ಪುತ್ರ ಆರ್ಯನ್‌ ಡ್ರಗ್ಸ್‌ ಪ್ರಕರಣದಿಂದ ಎದೆಗುಂದಿರುವ ನಟ ಶಾರುಖ್ ಖಾನ್‌ರಿಗೆ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಸಂಜಯ್ ಗುಪ್ತಾ, ಗಾಯಕ ಮಿಕಾ ಸಿಂಗ್‌ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾರುಖ್‌ ವಿಚಾರವಾಗಿ ಬಾಲಿವುಡ್‌ ‘ಜಾಣ ಮೌನಾಚರಣೆ’ ಮಾಡುತ್ತಿದೆ ಎನ್ನುವುದು ಗುಪ್ತಾ ಹೇಳಿಕೆ.

ಬಾಲಿವುಡ್‌ ನಿರ್ದೇಶಕ, ನಿರ್ಮಾಪಕ ಸಂಜಯ್ ಗುಪ್ತಾ ಅವರು ನಟ ಶಾರುಖ್ ಪರ ಮಾತನಾಡಿದ್ದಾರೆ. ಪುತ್ರ ಆರ್ಯನ್‌ ಡ್ರಗ್ಸ್ ಪ್ರಕರಣದಿಂದ ಕುಗ್ಗಿಹೋಗಿರುವ ಶಾರುಖ್‌ ಅವರಿಗೆ ಸಂಜಯ್ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರು ‘ಚಲನಚಿತ್ರ ರಂಗದ ಜಾಣ ಕುರುಡು ಮತ್ತು ಮೌನ’ವನ್ನು ಟೀಕಿಸಿದ್ದಾರೆ. ‘ಆರ್ಯನ್ ಖಾನ್‌ ಬಂಧನದ ಕುರಿತು ಚಿತ್ರೋದ್ಯಮ ಜಾಣ್ಮೆಯ ಮೌನ ವಹಿಸಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ಅವರು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ. “ಶಾರುಖ್ ಖಾನ್ ಚಿತ್ರರಂಗದಲ್ಲಿ ಸಾವಿರಾರು ಜನರಿಗೆ ಉದ್ಯೋಗ ಮತ್ತು ಜೀವನೋಪಾಯವನ್ನು ನೀಡಿದ್ದಾರೆ ಮತ್ತು ಅದನ್ನು ಮುಂದುವರಿಸುತ್ತಿದ್ದಾರೆ.

ಚಲನಚಿತ್ರೋದ್ಯಮದ ಪ್ರತಿಯೊಂದು ವಿಷಯದಲ್ಲೂ ಅವರು ಯಾವಾಗಲೂ ಮುಂದೆ ನಿಲ್ಲುತ್ತಾರೆ. ಆದರೆ, ಅವರ ಬಿಕ್ಕಟ್ಟಿನ ಕ್ಷಣದಲ್ಲಿ ಅದೇ ಚಿತ್ರರಂಗದ ಚಾಣಾಕ್ಷ ಮೌನವು ನಾಚಿಕೆಗೇಡಿನ ಸಂಗತಿ’ ಎಂದು ಟ್ವೀಟಿಸಿದ್ದಾರೆ ಸಂಜಯ್‌. “ಆಜ್ ಉಸ್ಕಾ ಬೇಟಾ ಹೈ, ಕಲ್ ಮೇರಾ ಯಾ ತುಮ್ಹಾರಾ ಹೋಗಾ…ತಬ್ ಭೀ ಇಸ್ಸಿ ಬುಜ್ಡಲ್ಲಿ ಸೆ ಚುಪ್ ರಹೋಗೆ” ಎಂದು ಕೇಳಿದ್ದಾರೆ ಸಂಜಯ್. ಇನ್ನು ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡುತ್ತಾ ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದ ನಂತರ ಶಾರುಖ್ ಖಾನ್ ಬೆಂಬಲಕ್ಕೆ ಬರದ ಬಾಲಿವುಡ್ ಸೆಲೆಬ್ರಿಟಿಗಳನ್ನು ಗಾಯಕ ಮಿಕಾ ಸಿಂಗ್ ಕೂಡಾ ಟೀಕಿಸಿದ್ದಾರೆ. “ನೀವು ಹೇಳಿದ್ದು ಸಂಪೂರ್ಣವಾಗಿ ಸರಿ ಬ್ರದರ್,ಅವರೆಲ್ಲರೂ ಈ ನಾಟಕವನ್ನು ಸುಮ್ಮನೇ ನೋಡುತ್ತಿದ್ದಾರೆ ಮತ್ತು ಅವರಿಂದ ಒಂದೇ ಒಂದು ಮಾತನ್ನೂ ಹೇಳಲು ಸಾಧ್ಯವಾಗಿಲ್ಲ. ನಾನು ಶಾರೂಖ್ ಜೊತೆಗೆ ಇದ್ದೇನೆ. ಆರ್ಯನ್ ಖಾನ್‌ಗೆ ಜಾಮೀನು ನೀಡಬೇಕು. ನನ್ನ ಪ್ರಕಾರ ಇಂಡಸ್ಟ್ರಿಯಲ್ಲಿ ಎಲ್ಲರ ಮಕ್ಕಳೂ ಒಂದು ಬಾರಿ ಜೈಲಿಗೆ ಹೋಗಿ ಬಂದ ನಂತರ ಇವರು ಒಗ್ಗಟ್ಟು ಪ್ರದರ್ಶಿಸುತ್ತಾರೆ ಅನ್ನಿಸುತ್ತದೆ” ಎಂದು ಮಿಕಾ ಸಿಂಗ್ ಸೆಲೆಬ್ರಿಟಿಗಳ ಕಾಲೆಳಿದಿದ್ದಾರೆ.

Previous articleಇನ್ವೆಸ್ಟಿಗೇಟೀವ್ ಥ್ರಿಲ್ಲರ್ ‘ಬೃಂದಾ’; ತ್ರಿಷಾ ವೆಬ್ ಸರಣಿ ಶೂಟಿಂಗ್ ಶುರು
Next articleಅಪ್ಪ, ಪತಿ ಇಬ್ಬರಿಗೂ ಪ್ರಶಸ್ತಿ; ಸಂಭ್ರಮ ಹಂಚಿಕೊಂಡ ಐಶ್ವರ್ಯಾ

LEAVE A REPLY

Connect with

Please enter your comment!
Please enter your name here