‘ಜೈಲರ್‌’ ಸಿನಿಮಾ ಚಿತ್ರೀಕರಣಕ್ಕಾಗಿ ಜೈಸಲ್ಮೇರ್‌ಗೆ ಬಂದ ರಜನೀಕಾಂತ್‌ರಿಗೆ ಹೋಟೆಲ್‌ ಸಿಬ್ಬಂದಿಯಿಂದ ಲುಂಗಿ ಡ್ಯಾನ್ಸ್‌ ಸ್ವಾಗತ ಸಿಕ್ಕಿದೆ. ತಮ್ಮ ನೆಚ್ಚಿನ ನಟನ ಕುರಿತಾದ ಈ ಅಭಿಮಾನದ ವೀಡಿಯೋವನ್ನು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ರಜನೀಕಾಂತ್‌ ಅವರಿಗೆ ಭಾರತದಾದ್ಯಂತ ಅಭಿಮಾನಿ ಬಳಗವಿದೆ. ಅವರೀಗ ‘ಜೈಲರ್‌’ ಸಿನಿಮಾ ಚಿತ್ರೀಕರಣಕ್ಕೆಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿದ್ದಾರೆ. ವಾಸ್ತವ್ಯಕ್ಕೆಂದು ಹೋಟೆಲ್‌ಗೆ ಬರುತ್ತಿದ್ದಂತೆ ಅಲ್ಲಿನ ಸಿಬ್ಬಂದಿಯಿಂದ ಅವರಿಗೆ ವಿಶಿಷ್ಟ ರೀತಿಯ ಸ್ವಾಗತ ಸಿಕ್ಕಿದೆ. ‘ಚೆನ್ನೈ ಎಕ್ಸ್‌ಪ್ರೆಸ್‌’ ಸಿನಿಮಾದ ಲುಂಗಿ ಡ್ಯಾನ್ಸ್‌ನೊಂದಿಗೆ ಹೋಟೆಲ್‌ ಸಿಬ್ಬಂದಿ ರಜನೀ ಅವರನ್ನು ಬರಮಾಡಿಕೊಂಡಿದ್ದಾರೆ. ಡ್ಯಾನ್ಸ್‌ ಜೊತೆಗೆ ‘ತಲೈವಾ’ ಎನ್ನುವ ಘೋಷಣೆಗಳನ್ನು ಕೂಗಿದ್ದು, ರಜನೀಕಾಂತ್‌ ಅಭಿಮಾನಿಗಳು ಈ ವೀಡಿಯೋವನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ‘ಜೈಲರ್‌’ ಚಿತ್ರದಲ್ಲಿ ರಜನೀಕಾಂತ್‌ ಅವರು ಮುತ್ತುವೇಲ್‌ ಪಾಂಡಿಯನ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಕನ್ನಡ ನಟ ಶಿವರಾಜಕುಮಾರ್‌, ಮೋಹನ್‌ ಲಾಲ್‌, ರಮ್ಯಕೃಷ್ಣನ್‌, ಯೋಗಿ ಬಾಬು, ವಿನಾಯಕನ್‌ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಏಪ್ರಿಲ್‌ 14ರಂದು ‘ಜೈಲರ್‌’ ಬಿಡುಗಡೆಯಾಗಲಿದೆ.

Previous articleನೈಜ ಘಟನೆ ಆಧಾರಿತ ಶೋಷಿತ ಸಮುದಾಯದ ಕಥಾನಕ ‘ಪಾಲಾರ್’
Next articleಭಾವವೆಂಬ ಹೂವು ಅರಳಿ…; ಮರೆಯಾದ ಮೇರು ಗಾಯಕಿ ವಾಣಿ ಜಯರಾಂ

LEAVE A REPLY

Connect with

Please enter your comment!
Please enter your name here