ಬಾಲಿವುಡ್‌ನ ಸ್ಟಾರ್‌ ಹೀರೋಗಳಲ್ಲೊಬ್ಬರಾದ ಅಕ್ಷಯ್‌ ಕುಮಾರ್‌ apparel brand ಮೂಲಕ ಫ್ಯಾಷನ್‌ ಜಗತ್ತಿಗೆ ಕಾಲಿಟ್ಟಿದ್ದಾರೆ. ಅವರ ‘Force IX’ ಬ್ರ್ಯಾಂಡೆಡ್‌ ವಸ್ತ್ರದಂಗಡಿಯ ನೂತನ ಮಳಿಗೆ ಬೆಂಗಳೂರಿನಲ್ಲಿ ಆರಂಭವಾಗಿದೆ. ಈ ಕುರಿತು ಅಕ್ಷಯ್‌ ಟ್ವೀಟ್‌ ಮಾಡಿದ್ದಾರೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಒಡೆತನದ apparel brand ‘Force IX’ ನೂತನ ಮಳಿಗೆ ಬೆಂಗಳೂರಿನಲ್ಲಿ ಆರಂಭವಾಗಿದೆ. ಇಂದು ಅಕ್ಷಯ್‌, ‘Namaskara Bengaluru 🙏🏻 With a lot of excitement we’ve taken our second step, a step closer to you… @ForceIXofficial is now open in your city!’ ಎಂದು ಟ್ವೀಟ್‌ ಮಾಡಿದ್ದಾರೆ. ನಟ ಅಕ್ಷಯ್‌ Maniish Mandhana ಜೊತೆಗೂಡಿ ಕಳೆದ ವರ್ಷ ನವೆಂಬರ್‌ನಲ್ಲಿ Force IX ಆರಂಭಿಸಿದ್ದರು. ಬಾಲಿವುಡ್‌ ತಾರೆಯರಾದ ಅನುಷ್ಕಾ ಶರ್ಮಾ, ಸೈಫ್‌ ಅಲಿ ಖಾನ್‌, ಸೋಹಾ ಅಲಿ ಖಾನ್‌, ಸೋನಂ ಕಪೂರ್‌, ರಿಯಾ ಕಪೂರ್‌ ಒಡೆತನದ ಬ್ರ್ಯಾಂಡೆಡ್‌ ವಸ್ತ್ರದಂಗಡಿಗಳಿವೆ. ನಟ ಅಕ್ಷಯ್‌ ಕುಮಾರ್‌ ಈ ಪಟ್ಟಿಗೆ ಹೊಸತಾಗಿ ಸೇರ್ಪಡೆಗೊಂಡಿದ್ದಾರೆ. ರೂಪದರ್ಶಿಗಳೊಂದಿಗೆ ಸ್ವತಃ ತಾವೂ ಕೂಡ ತಮ್ಮ ಬ್ರ್ಯಾಂಡ್‌ಗೆ ಮಾಡೆಲ್‌ ಆಗಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಅಕ್ಷಯ್‌, ‘Time for the big reveal…my passion project, my brand and the name is FORCE IX. Engineered with emotion ❤ Coming Soon!’ ಎನ್ನುವ ಸಂದೇಶದೊಂದಿಗೆ ತಮ್ಮ ನೂತನ ಪ್ರಾಜೆಕ್ಟ್‌ ಕುರಿತು ಮೊದಲ ಬಾರಿ ಘೋಷಣೆ ಮಾಡಿದ್ದರು. ಉತ್ತಮ ಗುಣಮಟ್ಟದ ಬ್ರ್ಯಾಂಡ್‌ನೊಂದಿಗೆ ಜನರ ಫ್ಯಾಷನ್‌ ಪ್ರೀತಿಯನ್ನು ಇಮ್ಮಡಿಗೊಳಿಸುವುದಾಗಿ ಹೇಳಿದ್ದರು. ಕಳೆದ ಮೂರು ದಶಕಗಳಿಂದ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿರುವ ಅಕ್ಷಯ್‌ ಈ ಹೊತ್ತಿಗೂ ಬಾಲಿವುಡ್‌ನ ಭರವಸೆಯ ಸ್ಟಾರ್‌. ಸಾಲು, ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ತಮ್ಮದೇ ಆದ ಅಭಿಮಾನ ಬಳಗ ಹೊಂದಿರುವ ನಟ ಇದೀಗ apparel brandನೊಂದಿಗೆ ಜನರಿಗೆ ಮತ್ತೊಂದು ರೀತಿ ಹತ್ತಿರವಾಗಿದ್ದಾರೆ.

LEAVE A REPLY

Connect with

Please enter your comment!
Please enter your name here