ನಾಳೆ ಏಪ್ರಿಲ್‌ 8 ಅಲ್ಲು ಅರ್ಜುನ್‌ ಬರ್ತ್‌ಡೇ. ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಸಂಜೆ ‘ಪುಷ್ಪ 2’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ತಿರುಪತಿ ಜೈಲಿನಿಂದ ಎಸ್ಕೇಪ್‌ ಆಗಿರುವ ಪುಷ್ಪ ಬದುಕಿದ್ದಾನೋ, ಇಲ್ಲವೋ ಎಂದು ಶುರುವಾಗುವ ಟ್ರೈಲರ್‌ ಅವನ ಎಂಟ್ರಿಯೊಂದಿಗೆ ಕೊನೆಯಾಗುತ್ತದೆ!

ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ-2’ ಟ್ರೈಲರ್‌ ರಿಲೀಸ್‌ ಆಗಿದೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಅಂಗವಾಗಿ ರಿಲೀಸ್‌ ಆಗಿರುವ ಟ್ರೈಲರ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಪೊಲೀಸರ ಗುಂಡಿನಿಂದ ಗಾಯಗೊಂಡು ಪುಷ್ಪ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುತ್ತಾನೆ. ಪುಷ್ಪನಿಗಾಗಿ ಹುಡುಗಾಟ, ಹೊಡೆದಾಟ, ದಾಳಿ ನಡೆಯುತ್ತದೆ. ಪುಷ್ಪ ಪತ್ತೆಯಾಗುವುದಿಲ್ಲ. ದಟ್ಟ ಅರಣ್ಯದಲ್ಲಿ ಹುಲಿಯೊಂದಿಗೆ ಎಂಟ್ರಿ ಕೊಡುತ್ತಾನೆ ಪುಷ್ಪರಾಜ್‌! ‘ಕಾಡಲ್ಲಿ ಪ್ರಾಣಿಗಳು ಎರಡು ಹೆಜ್ಜೆ ಹಿಂದೆ ಇಟ್ರೆ ಹುಲಿ ಬಂದಿದೆ ಅಂತ ಅರ್ಥ.. ಹುಲಿನೇ ಎರಡು ಹೆಜ್ಜೆ ಹಿಂದೆ ಇಟ್ರೆ ಪುಷ್ಪ ಬಂದಿದ್ದಾನೆ’ ಎನ್ನುವ ಡೈಲಾಗ್‌ ಹಿನ್ನೆಲೆಯಲ್ಲಿ ಕೇಳಿಸುತ್ತದೆ.

ಟ್ರೈಲರ್‌ಗೂ ಮುನ್ನ ಬಂದಿದ್ದ ‘ಪುಷ್ಪ -2’ ಗ್ಲಿಂಪ್ಸ್‌ಗೆ ದೊಡ್ಡಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು. ಕಥಾನಾಯಕನೇ ನಾಪತ್ತೆಯಾಗಿದ್ದಾನೆ ಎನ್ನುವ ಕುತೂಹಲದೊಂದಿಗೆ ಗ್ಲಿಂಪ್ಸ್‌ ಬಂದಿತ್ತು. ಪುಷ್ಪರಾಜ್ ಎಲ್ಲಿ ಹೋದ ಅನ್ನೋ ಕ್ಯೂರಿಯಾಸಿಟಿಗೆ ಟ್ರೈಲರ್‌ನಲ್ಲಿ ಉತ್ತರ ಸಿಕ್ಕಿದೆ. ನಿರ್ದೇಶಕ ಸುಕುಮಾರ್‌ ಅವರು ಪಾರ್ಟ್‌ 2ನಲ್ಲಿ ಪುಷ್ಪರಾಜ್‌ ಸಮಾಜದ ನಿರ್ಗತಿಕ ಜನರ ನೆರವಿಗೆ ನಿಂತಿದ್ದಾನೆ ಎಂದು ಬಿಂಬಿಸಿರುವಂತಿದೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಟ್ರೈಲರ್‌ ಬಿಡುಗಡೆಯಾಗಿದೆ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರೊಡಕ್ಷನ್ ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆಯಿದೆ.

LEAVE A REPLY

Connect with

Please enter your comment!
Please enter your name here