ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆನ’ ಈ ವಾರ ತೆರೆಕಾಣಲಿದೆ. ನಾಯಕಿ ಪ್ರಧಾನ ಹಾರರ್‌ – ಥ್ರಿಲ್ಲರ್‌ ಚಿತ್ರವಿದು ಎನ್ನುತ್ತಾರೆ ಚಿತ್ರದ ನಿರ್ದೇಸಕ ಮನೋಜ್‌ ನಡಲುಮನೆ.

“ನಾನು ಈವರೆಗೂ ಈ ರೀತಿಯ ಪಾತ್ರ ಮಾಡಿಲ್ಲ. ನನಗೂ ಚಿತ್ರ ಒಪ್ಪಿಕೊಂಡಾಗ ಸ್ವಲ್ಪ ಭಯವಿತ್ತು. ಹೇಗೆ ಕಾಣುತ್ತೇನೋ ಎಂದು. ಈಗ ಆ ಭಯ ಹೋಗಿದೆ. ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆಯಿದೆ” ಎಂದರು ನಟಿ ಅದಿತಿ ಪ್ರಭುದೇವ. ಅವರೀಗ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ಹಿರೋಯಿನ್‌. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಾರರ್‌ – ಥ್ರಿಲ್ಲರ್‌ ಸಿನಿಮಾ ‘ಆನ’ ಈ ವಾರ ತೆರೆಕಾಣುತ್ತಿದೆ. ಕಳೆದವಾರ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿತ್ತು. “ಚಿತ್ರ ಉತ್ತಮವಾಗಿ ಮೂಡಿಬಂದಿದೆಯಾದರೂ ತೆಲುಗಿನ ದೊಡ್ಡ ಚಿತ್ರವೊಂದು ಬಿಡುಗಡೆಯಾಗುತ್ತಿರುವ ಕಾರಣ ಥಿಯೇಟರ್‌ ಸಮಸ್ಯೆ ಎದುರಾಗಿದೆ. ನನ್ನ ಊರಾದ ದಾವಣಗೆರೆಯಲ್ಲೇ ನಮ್ಮ ಚಿತ್ರಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ” ಎಂದರು ಚಿತ್ರದ ನಿರ್ದೇಶಕ ಮನೋಜ್ ಪಿ. ನಡಲುಮನೆ. ನಟ ಸುನೀಲ್‌ ಪುರಾಣಿಕ್‌ ಅವರು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಪೂಜಾ ವಸಂತಕುಮಾರ್‌ ನಿರ್ಮಾಣದ ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ, ನವೀನ್ ಧ್ವನಿ ವಿನ್ಯಾಸ, ಉದಯ್ ಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನವಿದೆ. ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಂಮ್, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಇತರರು ಚಿತ್ರದಲ್ಲಿ ಅಭಿನಯಿಸಿದ್ಧಾರೆ.

LEAVE A REPLY

Connect with

Please enter your comment!
Please enter your name here