ಚಂದ್ರಮೋಹನ್‌ ನಿರ್ದೇಶನದಲ್ಲಿ ‘ಫಾರೆಸ್ಟ್‌’ ಅಡ್ವೆಂಚರ್‌ – ಕಾಮಿಡಿ ಸಿನಿಮಾ ಘೋಷಣೆಯಾಗಿದೆ. ಚಿಕ್ಕಣ್ಣ-ಅನೀಶ್, ಗುರುನಂದನ್, ರಂಗಾಯಣ ರಘು ಮತ್ತು ಅರ್ಚನಾ ಕೊಟ್ಟಿಗೆ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಶೇ 80ರಷ್ಟು ಚಿತ್ರೀಕರಣ ಕಾಡಿನಲ್ಲಿ ನಡೆಯಲಿದೆ ಎನ್ನುವುದು ವಿಶೇಷ.

ಈ ಹಿಂದೆ ‘ಡಬ್ಬಲ್ ಇಂಜಿನ್’, ‘ಬ್ರಹ್ಮಚಾರಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್‌ ಅವರ ಹೊಸ ಸಿನಿಮಾ ‘ಫಾರೆಸ್ಟ್‌’ ಘೋಷಣೆಯಾಗಿದೆ. ರಾಮನವಮಿ ಶುಭಾಶಯ ಕೋರುವ ಮೂಲಕ ಚಿತ್ರತಂಡ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಇದೊಂದು ಫಾರೆಸ್ಟ್‌ – ಅಡ್ವೆಂಚರ್‌ – ಕಾಮಿಡಿ ಸಿನಿಮಾ ಎನ್ನಲಾಗಿದ್ದು, ಚಿಕ್ಕಣ್ಣ-ಅನೀಶ್, ಗುರುನಂದನ್, ರಂಗಾಯಣ ರಘು ಮತ್ತು ಅರ್ಚನಾ ಕೊಟ್ಟಿಗೆ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಸಿನಿಮಾದ ಶೇ 80ರಷ್ಟು ಚಿತ್ರೀಕರಣ ಕಾಡಿನಲ್ಲೇ ನಡೆಯಲಿದೆ.

‘ಇದೊಂದು ವಿಶಿಷ್ಟ ಕತೆ. ಬಹುಪಾಲು ಚಿತ್ರೀಕರಣ ಕಾಡಿನಲ್ಲೇ ನಡೆಯಲಿದೆ. ಫನ್‌ ಜೊತೆ ಥ್ರಿಲ್ಲಿಂಗ್‌ ರೈಡ್‌!’ ಎಂದು ತಮ್ಮ ಸಿನಿಮಾ ಕುರಿತು ಹೇಳುತ್ತಾರೆ ನಿರ್ದೇಶಕ ಚಂದ್ರಮೋಹನ್‌. ಎನ್‌ಎಂಕೆ ಸಿನಿಮಾಸ್ ಬ್ಯಾನರ್‌ನಡಿ ಕಾಂತರಾಜು ಚಿತ್ರ ನಿರ್ಮಿಸುತ್ತಿದ್ದಾರೆ. ಅವರಿಗಿದು ಚೊಚ್ಚಲ ಚಿತ್ರ. ಸಿನಿಮಾರಂಗದ ಮೇಲಿನ ಆಸಕ್ತಿಯಿಂದ ಫಾರೆಸ್ಟ್ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ವಿ ರವಿಶಂಕರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಧರ್ಮವೀರ್ – ವೀರ್ ಸಮರ್ಥ್ ಸಂಗೀತ ನಿರ್ದೇಶನ ಚಿತ್ರಕ್ಕೆ ಇರಲಿದೆ. ಸದ್ಯ ಟೈಟಲ್ ರಿವೀಲ್ ಮಾಡಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಉಳಿದ ತಾರಾಬಳಗದ ಮಾಹಿತಿ ನೀಡಲಿದೆ.

LEAVE A REPLY

Connect with

Please enter your comment!
Please enter your name here