SonyLiv ‘ಸಾಲ್ಟ್‌ ಸಿಟಿ’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಗೊಳಿಸಿದೆ. ಪಿಯೂಷ್‌ ಮಿಶ್ರಾ, ಗೌಹಾರ್‌ ಖಾನ್‌, ವಿವ್ಯೇಂದು ಶರ್ಮಾ, ಇಶಾ ಚೋಪ್ರಾ ಅಭಿನಯದ ಸರಣಿ ಜೂನ್‌ 16ರಿಂದ ಸ್ಟ್ರೀಮ್‌ ಆಗಲಿದೆ.

ಬಾಜ್‌ಪೈ ಕುಟುಂಬದ ಸದಸ್ಯರ ಮಧ್ಯೆಯ ಭಾವಲೋಕವನ್ನು ಅನಾವರಣಗೊಳಿಸುತ್ತದೆ SonyLiv ನ ‘ಸಾಲ್ಟ್‌ ಸಿಟಿ’ ವೆಬ್‌ ಸರಣಿ. ಪಿಯೂಷ್‌ ಮಿಶ್ರಾ, ಗೌಹರ್‌ ಖಾನ್‌, ದಿವ್ಯೇಂದು ಶರ್ಮಾ, ಇಶಾ ಚೋಪ್ರಾ, ಜತಿನ್‌ ಗುಲಾಟಿ, ಮನೀಷ್‌ ಆನಂದ್‌, ಪ್ರಣಯ್‌ ಪಚೌರಿ, ಮೋನಿಕಾ ಚೌಧರಿ ಪ್ರಮುಖ ಪಾತ್ರಗಳಲ್ಲಿರುವ ಸರಣಿಗೆ “Experience the journey of a family with an unusual story” ಎನ್ನುವ ಟ್ಯಾಗ್‌ಲೈನ್‌ ಇದೆ. Applause Entertainment ಮತ್ತು Sunshine Productions ನಿರ್ಮಾಣದ ಈ ಸರಣಿಯನ್ನು ರಿಷಭ್‌ ಅನುಪಮ್‌ ಸಹಾಯ್‌ ನಿರ್ದೇಶಿಸಿದ್ದಾರೆ. ಪಿತೃಪ್ರಧಾನ ಕೂಡುಕುಟುಂಬ, ಮಕ್ಕಳ ಮದುವೆ ನಂತರ ಕುಟುಂಬದಲ್ಲಾಗುವ ಪಲ್ಲಟಗಳು ಸರಣಿಯ ವಸ್ತು. ಕುಟುಂಬದ ಹಿರಿಯನ ಪಾತ್ರದಲ್ಲಿ ಪಿಯೂಶ್‌ ಮಿಶ್ರಾ ನಟಿಸಿದ್ದಾರೆ. ಜೂನ್‌ 16ರಿಂದ SonyLiv ನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

Previous article‘ಆಫ್ಟರ್‌ ಆಪರೇಷನ್‌ ಲಂಡನ್‌ ಕೆಫೆ’; ಶೀರ್ಷಿಕೆ ಬಿಡುಗಡೆಗೊಳಿಸಿದ ರಿಷಬ್‌ ಶೆಟ್ಟಿ
Next articleರಕ್ಷಿತ್‌ ಶೆಟ್ಟಿ ಬರ್ತ್‌ಡೇ ಸ್ಪೆಷಲ್‌; ‘ಸಪ್ತ ಸಾಗರದಾಚೆ ಎಲ್ಲೋ’ ಟೀಸರ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here