ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ಹಿಂದಿ ಅವತರಣಿಕೆ ಉತ್ತರ ಭಾರತದಲ್ಲಿ 80 ಕೋಟಿ ರೂಪಾಯಿ ಗಳಿಕೆ ಮಾಡಿತು. ಈ ದೊಡ್ಡ ಯಶಸ್ಸಿನ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ಅವರ ‘ಅಲಾ ವೈಕಂಠಪುರಮುಲು’ ಹಿಟ್‌ ಸಿನಿಮಾವನ್ನು ಅಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಸುಕುಮಾರ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ ನಟಿಸಿರುವ ‘ಪುಷ್ಪ’ ತೆಲುಗು ಸಿನಿಮಾ 2021ರ ಭಾರತದ ಹಿಟ್‌ ಸಿನಿಮಾ ಎನಿಸಿಕೊಂಡಿತು. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಉತ್ತರ ಭಾರತದಲ್ಲಿ ಬಿಡುಗಡೆಯಾದ ಹಿಂದಿ ಅವತರಣಿಕೆಯೊಂದೇ 80 ಕೋಟಿ ಗಳಿಸಿತು. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್‌ ಅವರ ‘ಅಲಾ ವೈಕಂಠಪುರಮುಲು’ ತೆಲುಗು ಸಿನಿಮಾದ ಹಿಂದಿ ಅವತರಣಿಕೆಯನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಆ ಚಿತ್ರದ ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ. ಅಲ್ಲು ಅರ್ಜುನ್‌ ಅವರಿಗೆ ಹಿಂದಿ ಬೆಲ್ಟ್‌ನಲ್ಲಿ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆ ಬಗ್ಗೆ ಉತ್ಸುಕರಾಗಿರುವ ನಿರ್ಮಾಪಕರು ಎರಡು ವರ್ಷದ ಹಿಂದಿನ ಚಿತ್ರವನ್ನು ಜನವರಿ 26ರ ಗಣರಾಜ್ಯೋತ್ಸವದಂದು ಅಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಕೋವಿಡ್‌ನಿಂದಾಗಿ ಹಿಂದಿ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿದೆ. ಅಲ್ಲಿನ ಥಿಯೇಟರ್‌ಗಳಲ್ಲಿ ಈಗ ಪ್ರದರ್ಶನಕ್ಕೆ ಸಿನಿಮಾಗಳಿಲ್ಲ. ‘ಅಲಾ ವೈಕಂಠಪುರಮುಲು’ ಈ ಜಾಗ ತುಂಬಲಿದೆ ಎನ್ನುವುದು ನಿರ್ಮಾಪಕರ ಯೋಜನೆ. ‘ಅಲಾ ವೈಕಂಠಪುರಮುಲು’ ಸಿನಿಮಾ 2020ರ ಜನವರಿ 12 ರಂದು ತೆರೆಕಂಡಿತ್ತು. ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್‌ರಿಗೆ ನಾಯಕಿಯಾಗಿ ಪೂಜಾ ಹೆಗಡೆ ನಟಿಸಿದ್ದರು. 2020ರ ಮಾರ್ಚ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆದಾಗಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಭಾರತದಲ್ಲಿ ಮಾತ್ರವಲ್ಲದೆ ಕೀನ್ಯಾ, ಮಲೇಷ್ಯಾ, ಮಾಲ್ಡೀವ್ಸ್‌, ಮಾರಿಷಸ್‌, ಒಮನ್‌, ಶ್ರೀಲಂಕಾದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಪ್ರಸ್ತುತ ಉತ್ತರ ಭಾರತದಲ್ಲಿ ಅಲ್ಲು ಅರ್ಜುನ್‌ ಜನಪ್ರಿಯತೆ ಸಿನಿಮಾಗೆ ನೆರವಾಗಬಹುದು.

LEAVE A REPLY

Connect with

Please enter your comment!
Please enter your name here