‘ಹಾರ್ಟ್‌ ಆಫ್‌ ಸ್ಟೋನ್‌’ ಚಿತ್ರದೊಂದಿಗೆ ಬಾಲಿವುಡ್‌ ತಾರೆ ಅಲಿಯಾ ಭಟ್‌ ಹಾಲಿವುಡ್‌ಗೆ ಪರಿಚಯವಾಗುತ್ತಿದ್ದಾರೆ. ಟಾಮ್‌ ಹಾರ್ಪರ್‌ ನಿರ್ದೇಶನದ ಆಕ್ಷನ್‌ – ಥ್ರಿಲ್ಲರ್‌ನಲ್ಲಿ ಅವರಿಗೆ ನೆಗೆಟೀವ್‌ ಶೇಡ್‌ ಪಾತ್ರವಿದೆ. ಆಗಸ್ಟ್‌ 11ರಿಂದ ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

ನಟಿ ಅಲಿಯಾ ಭಟ್‌ ‘ಹಾರ್ಟ್‌ ಆಫ್‌ ಸ್ಟೋನ್‌’ ಚಿತ್ರದ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಡೆದ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ರೀಕ್ಯಾಪ್ ಹಂಚಿಕೊಂಡಿದ್ದಾರೆ. ಜೂನ್ 16ರಿಂದ 18ರವರೆಗೆ ಸಾವೊ ಪಾಲೊದಲ್ಲಿ ನಡೆದ Tandum 2023 Netflix Fan Eventನಲ್ಲಿ ಭಾಗವಹಿಸಿದ BTS ವೀಡಿಯೊವನ್ನು Instgramನಲ್ಲಿ ಹಂಚಿಕೊಂಡು, ‘A recap of my #Tudum moments #HeartOfStone’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಗ್ರೆಗ್ ರುಕಾ ಕತೆ ರಚಿಸಿದ್ದು ಟಾಮ್ ಹಾರ್ಪರ್ ಚಿತ್ರ ನಿರ್ದೇಶಿಸಿದ್ದಾರೆ. ಡೇವಿಡ್‌ ಎಲಿಸನ್ ನಿರ್ಮಾಣದ ಚಿತ್ರಕ್ಕೆ ಚಾರ್ಜ್ ಸ್ಟೀಲ್‌ ಛಾಯಾಗ್ರಹಣ, ಸ್ಟೀವನ್‌ ಬೆಲ್‌ ಸಂಗೀತ ಸಂಯೋಜನೆಯಿದೆ. ಜೇಮೀ ಡೋರ್ನಾನ್ ಮತ್ತು ಗಾಲ್ ಗಡೋಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅಲಿಯಾ ಭಟ್‌ ವೃತ್ತಿ ಬದುಕಿನಲ್ಲಿ ಮೊದಲ ಬಾರಿ ನೆಗೆಟೀವ್‌ ಶೇಡ್‌ ಪಾತ್ರದಲ್ಲಿ ನಟಿಸಿದ್ದಾರೆ. ಗಾಲ್ ಮತ್ತು ಜೇಮಿ ಜೊತೆಗೆ, ಚಿತ್ರದಲ್ಲಿ ಸೋಫಿ ಒಕೊನೆಡೊ, ಜಿಂಗ್ ಲೂಸಿ, ಮಥಿಯಾಸ್ ಷ್ವೀಗೋಫರ್ ಮತ್ತು ಪಾಲ್ ರೆಡಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಇಟಲಿ, ಲಂಡನ್, ರೇಕ್‌ಜಾವಿಕ್ ಮತ್ತು ಲೆಸ್ಬನ್‌ನಲ್ಲಿ ಚಿತ್ರಣಗೊಂಡಿರುವ ಸಿನಿಮಾ ಆಗಸ್ಟ್‌ 11ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

Previous article‘ಅರ್ಥ್‌’, ‘ಆಜ್‌’ ಹಿಂದಿ ಸಿನಿಮಾಗಳ ನಿರ್ಮಾಪಕ ಕುಲ್ಜಿತ್‌ ಪೌಲ್‌ ನಿಧನ
Next articleಕೇರಳ ಕ್ರೈಮ್ ಫೈಲ್ಸ್ | ‘ಶಿಜು, ಪಾರಯಿಲ್ ವೀಡ್, ನೀಂಡಕರ’ ಹಂತಕನ ಬೆನ್ನತ್ತಿ 6 ದಿನಗಳು

LEAVE A REPLY

Connect with

Please enter your comment!
Please enter your name here