ದಾಂಪತ್ಯಕ್ಕೆ ಕಾಲಿಟ್ಟ ಟಾಲಿವುಡ್‌ ತಾರೆಯರಾದ ವರುಣ್‌ ತೇಜ್‌ ಮತ್ತು ಲಾವಣ್ಯ ತ್ರಿಪಾಠಿ ಅವರಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇಟಲಿಯಲ್ಲಿ ನಡೆದ ಇವರ ವಿವಾಹ ಮಹೋತ್ಸವದಲ್ಲಿ ಕೊನಿಡೇಲ ಮತ್ತು ಅಲ್ಲು ಕುಟುಂಬದ ತಾರೆಯರು ಪಾಲ್ಗೊಂಡಿದ್ದರು.

ತೆಲುಗು ತಾರೆಯರಾದ ವರುಣ್‌ ತೇಜ್‌ ಮತ್ತು ಲಾವಣ್ಯ ತ್ರಿಪಾಠಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಟಸ್ಕನಿಯ ಬೊರ್ಗೊ ಸ್ಯಾನ್‌ ಫೆಲಿಸ್‌ನಲ್ಲಿ ನಡೆದ ಸಮಾರಂಭದಲ್ಲಿ ಸಂಪ್ರದಾಯದ ಪ್ರಕಾರ ಇಬ್ಬರೂ ಸತಿ – ಪತಿಯಾಗಿದ್ದಾರೆ. ನವವಿವಾಹಿತ ದಂಪತಿಯ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮೆಗಾ ಸ್ಟಾರ್‌ ಕುಟುಂಬದ ಕುಡಿ ವರುನ್‌ ತೇಜ್‌ ಅವರಿಗೆ ಮೆಗಾ ಸ್ಟಾರ್‌ ಹೀರೋಗಳ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಕೊನಿಡೇಲ ಕುಟುಂಬದ ಕುಡಿ ನಾಗೇಂದ್ರ ಬಾಬು ವಿವಾಹದಲ್ಲಿ ಕೊನಿಡೇಲ ಮತ್ತು ಅಲ್ಲು ಕುಟುಂಬದ ಬಹಳಷ್ಟು ಸದಸ್ಯರು ಪಾಲ್ಗೊಂಡಿದ್ದರು. ಚಿರಂಜೀವಿ, ಪವನ್‌ ಕಲ್ಯಾಣ್‌, ರಾಮ್‌ ಚರಣ್‌, ಅಲ್ಲು ಅರ್ಜುನ್‌, ಅಲ್ಲು ಸಿರೀಶ್‌, ಸಾಯಿ ತೇಜ್‌, ಪಂಜಾ ವೈಷ್ಣವ್‌ ತೇಜ್‌ ಸೇರಿದಂತೆ ದೊಡ್ಡ ತಾರಾಬಳಗ ಸೇರಿತ್ತು.

ವರುಣ್‌ ತೇಜ್‌ ಮತ್ತು ಲಾವಣ್ಯ ಅವರ ಮೊದಲ ಭೇಟಿ ಆಗಿದ್ದು 2017ರಲ್ಲಿ. ಮೊದಲು ಸ್ನೇಹಿತರಾಗಿದ್ದವರು ನಂತರ ಪ್ರೇಮಿಗಳಾದರು. ಇನ್ನು ವರುಣ್‌ ತೇಜ್‌ ಟಾಲಿವುಡ್‌ನ ಭರವಸೆಯ ಯುವನಟ. ತೆಲುಗು ಸಿನಿಮಾ ಮತ್ತು ಕಿರುತೆರೆ ನಟ ನಾಗೇಂದ್ರ ಬಾಬು ಅವರ ಪುತ್ರ. ‘ಮುಕುಂದ’ (2014) ತೆಲುಗು ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಮುಂದೆ ಫಿದಾ, ಕಂಚೆ, ಲೋಫರ್‌, F3: ಫನ್‌ ಅಂಡ್‌ ಫ್ರಸ್ಟ್ರೇಷನ್‌ ಚಿತ್ರಗಳಲ್ಲಿ ಸಿನಿಪ್ರಿಯರಿಗೆ ಚಿರಪರಿಚಿತರಾದರು. ನಟಿ ಲಾವಣ್ಯ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ದೂಸುಕೇಳ್ತಾ’ (ತೆಲುಗು), ‘ಭ್ರಮ್ಮನ್‌’, ‘ಹ್ಯಾಪಿ ಬರ್ತ್‌ಡೇ’ (ತಮಿಳು) ಅವರ ಜನಪ್ರಿಯ ಚಿತ್ರಗಳು.

LEAVE A REPLY

Connect with

Please enter your comment!
Please enter your name here