‘ಬಂಗಾರರಾಜುʼ ಚಿತ್ರದ ಟೀಸರ್‌ ಅನ್ನು ನಟ ನಾಗಾರ್ಜುನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗ ನಾಗಚೈತನ್ಯರ ಹುಟ್ಟುಹಬ್ಬವಿಂದು. ‘ಬಂಗಾರ ರಾಜುʼ ಸಿನಿಮಾದ ಟೀಸರ್‌ ಬಿಡುಗಡೆಗೊಳಿಸುವ ಮೂಲಕ ಮಗನ ಹುಟ್ಟುಹಬ್ಬಕ್ಕೆ ಅವರು ಶುಭಕೋರಿದ್ದಾರೆ.

ಹಿರಿಯ ನಟ ನಾಗಾರ್ಜುನ ಅವರು ತಮ್ಮ ‘ಬಂಗಾರು ರಾಜು’ ಸಿನಿಮಾದಲ್ಲಿನ ಪುತ್ರ ನಾಗಚೈತನ್ಯರ ಲುಕ್ ರಿವೀಲ್ ಮಾಡಿದ್ದಾರೆ. ಇಂದು ನಾಗಚೈತನ್ಯರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪುತ್ರನ ಲುಕ್ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಟ್ವಿಟರ್‌ನಲ್ಲಿ ಸಿನಿಮಾದ ಟೀಸರ್‌ ಹಂಚಿಕೊಂಡ ನಾಗಾರ್ಜುನ ಮಗನನ್ನು ‘ಚಿನ್ನ ಬಂಗಾರರಾಜುʼ ಎಂದು ಕರೆದುಕೊಂಡಿದ್ದಾರೆ. ಇದು ‘ಸೊಗ್ಗಾಡೆ ಚಿನ್ನನಾಯಿನʼ ಚಿತ್ರದ ಮುಂದುವರೆದ ಭಾಗವಾಗಿದೆ. ಈ ಸಿನಿಮಾದ ನಾಗಾರ್ಜುನರ ಬಂಗಾರ ರಾಜು ಪಾತ್ರದಲ್ಲಿ ಅವರ ಮಗ ನಾಗ ಚೈತನ್ಯ ಕಾಣಿಸಿಕೊಂಡಿದ್ದಾರೆ. ಥೇಟ್‌ ಅಪ್ಪನನ್ನೇ ಹೋಲುವ ಪಾತ್ರವಿದು. ಅಪ್ಪನ ಸ್ಟೈಲ್‌ ಅನ್ನೇ ಮಗ ಯಥಾವತ್ತಾಗಿ ಅನುಕರಣೆ ಮಾಡಿದ್ದಾರೆ. ಅಪ್ಪನ ತದ್ರೂಪಿ ಎನ್ನುತ್ತಿದ್ದಾರೆ ಅಭಿಮಾನಿಗಳು.

‘ಬಂಗಾರ ರಾಜುʼ ಸಿನಿಮಾ ತಂಡ ಶೂಟಿಂಗ್‌ಗೆಂದು ಈಗ ಮೈಸೂರಿನಲ್ಲಿದೆ. ಮೈಸೂರಿನ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ಜೋರಾಗಿ ಸಾಗಿದೆ. ನಾಗಾರ್ಜುನ ಮತ್ತು ನಾಗ ಚೈತನ್ಯರ ಜೋಡಿಯ ಎರಡನೇ ಚಿತ್ರವಿದು. ‘ಮನಂʼ ತಂದೆ ಮಗ ಜೋಡಿಯ ಮೊದಲನೇ ಚಿತ್ರ. ‘ಬಂಗಾರರಾಜುʼ ಸಿನಿಮಾಗೆ ಅನೂಪ್‌ ರುಬೆನ್ಸ್‌ಸಂಗೀತ ಸಂಯೋಜನೆ ಇದೆ. ರಮ್ಯಕೃಷ್ಣ, ಕೃತಿಶೆಟ್ಟಿ, ಚಲಪತಿರಾವ್‌, ರಾವ್‌ ರಮೇಶ್‌, ಬ್ರಹ್ಮಾಜಿ, ವೆನ್ನೆಲ ಕಿಶೋರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಜೀ ಸ್ಟುಡಿಯೋ ಸಂಸ್ಥೆ ನಿರ್ಮಿಸಿರುವ ಚಿತ್ರವನ್ನು ಕಲ್ಯಾಣ್‌ ಕೃಷ್ಣ ನಿರ್ದೇಶಿಸಿದ್ದಾರೆ.

Previous article‘ಸಖತ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್; ವೇದಿಕೆಯಲ್ಲಿ ಗಣೇಶ್ – ಪ್ರೇಮ್ ಹಾಡಿನ ಜುಗಲ್ ಬಂದಿ!
Next articleಟ್ರೈಲರ್ | ಶಾಹೀದ್ ಕಪೂರ್ ‘ಜೆರ್ಸಿ’; ಇದು ನಾನಿ ಅಭಿನಯನ ತೆಲುಗು ಸಿನಿಮಾ ರೀಮೇಕ್

LEAVE A REPLY

Connect with

Please enter your comment!
Please enter your name here