ಜಿ ವಿ ಪ್ರಕಾಶ್ ಕುಮಾರ್ ಅಭಿನಯದ ವೈಜ್ಞಾನಿಕ ತಮಿಳು ಸಿನಿಮಾ ‘ಅಡಿಯೇ’ ನಾಳೆ (ಆಗಸ್ಟ್ 25) ಬಿಡುಗಡೆಯಾಗಲಿದೆ. ವಿಘ್ನೇಶ್ ಕಾರ್ತೀಕ್ ನಿರ್ದೇಶನದ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ವೆಂಕಟ್ ಪ್ರಭು, ಗೌರಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿಘ್ನೇಶ್ ಕಾರ್ತೀಕ್ ನಿರ್ದೇಶನದ ಸೈಂಟಿಫಿಕ್ ಫಿಕ್ಷನ್ ತಮಿಳು ಸಿನಿಮಾ ‘ಅಡಿಯೇ’ ನಾಳೆ (ಆಗಸ್ಟ್ 25) ತೆರೆಕಾಣುತ್ತಿದ್ದು, ಚಿತ್ರದ Juke box ಬಿಡುಗಡೆಯಾಗಿದೆ. ಜಿ ವಿ ಪ್ರಕಾಶ್ ಕುಮಾರ್, ವೆಂಕಟ್ ಪ್ರಭು ಮತ್ತು ಗೌರಿ ಜಿ. ಕಿಶನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಜಿ ವಿ ಪ್ರಕಾಶ್ ಕುಮಾರ್ ಅವರ ‘ಬ್ಯಾಚುಲರ್’ ಚಿತ್ರದ ‘ಅಡಿಯೇ’ ಹಾಡಿನಿಂದ ಅಳವಡಿಸಿಕೊಳ್ಳಲಾಗಿದೆ. ಈ ಚಿತ್ರಕಥೆಯು ಯುವಕನೊಬ್ಬನ ಸುತ್ತ ಸುತ್ತುತ್ತದೆ. ಬೈಕ್ ಅಪಘಾತಕ್ಕೆ ಒಳಗಾಗುವ ಚಿತ್ರದ ನಾಯಕ ಕೋಮಾ ಸ್ಥಿತಿಗೆ ತಲುಪಿರುತ್ತಾನೆ. ಇವನಿಗೆ ಪ್ರಜ್ಞೆ ಬಂದು ವಾಸ್ತವ ಅರಿಯುವಷ್ಟರಲ್ಲಿ MS ಧೋನಿ RCB ತಂಡದ ನಾಯಕನಾಗಿರುತ್ತಾನೆ. ವಿಜಯ್ ನಟನೆಯ ‘ಯೋಹಾನ್’ ಚಿತ್ರವು 150 ದಿನಗಳನ್ನು ಪೂರೈಸಿರುತ್ತದೆ. ಅಜಿತ್ ಆಸ್ಟ್ರೇಲಿಯಾದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಫಾರ್ಮುಲಾ 1 ಅನ್ನು ಗೆದ್ದಿರುತ್ತಾರೆ. ಹೀಗೆ ಅನೇಕ ಬದಲಾವಣೆಗಳು ಸಂಭವಿಸಿರುತ್ತವೆ.
ಈ ಚಿತ್ರದ ನಿರ್ದೇಶಕರು ಈ ಹಿಂದೆ ‘ಯೆಂಡ ತಲೈಯಿಲಾ ಯೆನ್ನ ವೆಕ್ಕಲಾ’ (2018) ಮತ್ತು ‘ತಿಟ್ಟಂ ಇರಂದು’ (2021) ಚಿತ್ರಗಳನ್ನು ಮಾಡಿದ್ದರು. ಇದೀಗ ‘ಅಡಿಯೇ’ ಸಿನಿಮಾದ ಮೂಲಕ ಕಾಲ್ಪನಿಕ ವೈಜ್ಞಾನಿಕ ಮತ್ತು ವಾಸ್ತವಗಳ ಸ್ಪರ್ಶ ಹೊಂದಿರುವ ಹಾಸ್ಯ ಪ್ರೇಮಕಥೆ ರಚಿಸಿದ್ದಾರೆ. ಪ್ರಭಾ ಪ್ರೇಮ್ ಕುಮಾರ್ ನಿರ್ಮಾಣದ ಚಿತ್ರಕ್ಕೆ ಪ್ರಭಾಕರನ್ ಸಂಗೀತ, ಗೋಕುಲ್ ಬಿನೋಯ್ ಛಾಯಾಗ್ರಹಣವಿದೆ. ಇದೇ ಆಗಸ್ಟ್ 25ರಂದು ಸಿನಿಮಾ ಬಿಡುಗಡೆಯಾಗಲಿದೆ.