ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ‘ಕೂರ್ಮಾವತಾರ’ (2011) ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಇದು ‘ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ’ ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದೆ. ಮಹಾತ್ಮಾ ಗಾಂಧೀಜಿ ತತ್ವಾದರ್ಶಗಳ ಈ ಸಿನಿಮಾ ಮಾಡಲು ಕಾಸರವಳ್ಳಿಯವರಿಗೆ ಪ್ರೇರಣೆ ಏನು? ಗಾಂಧಿ ಜಯಂತಿಯ ಸಂದರ್ಭದಲ್ಲಿ ಒಂದು ನೆನಕೆ.

ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಹೇಳಿದಂತೆ..

“ಸಾಹಿತಿ ಕುಂ.ವೀರಭದ್ರಪ್ಪ ಅವರ ಅದೇ ಶೀರ್ಷಿಕೆಯ ಸಣ್ಣ ಕತೆಯನ್ನು ಆಧರಿಸಿದ ಸಿನಿಮಾ ಕೂರ್ಮಾವತಾರ. ಸಿನಿಮಾ ಮಾಡುವ ಸುಮಾರು ಹತ್ತು ವರ್ಷಕ್ಕೂ ಮುನ್ನ ಈ ಕತೆಯನ್ನು ನಾನು ಓದಿದ್ದೆ. ಅವರ ರಚನೆಯ ಕತೆಗಳ ಪೈಕಿ ಇದು ತೀರಾ ಭಿನ್ನವಾದ ಕತೆ ಎಂದೆನಿಸಿತ್ತು. ಆ ಕತೆಯಲ್ಲಿ ನಾಲ್ವರು ಗಾಂಧಿ ಬರುತ್ತಾರೆ. ಅವರಲ್ಲಿ ಯಾರು ನಿಜವಾದ ಗಾಂಧಿ? ಹಾಗೆ ನೋಡಿದರೆ ಅಲ್ಲಿ ನಾಲ್ವರು ಗಾಂಧಿಯೂ ನಿಜವೇ. ಜನರು ಅವರವರ ಭಾವಕ್ಕೆ ಸರಿ ಎನಿಸಿದ ರೀತಿ ಸ್ವೀಕರಿಸುತ್ತಾರೆ. ಎನ್ನುವ ಡಯಲಮ್ಮಾ ನನಗೆ ತುಂಬಾ ಕಾಡಿತು.

ಇನ್ನೊಂದೆಡೆ, ಅಂದು ಅಣ್ಣಾ ಹಜಾರೆ ಅವರ ಚಳುವಳಿ ಬಹು ಜೋರಾಗಿತ್ತು. ಜನರು ಹಜಾರೆ ಅವರನ್ನು ‘ಇಂದಿನ ಗಾಂಧಿ’ ಎಂದರು. ನನ್ನಲ್ಲಿ ಕೂಡ ಗಾಂಧೀಜಿ ಅವರ ತತ್ವಾದರ್ಶಗಳ ಮರುಚಿಂತನೆಯ ಹೊಳಹು ಹರಿಯಿತು. ಗಾಂಧೀಜಿ ಅವರ ನೋಷನ್ ಆಫ್‌ ಪ್ರೀಡಂ ಬೇರೇನೇ ಇತ್ತು. ಅವರ ರಾಷ್ಟ್ರೀಯತೆ ಅಂದರೆ ಸೌಹಾರ್ಧತೆ, ಪ್ರೀತಿ, ಸಹಜೀವನ… ಹೀಗೆ. ಈಗ ರಾಷ್ಟ್ರೀಯತೆ ಅಂದರೆ ಕೂಗಾಟ, ಕಿರುಚಾಟ ಎನ್ನುವಂತಾಗಿದೆ. ಗಾಂಧೀಜಿ ಅವರ ಪ್ರಕಾರ ಎಲ್ಲಾ ಕೆಲಸಗಳಿಗೂ ಒಂದು ವೃತ್ತಿ ಧರ್ಮ ಇರುತ್ತದೆ. ವೈದ್ಯ, ಶಿಕ್ಷಕ, ಇಂಜಿನಿಯರ್, ಚಿತ್ರನಿರ್ದೇಶಕ… ಹೀಗೆ ಯಾರೇ ಆದರೂ ಶ್ರದ್ಧೆಯಿಂದ ಕೆಲಸ ಮಾಡಬೇಕು. ಅದು ಅವರ ವೃತ್ತಿಧರ್ಮ. ಈಗ ವೃತ್ತಿಧರ್ಮ ಹಿಂದುಳಿದಿದೆ. ಹಣಕಾಸು ಎಲ್ಲವನ್ನೂ ಮಾನಿಟರ್ ಮಾಡ್ತಾ ಇದೆ. ಪ್ರಲೋಭನೆಗಳಿಗೆ ಒಳಗಾದ ಜನರು ಕನ್ಸೂಮರ್‌ ಜಗತ್ತಿನಲ್ಲೇ ಸುಖ ಕಾಣುತ್ತಿದ್ದಾರೆ. ಇದು ಖಂಡಿತ ಗಾಂಧಿ ಕಲ್ಪಿಸಿಕೊಂಡ ಜಗತ್ತು ಅಲ್ಲ. ಈ ಪ್ರಸ್ತುತ ಸಂದರ್ಭದಲ್ಲಿ ಗಾಂಧಿ ಐಡಿಯಾಲಜಿಯನ್ನು, ಗಾಂಧಿಯನ್ ವಿಷನ್‌ ಅನ್ನು ಹೇಳಲು ಸಾಧ್ಯವೇ ಎಂದು ಯೋಚಿಸಿದಾಗ ರೂಪುಗೊಂಡಿದ್ದು ‘ಕೂರ್ಮಾವತಾರ’”.

LEAVE A REPLY

Connect with

Please enter your comment!
Please enter your name here