ಕರಾವಳಿ ಮೂಲದ ರೂಪೇಶ್‌ ಶೆಟ್ಟಿ RJ, ಗಾಯಕ, ಮಾಡೆಲ್‌, ನಟ. ‘ಬಿಗ್‌ಬಾಸ್‌’ ಶೋ ನಂತರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯ್ತು. ಹೀಗಾಗಿಯೇ ಈಗ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರ ಅಭಿನಯದ ‘ಅಧಿಪತ್ರ’ ಸಿನಿಮಾ ತೆರೆಕಾಣಲು ಸಜ್ಜಾಗುತ್ತಿದ್ದು, ಚಿತ್ರತಂಡ ಈಗ ಟೀಸರ್‌ ರಿಲೀಸ್‌ಗೆ ದಿನಾಂಕ ನಿಗದಿ ಮಾಡಿದೆ.

ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಮೊದಲು ಟಿವಿ ಚಾನಲ್‌ವೊಂದರಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದರು. ನಂತರದಲ್ಲಿ ರೇಡಿಯೋ ಜಾಕಿಯಾಗಿ ಫೇಮಸ್‌ ಆದರು. ಮಾಡೆಲಿಂಗ್‌ ಜೊತೆಗೆ ಕನ್ನಡ ಹಾಗೂ ಕರಾವಳಿ ಸಿನಿಮಾಗಳಲ್ಲಿ ನಟನೆ ಸಹ ಮಾಡುತ್ತಿದ್ದಾರೆ. ಇಂತಹ ಬಹುಮುಖ ಪ್ರತಿಭೆ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಅಧಿಪತ್ರ. ಈಗಾಗಲೇ ಮೇಕಿಂಗ್ ಹಾಗೂ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ಸಿದ್ಧವಾಗುತ್ತಿರುವ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ.

ಜಾಹೀರಾತಿನ ದುನಿಯಾದಲ್ಲಿ ಕ್ರಿಯೇಟೀವ್‌ ಆಡ್ಸ್‌ ಮೂಲಕ ಗಮನ ಸೆಳೆದಿದ್ದ ಚಯನ್‌ ಶೆಟ್ಟಿ ಅಧಿಪತ್ರ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನ ಚಿತ್ರ. ರೂಪೇಶ್‌ ಶೆಟ್ಟಿಗೆ ನಾಯಕಿಯಾಗಿ ಕಿರುತೆರೆ ನಿರೂಪಕಿ ಹಾಗೂ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಹಾಸ್ಯ ಕಲಾವಿದೆ ಜಾಹ್ನವಿ ನಟಿಸಿದ್ದಾರೆ. ಇದೇ ತಿಂಗಳ 10ರಂದು ಲಹರಿ ಆಡಿಯೋದಲ್ಲಿ ‘ಅಧಿಪತ್ರ’ ಚಿತ್ರದ ಮೊದಲ ಝಲಕ್ ಹೊರ ಬೀಳಲಿದೆ. ಅಷ್ಟೆ ಅಲ್ಲ ಈ ಸಿನಿಮಾದ ಆಡಿಯೋ ಹಕ್ಕನ್ನು ಭಾರೀ ಮೊತ್ತಕ್ಕೆ ಲಹರಿ ಸಂಸ್ಥೆ ಖರೀದಿ ಮಾಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಸಿನಿಮಾವನ್ನು ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ಅವರು ನಿರ್ಮಿಸಿದ್ದಾರೆ. ‘ಕಾಂತಾರ’ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ಎಂಕೆ‌ ಮಠ, ದೀಪಕ್ ರೈ, ಅನಿಲ್ ಉಪ್ಪಾಲ್, ಕಾರ್ತಿಕ್ ಭಟ್, ಪ್ರಶಾಂತ್ ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here