ಬರುಣ್‌ ಸೋಬ್ತಿ, ಸುವೀಂದರ್‌ ಸಿಂಗ್‌ ನಟನೆಯ ‘ಕೊಹ್ರಾ’ ಕ್ರೈಂ – ಥ್ರಿಲ್ಲರ್‌ ಸರಣಿ ಇಂದಿನಿಂದ (ಜುಲೈ 15) Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ. NRI ಯುವಕ, ಯುವತಿಯ ಹತ್ಯೆಗಳ ಸುತ್ತ ಹೆಣೆದ ಕಥಾನಕ. ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಅವರ Clean Slate Films Private Limited ಈ ಸರಣಿ ನಿರ್ಮಿಸಿದೆ.

ಬರುಣ್ ಸೋಬ್ತಿ ಅಭಿನಯದ ‘ಕೊಹ್ರಾ’ (Kohrra) ಹಿಂದಿ ಸರಣಿ ಇಂದಿನಿಂದ (ಜುಲೈ 15) Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಪಂಜಾಬ್‌ನ ಜಾಗ್ರಾನಾದಲ್ಲಿನ ಹೊಲಗಳಲ್ಲಿ ಯುವಕ ಮತ್ತು ಯುವತಿಯ ಮೃತದೇಹಗಳ ಪತ್ತೆಯೊಂದಿಗೆ ಸರಣಿ ಆರಂಭವಾಗುತ್ತದೆ. ಇವರ ಕುರುಹುಗಳನ್ನು ಪತ್ತೆ ಹಚ್ಚುವ ಪೊಲೀಸರ ಕಾರ್ಯಾಚರಣೆ ಸರಣಿಯ ಕಥಾವಸ್ತು. ಮೃತರನ್ನು NRI (Non Resident Indian) ಎಂದು ಗುರುತಿಸಲಾಗುತ್ತದೆ. ಕೊಲೆಗಳ ಸುತ್ತ ನಡೆವ ಸಂಪೂರ್ಣ ತನಿಖೆಯನ್ನು ಸರಣಿ ಒಳಗೊಂಡಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಹೊಸ ಸರಣಿಯು ಕೊಲೆಗಾರನನ್ನು ಬೇಟೆಯಾಡುವ ಘಟನೆಗಳ ಕಥಾಹಂದರ. ಸುದೀಪ್ ಶರ್ಮಾ ಸರಣಿಗೆ ಕಥೆ ಬರೆದಿದ್ದು, ಗುಂಜಿತ್ ಚೋಪ್ರಾ ಮತ್ತು ಡಿಗ್ಗಿ ಸಿಸೋಡಿಯಾ ಚಿತ್ರಕಥೆ ರಚಿಸಿದ್ದಾರೆ. ಸುವೀಂದರ್ ಸಿಂಗ್, ಹರ್ಲೀನ್ ಸೇಥಿ, ಮನೀಶ್ ಚೌಧರಿ, ವರುಣ್ ಬಡೋಲಾ, ರಾಚೆಲ್ ಶೆಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಒಡೆತನದ Clean Slate Films Private Limited ಸರಣಿ ನಿರ್ಮಿಸಿದೆ.

LEAVE A REPLY

Connect with

Please enter your comment!
Please enter your name here