ಸ್ಯಾಂಡಲ್‌ವುಡ್‌ ನಿರ್ದೇಶಕ ಹರಿ ಸಂತು ಬಾಲಿವುಡ್‌ಗೆ ಪ್ರವೇಶ ಪಡೆದಿದ್ದು, ಅವರ ನಿರ್ದೇಶನದಲ್ಲಿ ‘ಪಪ್ಪಿ ಲವ್‌’ ಹಿಂದಿ ಸಿನಿಮಾ ತಯಾರಾಗಲಿದೆ. ಓಟಿಟಿ ಸ್ಟಾರ್‌ ತನುಜ್‌ ವಿರ್ವಾನಿ, ತ್ರಿಷಾ ಚೌಧರಿ, ಸಪ್ನಾ ಪಬ್ಬಿ ಈ ಲವ್‌ಸ್ಟೋರಿಯ ಸ್ಟಾರ್‌ ಕಾಸ್ಟ್‌.

ಲವ್‌ ಸಿನಿಮಾಗಳ ಮೂಲಕ ಛಾಪು ಮೂಡಿಸಿರುವ ಸ್ಯಾಂಡಲ್‌ವುಡ್‌ ನಿರ್ದೇಶಕ ಹರಿ ಸಂತು ಬಾಲಿವುಡ್‌ ಪ್ರವೇಶಿಸುತ್ತಿದ್ದಾರೆ. ಲವ್‌ ಜಾನರ್‌ ಸಿನಿಮಾಗಳ ಮೂಲಕ ಗೆದ್ದಿರುವ ಹರಿ ಸಂತು ‘ಪಪ್ಪಿ ಲವ್‌’ ಹಿಂದಿ ಸಿನಿಮಾ ನಿರ್ದೇಶಿಸಲಿದ್ದಾರೆ. ಈ ಲವ್‌ಸ್ಟೋರಿಯಲ್ಲಿ ವೆಬ್ ಸರಣಿಗಳಲ್ಲಿ ಹೆಸರು ಮಾಡಿರುವ ತನುಜ್ ವಿರ್ವಾನಿ, ತ್ರಿಷಾ ಚೌಧರಿ, ಸಪ್ನಾ ಪಬ್ಬಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಕೇತ್ ಪಾಂಡೆ ಚಿತ್ರಕಥೆಯಲ್ಲಿ ಹರಿ ಸಂತು ಅವರಿಗೆ ನೆರವಾಗಿದ್ದಾರೆ. “ಇದೊಂದು ಅಪೂರ್ವ ಅವಕಾಶ ಎಂದು ಭಾವಿಸಿದ್ದೇನೆ. ಕನ್ನಡದಲ್ಲಿನ ನನ್ನ ಕೆಲಸ ಬಾಲಿವುಡ್‌ ಅವಕಾಶ ತಂದುಕೊಟ್ಟಿದೆ. ಭಾಷೆ ಬೇರೆ ಎನ್ನುವುದನ್ನು ಬಿಟ್ಟರೆ ನನಗೆ ಮತ್ತಾವ ತೊಡಕೂ ಇಲ್ಲಾಗದು. ಎಲ್ಲರೂ ಮೆಚ್ಚುವಂತಹ ಗುಣಮಟ್ಟದ ಸಿನಿಮಾ ಮಾಡುವ ವಿಶ್ವಾಸವಿದೆ” ಎನ್ನುತ್ತಾರೆ ಹರಿ ಸಂತು. ರಾಜಾರಾಂ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಭುವನ್ ಮೂವೀಸ್ ಸುರೇಶ್ ಹಾಗೂ ಪದ್ಮಾವತಿ ಪಿಚ್ಚರ್ಸ್‌ ಅವಿನಾಶ್ ಡೇನಿಯಲ್ ಚಾರ್ಲ್ಸ್ ಯುಕೆ ಮೂಲದ ಬ್ಲೂ ಬ್ಲಿಂಗ್ ಪ್ರೊಡಕ್ಷನ್ಸ್‌ನ ವಿಪುಲ್ ಶರ್ಮಾ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಜುಲೈ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಲಂಡನ್‌ನಲ್ಲಿ ಸಂಪೂರ್ಣ ಚಿತ್ರೀಕರಣ ನಡೆಯಲಿರುವುದು ವಿಶೇಷ.

Previous article‘ಶಮ್ಶೇರಾ’ ಟ್ರೈಲರ್‌; ರಣಬೀರ್‌ ಕಪೂರ್‌ ಸಿನಿಮಾ ಜುಲೈ 22ಕ್ಕೆ
Next articleಬಾಲಿವುಡ್‌ನಲ್ಲಿ ಶಾರುಖ್‌ 30 ವರ್ಷ; ‘ಪಠಾಣ್‌’ ಮೋಷನ್‌ ಪೋಸ್ಟರ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here