ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ‘ತಡಪ್‌’ ಹಿಂದಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಮಿಲನ್ ಲುಥಾರಿಯಾ ನಿರ್ದೇಶನದ ಇದು ‘RX 100’ ಯಶಸ್ವೀ ತೆಲುಗು ಸಿನಿಮಾದ ರೀಮೇಕ್‌.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್‌ ಶೆಟ್ಟಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದು, ಅವರ ‘ತಡಪ್‌’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ತಾರಾ ಸುತಾರಿಯಾ ಚಿತ್ರದ ನಾಯಕಿ. ಮೂರು ನಿಮಿಷಗಳ ಈ ಟ್ರೈಲರ್‌ನಲ್ಲಿ ‘ಒಳ್ಳೆಯ ಯುವಕನೊಬ್ಬ ಪ್ರೀತಿಗಾಗಿ ವೈಲೆಂಟ್‌ ಆಗುವ’ ಎಂದಿನ ಸ್ಟೀರಿಯೋಟಿಪಿಕಲ್‌ ಹೀರೋ ಆಗಿ ಅಹಾನ್ ಗೋಚರಿಸುತ್ತಾರೆ. ಟ್ರೈಲರ್‌ನ ಪ್ರತೀ ಸೀನ್‌ಗಳಲ್ಲೂ ಅಹಾನ್ ಕಾಣಿಸುತ್ತಾರೆ. ಲವ್‌, ರೊಮ್ಯಾನ್ಸ್‌, ಎಮೋಷನ್‌, ಆಕ್ಷನ್‌… ಹೀಗೆ ಬಾಲಿವುಡ್‌ನ ಟಿಪಿಕಲ್ ಹೀರೋ ಆಗಿಯೇ ತೋರುತ್ತಾರೆ.

ಸಿನಿಮಾಗೆ ಪ್ರೀತಂ ಸಂಗೀತ ಸಂಯೋಜಿಸಿದ್ದು, ಇದು ದಶಕದ ಹಿಂದಿನ ನಾಸ್ಟಾಲ್ಜಿಕ್‌ ಫೀಲ್ ಕೊಡುತ್ತದೆ. ಹಿರಿಯ ನಟ ಅಮಿತಾಭ್ ಬಚ್ಚನ್‌ ನಿರೂಪಣೆಯ ‘ಕೌನ್ ಬನೇಗಾ ಕರೋಡ್‌ಪತಿ’ ಶೋನಲ್ಲಿ ಇತ್ತೀಚೆಗೆ ಸುನೀಲ್ ಶೆಟ್ಟಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಆಗ ಅವರ ಪುತ್ರ ಅಹಾನ್ ಕುರಿತು ಪ್ರಸ್ತಾಪವಾಯ್ತು. ನಂತರದ ದಿನಗಳಲ್ಲಿ ಅಮಿತಾಭ್ ಬಚ್ಚನ್‌, “ಅಹಾನ್‌… ನೀನು ಚಿಕ್ಕವನಿದ್ದಾಗಿನಿಂದಲೂ ನಾನು ನೋಡುತ್ತಾ ಬಂದಿದ್ದೇನೆ. ಈಗ ಸಿನಿಮಾ ಜಗತ್ತಿಗೆ ನೀನು ಪ್ರವೇಶಿಸುತ್ತಿರುವುದು ಖುಷಿಯ ಸಂಗತಿ. ನಿನ್ನ ಚೊಚ್ಚಲ ಸಿನಿಮಾ ‘ತಡಪ್‌’ ಯಶಸ್ವಿಯಾಗಲಿ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಹಾಕಿದ್ದಾರೆ.

Previous articleಶಿವಣ್ಣನ ಫ್ಯಾನ್ ಆಗಿ ಸಿನಿಮಾ ನೋಡ್ತೀನಿ; ‘ಭಜರಂಗಿ 2’ ನಿರೀಕ್ಷೆಯಲ್ಲಿ ನಟ ಯಶ್
Next article‘ಭಜರಂಗಿ 2’ ವೃತ್ತಿ ಬದುಕಿನ ಸ್ಪೆಷಲ್ ಸಿನಿಮಾ: ಶಿವರಾಜಕುಮಾರ್

LEAVE A REPLY

Connect with

Please enter your comment!
Please enter your name here