ಹಲವು ಮಹತ್ವದ ಹಿಂದಿ ಸಿನಿಮಾಗಳನ್ನು ನಿರ್ಮಿಸಿದ್ದ ಕುಲ್ಜಿತ್‌ ಪೌಲ್‌ ಇಹಲೋಕ ತ್ಯಜಿಸಿದ್ದಾರೆ. ನಟಿ ರೇಖಾ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದ ಪೌಲ್‌ ಹೊಸ ಅಲೆಯ ಸಿನಿಮಾಗಳ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು.

ಬಾಲಿವುಡ್‌ನ ಹಿರಿಯ ನಿರ್ಮಾಪಕ (90) ಕುಲ್ಜಿತ್‌ ಪೌಲ್‌ (ಜೂನ್‌ 24) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಹೊಸ ಅಲೆಯ ಸಿನಿಮಾಗಳಾದ ‘ಅರ್ಥ್’, ‘ಆಜ್‌’, ‘ದೋ ಶಿಖಾರಿ’, ‘ಆಶಿಯಾನಾ’, ‘ಪರಮಾತ್ಮ’ ಸೇರಿದಂತೆ ಹಲವು ಸಿನಿಮಾಗಳ ನಿರ್ಮಾಪಕರು ಪೌಲ್‌. ನಟಿ ರೇಖಾ ಅವರಿಗೆ ಬಾಲಿವುಡ್‌ನಲ್ಲಿ ಸಿನಿಮಾ ಅವಕಾಶ ಕಲ್ಪಿಸಿಕೊಟ್ಟ ನಿರ್ಮಾಪಕ. ‘ಸಹೃದಯ ಕುಲ್ಜತ್‌ ಸಾಕಷ್ಟು ಜನರಿಗೆ ಹಲವು ರೀತಿಗಳಲ್ಲಿ ನೆರವಾಗಿದ್ದಾರೆ. ಅಪಾರ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿ ಎಲ್ಲರೊಂದಿಗೂ ಬೆರೆಯುತ್ತಿದ್ದರು’ ಎಂದು ‘ಅರ್ಥ್’ ನಿರ್ದೇಶಕ ಮಹೇಶ್ ಭಟ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಕುಲ್ಜಿತ್ ಪುತ್ರಿ ಅನು ಪಾಲ್ ಅವರು ತಂದೆ ನಿರ್ಮಾಣದ ‘ಆಜ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ ಹಿರಿಯ ನಟ – ನಟಿಯರು ಪೌಲ್‌ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಜೂನ್ 29ರಂದು ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿದೆ.

LEAVE A REPLY

Connect with

Please enter your comment!
Please enter your name here