ಬಿಡುಗಡೆಗೆ ಸಜ್ಜಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕ್ರಿಮಿನಲ್’. ಮಿಸ್ಟ್ರಿ ಥ್ರಿಲ್ಲರ್ ಸಬ್ಜೆಕ್ಟ್‌ನ ಈ ತಮಿಳು ಚಿತ್ರದ ನಾಯಕ ಮಹೇಶ್. ‘ಐ ಆ್ಯಮ್ ಇನ್ ಲವ್’ ಸಿನಿಮಾ ಮೂಲಕ ನಾಯಕನಟನಾಗಿ ಎಂಟ್ರಿ ಕೊಟ್ಟಿದ್ದ ಮಹೇಶ್ ಅವರ ಎರಡನೇ ಚಿತ್ರವಿದು.

ನಾಗಾರ್ಜುನ ಹೀರೋ ಆಗಿ ನಟಿಸಿದ್ದ ‘ಕ್ರಿಮಿನಲ್‌’ ಸಿನಿಮಾ 1994ರಲ್ಲಿ ತೆರೆಗೆ ಬಂದಿತ್ತು. ಮಹೇಶ್‌ ಭಟ್ ಸಿನಿಮಾ ನಿರ್ದೇಶಿಸಿದ್ದರು. ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗಿದ್ದ ಚಿತ್ರದಲ್ಲಿ ರಮ್ಯಕೃಷ್ಣ ಮತ್ತು ಮನೀಶಾ ಕೊಯಿರಾಲಾ ನಾಯಕಿಯರಾಗಿ ನಟಿಸಿದ್ದರು. ಈ ಚಿತ್ರದ ಮೂಲಕ ನಾಗಾರ್ಜುನ ಹಿಂದಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಇದೀಗ ಅದೇ ಶೀರ್ಷಿಕೆಯ ತಮಿಳು ಚಿತ್ರ ಸಿದ್ಧವಾಗುತ್ತಿದೆ. ಮೂಲ ತಮಿಳು ಚಿತ್ರವಾದರೂ ಪ್ಯಾನ್ ಇಂಡಿಯಾ ಸಿನಿಮಾ ಆಗಿ ನಿರ್ಮಾಪಕರು ಚಿತ್ರವನ್ನು  ಪ್ರೊಜೆಕ್ಟ್ ಮಾಡುತ್ತಿದ್ದಾರೆ. ಇತ್ತೀಚಿಗೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಕಾಲೈಪುಲ್ಲಿ ಎಸ್. ತನು ಅವರಿಂದ ಚಿತ್ರತಂಡ ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡಿಸಿತ್ತು.

ಇದೀಗ ದಕ್ಷಿಣ ಸಿನಿಮಾರಂಗದ ಸ್ಟಾರ್ ನಟ ವಿಜಯ್ ಸೇತುಪತಿಯಿಂದ ‘ಕ್ರಿಮಿನಲ್’ ಚಿತ್ರದ ಹೀರೋ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿಸಿದೆ. ವಿಜಯ್ ಸೇತುಪತಿ ತಮ್ಮ ಟ್ವಿಟರ್ ಅಕೌಂಟ್ ಮೂಲಕ ‘ಕ್ರಿಮಿನಲ್’ ಚಿತ್ರದ ಹೀರೋನ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಸೀಟಿನ ತುದಿಯಂಚಿನಲ್ಲಿ ಕೂರಿಸೋ ಕಥೆ, ಚಿತ್ರಕಥೆ ಸಿನಿಮಾದಲ್ಲಿರುತ್ತದೆ ಎನ್ನುತ್ತಾರೆ ನಿರ್ದೇಶಕ ಆರ್ಮುಗಂ. ತಮಿಳು, ಮಲಯಾಳಂ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಇರುವ ಇವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಕಿರಣ್ ದೊರ್ನಾಲ ಕ್ಯಾಮೆರಾ ವರ್ಕ್, ಆಪಲ್ ಪೈನಾಪಲ್ ಸಂಗೀತ, ಪವನ್ ಗೌಡ ಸಂಕಲನ ‘ಕ್ರಿಮಿನಲ್’ ಚಿತ್ರಕ್ಕಿದೆ. ಚಿತ್ರೀಕರಣ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಸಿನಿಮಾ ಪ್ರಚಾರಕಾರ್ಯವನ್ನು ಭರ್ಜರಿಯಾಗಿ ಆರಂಭಿಸಿದ್ದು, ಸದ್ಯದಲ್ಲೇ ಚಿತ್ರದ ಸ್ಪೆಷಲ್ ಪೋಸ್ಟರ್‌ವೊಂದನ್ನು ಸ್ಪೆಷಲ್ ಆಗಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದಲ್ಲಿ ನಾಯಕಿಯರಾಗಿ ಜಾನ್ವಿ ಹಾಗೂ ಫೆಸ್ಸಿ ಮಹೇಶ್ ಅವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕಮಲ ಆರ್ಟ್ಸ್ ಬ್ಯಾನರ್‌ನಲ್ಲಿ ಕ್ರಿಮಿನಲ್ ಸಿನಿಮಾ ನಿರ್ಮಾಣವಾಗಿದ್ದು, ಡಿಸೆಂಬರ್ ಕೊನೆ ಅಥವಾ ಜನವರಿಯಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ತಯಾರಾಗುತ್ತಿದೆ.

LEAVE A REPLY

Connect with

Please enter your comment!
Please enter your name here