ಅಭಿಷೇಕ್‌ ಶರ್ಮಾ ನಿರ್ದೇಶನದಲ್ಲಿ ಅಕ್ಷಯ್‌ ಕುಮಾರ್‌ ನಟಿಸುತ್ತಿರುವ ʼರಾಮ್‌ ಸೇತುʼ ಸಿನಿಮಾದ ಡಿಯು ಪ್ರದೇಶದ ಶೂಟಿಂಗ್‌ ಪೂರ್ಣಗೊಂಡಿದೆ. ನಟ ಅಕ್ಷಯ್‌ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡು ಅಲ್ಲಿನ ಪರಿಚಯ ನೀಡಿದ್ದಾರೆ.

ಅಕ್ಷಯ್‌ ಕುಮಾರ್‌ ಉತ್ಸಾಹಿ ನಟ. ಚಿತ್ರೀಕರಣಕ್ಕೆಂದು ಹೋದ ಪ್ರದೇಶಗಳ ಇತಿಹಾಸವನ್ನು ಅರಿಯುವುದು ಅವರಿಗಿಷ್ಟ. ಇದೀಗ ತಮ್ಮ ʼರಾಮ್‌ ಸೇತುʼ ಹಿಂದಿ ಸಿನಿಮಾ ಶೂಟಿಂಗ್‌ ನಡೆದ ಡಿಯು ಪ್ರದೇಶದ ಬಗ್ಗೆ ಮಾತನಾಡಿದ್ದಾರೆ. ಅವರ ʼರಾಮ್‌ ಸೇತುʼ ಚಿತ್ರಕ್ಕೆ ಅಲ್ಲಿ ಚಿತ್ರೀಕರಣ ನಡೆದಿದೆ. ಶೂಟಿಂಗ್‌ ಮುಕ್ತಾಯವಾಗುತ್ತಿದ್ದಂತೆ ಅಲ್ಲೆಲ್ಲಾ ಸುತ್ತಾಡಿದ ಅಕ್ಷಯ್‌ ಡಿಯು ಸೌಂದರ್ಯದ ಬಗ್ಗೆ ಮಾತನಾಡಿ ಅಲ್ಲಿನ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ಗೆ ಹಾಕಿದ್ದಾರೆ. “ಪ್ರಕೃತಿಯ ಸಹಜ ಸೌಂದರ್ಯ, ಹೃದಯವಂತ ಜನರು, ಇಲ್ಲಿಗೆ ಭೇಟಿ ನೀಡುವವರು ಪಣಿ ಕೊತಾ ಫಾರ್ಟ್ರೆಸ್‌ ಜೈಲ್‌ ನೋಡುವುದನ್ನು ಮರೆಯಬೇಡಿ. ಇಲ್ಲಿ ಇತಿಹಾಸದ ಕತೆಗಳಿವೆ” ಎಂದು ಬರೆದಿದ್ದಾರೆ ಅಕ್ಷಯ್‌.

ಸಿನಿಮಾ ಆರಂಭವಾದಾಗ ನಟ ಅಕ್ಷಯ್‌, “ಇದು ನನ್ನ ವೃತ್ತಿ ಬದುಕಿನ ವಿಶೇಷ ಸಿನಿಮಾ. ಇಲ್ಲಿ ಆರ್ಕಿಯಾಲಜಿಸ್ಟ್‌ ಪಾತ್ರದಲ್ಲಿ ನಟಿಸುತ್ತಿದ್ದೇನೆ” ಎಂದು ಮೆಸೇಜ್‌ ಹಾಕಿದ್ದರು. ಅಭಿಷೇಕ್‌ ಶರ್ಮಾ ನಿರ್ದೇಶನದ ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಜಾಕ್ವಲಿನ್‌ ಫರ್ನಾಂಡಿಸ್‌, ನುಶ್ರತ್‌ ಭರೂಚಾ ನಟಿಸುತ್ತಿದ್ದಾರೆ. 2022ರ ಅಕ್ಟೋಬರ್‌ 24ರಂದು ಸಿನಿಮಾ ತೆರೆಕಾಣಲಿದೆ. ಇತ್ತೀಚೆಗೆ ತೆರೆಕಂಡ ಅಕ್ಷಯ್‌ ಅಭಿನಯದ ʼಸೂರ್ಯವಂಶಿʼ ದೊಡ್ಡ ಯಶಸ್ಸು ಕಂಡಿದೆ. ಅತ್ರಂಗಿ ರೇ, ಪೃಥ್ವಿರಾಜ್‌, LMG2, ಬಚ್ಚನ್‌ ಪಾಂಡೆ, ರಕ್ಷಾ ಬಂಧನ್‌… ತೆರೆಗೆ ಸಿದ್ಧವಾಗುತ್ತಿರುವ ಅವರ ಸಿನಿಮಾಗಳು.

LEAVE A REPLY

Connect with

Please enter your comment!
Please enter your name here