಿ ಮನೆಯಲ್ಲಿರಬೇಕೆನ್ನುವ ಸಾಂಪ್ರದಾಯಕ ಕಟ್ಟುಪಾಡುಗಳಿಂದ ಆತ ಬಲುದೂರ. ‘ಹೌಸ್‌ ಹಸ್ಬೆಂಡ್‌’ ಆಗಿರಲು ಅವನಿಗೆ ಖುಷಿ. ಹೊರಗೆ ದುಡಿಯುತ್ತಾ ಮನೆ ನಿಭಾಯಿಸುವ ಪತ್ನಿಯಿಂದ ಅವನೇನೂ ಇನ್‌ಸೆಕ್ಯೂರ್‌ ಫೀಲ್‌ ಮಾಡುತ್ತಿಲ್ಲ. ಹೀಗಿರುವಾಗ ಇವರ ಬದುಕಿಗೆ ಸುಂದರ ಯುವತಿಯೊಬ್ಬಳ (ಕಾಜಲ್‌ ಅಗರ್‌ವಾಲ್‌) ಪ್ರವೇಶವಾಗುತ್ತದೆ. ಅಲ್ಲಿಂದ ಮುಂದೆ ತ್ರಿಕೋನ ಪ್ರೇಮದ ಕತೆ ಶುರು. ಹಾಗಾಗಿ “Love gets complicated this season,” ಎಂದು ಟ್ರೈಲರ್‌ ಟ್ವೀಟ್‌ ಮಾಡಿದ್ದಾರೆ ದುಲ್ಕರ್‌.‌ ’96’ ತಮಿಳು ಸಿನಿಮಾ ಖ್ಯಾತಿಯ ಗೋವಿಂದ್ ವಸಂತ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಹೀರೋ ದುಲ್ಕರ್‌ ಸಲ್ಮಾನ್‌ ಮೊದಲ ಬಾರಿ ತಮಿಳು ಹಾಡೊಂದನ್ನು ಹಾಡಿದ್ದಾರೆ. ಮಾರ್ಚ್‌ 3ರಂದು ‘ಹೇ ಸಿನಾಮಿಕಾ’ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Previous articleಮಲಯಾಳಂ ನಟ ಕೊಟ್ಟಾಯಂ ಪ್ರದೀಪ್‌ ನಿಧನ
Next articleಟೀಸರ್‌ | ವಿನಯ್‌ ರಾಜಕುಮಾರ್‌ ಗ್ಯಾಂಗ್‌ಸ್ಟರ್‌ ಡ್ರಾಮಾ ‘ಪೆಪೆ’

LEAVE A REPLY

Connect with

Please enter your comment!
Please enter your name here