ಕಮಲ ಹಾಸನ್‌ ಪುತ್ರಿ ಅಕ್ಷರಾ ಹಾಸನ್‌ ಅಭಿನಯದ ‘ಅಚ್ಚಂ ಮದಂ ನಾನಂ ಪಯಿರಪ್ಪು’ ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ರಾಜಾ ರಾಮಮೂರ್ತಿ ನಿರ್ದೇಶನದ ಸಿನಿಮಾ ಮಾರ್ಚ್‌ 25ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

‘ಅಚ್ಚಂ ಮದಂ ನಾನಂ ಪಯಿರಪ್ಪು’ ತಮಿಳು ಸಿನಿಮಾ ಮಾರ್ಚ್‌ 25ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದ್ದು, ಇಂದು ಟ್ರೈಲರ್‌ ಬಿಡುಗಡೆಯಾಗಿದೆ. ರಾಜಾ ರಾಮಮೂರ್ತಿ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ಅಕ್ಷರಾ ಹಾಸನ್‌ ನಟಿಸಿದ್ದಾರೆ. coming-of-age drama ಜಾನರ್‌ನ ಸಿನಿಮಾ ಕೆಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. HBO ಸೌತ್‌ ಏಷ್ಯನ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌, ಬಾಸ್ಟನ್‌ನಲ್ಲಿ ಆಯೋಜನೆಗೊಂಡಿದ್ದ ಕ್ಯಾಲಿಡೊಸ್ಕೋಪ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌, ಚಿಕಾಗೋದ ಸೌತ್‌ ಏಷ್ಯನ್‌ ಫಿಲ್ಮ್‌ ಫೆಸ್ಟಿವಲ್‌, ಅಟ್ಲಾಂಟಾ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌, ತಸ್ವೀರ್‌ ಸೌತ್‌ ಏಷ್ಯನ್‌ ಫಿಲ್ಮ್‌ ಫೆಸ್ಟಿವಲ್‌, ಕೆನಡಾದ ಮೊಸೈಕ್‌ ಇಂಟರ್‌ನ್ಯಾಷನಲ್‌ ಸೌತ್‌ ಏಷ್ಯನ್‌ ಫಿಲ್ಮ್‌ ಫೆಸ್ಟಿವಲ್‌ಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.

ಸಂಪ್ರದಾಯಸ್ಥ ಕುಟುಂಬದ ಟೀನೇಜ್‌ ಹೆಣ್ಣುಮಗಳ ಲೈಂಗಿಕ ಬಯಕೆಗಳ ಸುತ್ತ ಹೆಣೆದ ಕಥಾವಸ್ತು. “ನಿರ್ದೇಶಕ ರಾಜಾ ಅವರು ಕತೆ ಹೇಳಿದಾಕ್ಷಣವೇ ಈ ಪ್ರಾಜೆಕ್ಟ್‌ನಲ್ಲಿ ನಾನಿರಬೇಕು ಎಂದುಕೊಂಡೆ. ಇದೊಂದು ತಿಳಿ ಹಾಸ್ಯದ, ವ್ಯಕ್ತಿಸ್ವಾತಂತ್ರ್ಯ, ಹೆಣ್ಣುಮಕ್ಕಳ ಬಯಕೆಗಳ ಕುರಿತು ಹೇಳುವ Slice of life ಸಿನಿಮಾ. ಹೆಣ್ಣುಮಗಳು ತನ್ನ ಲೈಂಗಿಕ ಬಯಕೆ ಮತ್ತು ಕುಟುಂಬದವರ ಒತ್ತಡಗಳನ್ನು ಹೇಗೆ ಬ್ಯಾಲೆನ್ಸ್‌ ಮಾಡುತ್ತಾಳೆ ಎನ್ನುವ ಕುರಿತು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಹದಿಹರೆಯದವರು ನನ್ನ ಪಾತ್ರದೊಂದಿಗೆ ತಮ್ಮನ್ನು ಹೋಲಿಕೆ ಮಾಡುತ್ತಾರೆ” ಎಂದು ತಮ್ಮ ಸಿನಿಮಾ, ಪಾತ್ರದ ಕುರಿತು ಮಾತನಾಡುತ್ತಾರೆ ಅಕ್ಷರಾ. ಪಾಪ್‌ ಸಿಂಗರ್‌ ಉಷಾ ಉತ್ತುಪ್‌, ಅಂಜನಾ ಜಯಪ್ರಕಾಶ್‌, ಮಾಲ್ಗುಡಿ ಶುಭಾ, ಜಾನಕಿ ಸಬೇಷ್‌, ಸುರೇಶ್‌ ಚಂದ್ರ ಮೆನನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾರ್ಚ್‌ 25ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

https://twitter.com/Iaksharahaasan/status/1505815683149742084

LEAVE A REPLY

Connect with

Please enter your comment!
Please enter your name here