ರಜನೀಕಾಂತ್‌ ಅಭಿನಯದ ‘ತಲೈವಾ 170’ ನೂತನ ತಮಿಳು ಸಿನಿಮಾ ತಂಡಕ್ಕೆ ನಟಿ ರಿತಿಕಾ ಸಿಂಗ್‌ ಸೇರ್ಪಡೆಗೊಂಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣದ ಈ ಚಿತ್ರವನ್ನು T J ಜ್ಞಾನವೇಲ್‌ ನಿರ್ದೇಶಿಸಲಿದ್ದಾರೆ.

ರಜನೀಕಾಂತ್ ಅವರ ‘ತಲೈವಾ 170’ ಚಿತ್ರದಲ್ಲಿ ನಟಿ ರಿತಿಕಾ ಸಿಂಗ್ ಸೇರ್ಪಡೆಗೊಳ್ಳುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಎಲ್ಲಾ ವದಂತಿಗಳಿಗೆ ತೆರೆ ಎಳೆದ Lyca Productions ಈ ಯೋಜನೆಯಲ್ಲಿ ರಿತಿಕಾ ಪಾಲ್ಗೊಳ್ಳುವುದನ್ನು ದೃಢಪಡಿಸಿದೆ. ರಿತಿಕಾ ಸಿಂಗ್ ಅವರು ಮಾಜಿ ಮಿಶ್ರ ಮಾರ್ಷಲ್ ಆರ್ಟ್ಸ್‌ ಅಥ್ಲೀಟಿ ಆಗಿದ್ದು, ಅವರು ತಮ್ಮ ನಟನಾ ವೃತ್ತಿಜೀವನದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಕ್ರೀಡೆಯಿಂದ ದೂರ ಉಳಿದಿದ್ದಾರೆ. ‘ಇರುದಿ ಸುಟ್ರು’ (ತಮಿಳು) ಬಾಕ್ಸಿಂಗ್ ಚಿತ್ರದ ಮೂಲಕ ತಮ್ಮ ಮೊದಲ ನಟನಾ ವೃತ್ತಿಯನ್ನು ಪ್ರಾರಂಭಿಸಿದ ರಿತಿಕಾ, 2016ರ ಕ್ರೀಡಾ ಚಿತ್ರದಲ್ಲಿ ಅತ್ಯತ್ತಮ ಹೋರಾಟದ ಕೌಶಲ್ಯ ಹೊಂದಿರುವ ಘೆಟ್ಟೋದ ಹುಡುಗಿಯೊಬ್ಬಳ ಪಾತ್ರವನ್ನು ನಿರ್ವಹಿಸಿದ್ದರು. ಸುಧಾ ಕೊಂಗರ ಬರೆದು ನಿರ್ದೇಶಿಸಿದ ಈ ಚಿತ್ರದ ಹೀರೋ ಆರ್ ಮಾಧವನ್.

ಇದಲ್ಲದೆ ರಿತಿಕಾ ‘ಆಂಡವನ್ ಕಡತಲೈ’, ‘ಗುರು’, ‘ಶಿವಲಿಂಗ’, ‘ಓ ಮೈ ಕಡವುಲೆ’ ಮತ್ತು ‘ಕೊಲೈ’ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ದುಲ್ಕರ್ ಸಲ್ಮಾನ್ ನಟಿಸಿದ ಮಲಯಾಳಂ ಗ್ಯಾಂಗ್‌ಸ್ಟರ್ ಸಿನಿಮಾ ‘ಕಿಂಗ್ ಆಫ್ ಕೋಥಾ’ ಚಿತ್ರದಲ್ಲಿ ಈ ಹಿಂದೆ ಸ್ಪೆಷಲ್‌ ಡ್ಯಾನ್ಸ್‌ ನಂಬರ್‌ನಲ್ಲಿ ಕಾಣಿಸಿಕೊಂಡಿದ್ದರು. ‘ತಲೈವರ್‌ 170’ ಸಿನಿಮಾವನ್ನು Lyca Productions ನಿರ್ಮಿಸಲಿದ್ದು, T J ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಇವರ ಚೊಚ್ಚಲನಿರ್ದೇಶನದ ಸೂರ್ಯ ನಟನೆಯ ‘ಜೈ ಭೀಮ್’ ಸಿನಿಮಾ ಜನಮನ್ನಣೆ ಗಳಿಸಿತ್ತು.

LEAVE A REPLY

Connect with

Please enter your comment!
Please enter your name here