ರಜನೀಕಾಂತ್‌ – ರಮ್ಯಕೃಷ್ಣ ಅಭಿನಯದ ‘ಪಡೆಯಪ್ಪ’ ಸಿನಿಮಾ ಮರುಬಿಡುಗಡೆಯಾಗಲಿದೆ. ಕೆ ಎಸ್‌ ರವಿಕುಮಾರ್‌ ನಿರ್ದೇಶನದ ಈ ಬ್ಲಾಕ್‌ ಬಸ್ಟರ್‌ ಸಿನಿಮಾ 1999ರಲ್ಲಿ ತೆರೆಕಂಡಿತ್ತು. ಎ ಆರ್‌ ರೆಹಮಾನ್‌ ಸಂಗೀತ ಚಿತ್ರಕ್ಕಿದೆ. ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.

1999ರಲ್ಲಿ ಬಿಡುಗಡೆಯಾಗಿದ್ದ ರಜನೀಕಾಂತ್ ಅಭಿನಯದ ‘ಪಡೆಯಪ್ಪ’ ಸಿನಿಮಾ ಮರುಬಿಡುಗಡೆಯಾಗಲಿದೆ. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಕೆಲವು ವಿಂಟೇಜ್ ಚಲನಚಿತ್ರಗಳಾದ ಕಮಲ್ ಹಾಸನ್ ಅವರ ‘ನಾಯಗನ್’ ಮತ್ತು ‘ಆಳವಂದನ್’, ರಜಿನೀಕಾಂತ್ ಅವರ ‘ಮುತ್ತು’ ಸೇರಿದಂತೆ ಹಲವು ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ‘ಮುತ್ತು’ ಚಿತ್ರದ ಮರು ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕರಾದ ಕೆ ಎಸ್ ರವಿಕುಮಾರ್ ಅವರು ತಮ್ಮ ಚಿತ್ರ ‘ಪಡೆಯಪ್ಪ’ ಕೂಡ ಶೀಘ್ರದಲ್ಲೇ ಮರುಬಿಡುಗಡೆಗಳ ಪಟ್ಟಿಗೆ ಸೇರಿಕೊಳ್ಳಲಿದೆ ಎಂದು ಖಚಿತಪಡಿಸಿದ್ದಾರೆ. ತಮಿಳುನಾಡಿನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಸಿನಿಮಾದ ಮರು ಬಿಡುಗಡೆಗೆ ಯೋಜಿಸಲಾಗಿದೆ.

ತಯಾರಕರು ಬಿಡುಗಡೆ ದಿನಾಂಕ ಮತ್ತು ಇತರ ವಿವರಗಳನ್ನು ಮರು ರಚನೆಯ ಕಾರ್ಯಗಳು ಮುಗಿದ ನಂತರ ಪ್ರಕಟಿಸಲಿದ್ದಾರೆ. ವರದಿಗಳ ಪ್ರಕಾರ ಸಿನಿಮಾ ಜನವರಿಯಲ್ಲಿ ಮರು ಬಿಡುಗಡೆಯಾಗಲಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ‘ಪಡೆಯಪ್ಪ’ ಸಿನಿಮಾದಲ್ಲಿ ರಮ್ಯಕೃಷ್ಣ, ಸೌಂದರ್ಯಾ, ಶಿವಾಜಿ ಗಣೇಶನ್‌, ಅಬ್ಬಾಸ್, ಲಕ್ಷ್ಮೀ, ಪ್ರಕಾಶ್‌ ರಾಜ್‌, ನಾಜರ್‌, ಸಿತಾರಾ, ಸತ್ಯಪ್ರಿಯಾ, ಮೋಹನ್‌ ರಾಮನ್‌, ಅನು ಮೋಹನ್‌, ಅರವಿಂದ್‌ ಆಕಾಶ್‌, ಸೆಂತಲಿಲ್‌, ಮನ್ಸೋರ್‌ ಅಲಿ ಖಾನ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾಗೆ ಎ ಆರ್‌ ರೆಹಮಾನ್‌ ಸಂಗೀತವಿದೆ.

LEAVE A REPLY

Connect with

Please enter your comment!
Please enter your name here