‘ಪುಷ್ಪ’ ಸಿನಿಮಾ ಮೂಲಕ PAN ಇಂಡಿಯಾ ಸ್ಟಾರ್‌ ಆದ ಅಲ್ಲು ಅರ್ಜುನ್‌ ಇದೀಗ ನೂತನ ಉದ್ಯಮ ಆರಂಭಿಸಿದ್ದಾರೆ. ಏಷ್ಯನ್ ಸಿನಿಮಾಸ್ ಜೊತೆಗೂಡಿ ಅವರು ಹೈದರಾಬಾದ್‌ನಲ್ಲಿ ‘AAA’ ಮಲ್ಟಿಪ್ಲೆಕ್ಸ್‌ ಆರಂಭಿಸಿದ್ದಾರೆ. ಥಿಯೇಟರ್‌ನಲ್ಲಿ LED ಸ್ಕ್ರೀನ್‌ ಥಿಯೇಟರ್‌ ಕೂಡ ಇದೆ ಎನ್ನುವುದು ವಿಶೇಷ.

ಟಾಲಿವುಡ್‌ ಹೀರೋ ಅಲ್ಲು ಅರ್ಜುನ್‌ ಮಲ್ಟಿಪ್ಲೆಕ್ಸ್‌ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಏಷ್ಯನ್‌ ಸಿನಿಮಾಸ್‌ ಜೊತೆಗೂಡಿ ಅವರು ಶುರುಮಾಡುತ್ತಿರುವ ಉದ್ಯಮದ ಮೊದಲ ಐಶಾರಾಮಿ ಮಲ್ಟಿಪ್ಲೆಕ್ಸ್‌ ‘AAA’ ಹೈದರಾಬಾದ್‌ನ ಅಮೀರ್‌ ಪೇಟೆಯಲ್ಲಿ ಆರಂಭವಾಗಿದೆ. ಮಲ್ಟಿಪ್ಲೆಕ್ಸ್‌ ಒಟ್ಟು ಮೂರು ಲಕ್ಷ ಚದರ ಅಡಿ ಇದ್ದು, ಮೂರನೇ ಮಹಡಿಯಲ್ಲಿ 35 ಸಾವಿರ ಚದರ ಅಡಿಯಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ನಾಲ್ಕನೇ ಫ್ಲೋರ್‌ನಲ್ಲಿ ಐದು ಸ್ಕ್ರೀನ್‌ಗಳ ‘AAA’ ಚಿತ್ರಮಂದಿರವಿದೆ. ಸ್ಕ್ರೀನ್ 2ನಲ್ಲಿ LED ಥಿಯೇಟರ್‌ ಇದೆ. ದಕ್ಷಿಣ ಭಾರತದಲ್ಲಿ LED ಪರದೆ ಒಳಗೊಂಡಿರುವ ಏಕೈಕ ಮಲ್ಟಿಪ್ಲೆಕ್ಸ್ ಇದು ಎನ್ನುವುದು ವಿಶೇಷ. ಅತ್ಯುತ್ತಮ ಸೌಂಡ್ ಸಿಸ್ಟಂ, ಸ್ಕ್ರೀನ್ ಹಾಗೂ ಆಸನ ವ್ಯವಸ್ಥೆಯ ವಿಶ್ವದರ್ಜೆಯ ಮಲ್ಟಿಪ್ಲೆಕ್ಸ್‌ ಎನ್ನುತ್ತಾರೆ ಅಲ್ಲು ಅರ್ಜುನ್‌. ಮೊದಲ ಚಿತ್ರವಾಗಿ ಪ್ರಭಾಸ್‌ ಅವರ ‘ಆದಿಪುರುಷ್‌’ ಪ್ರದರ್ಶನಗೊಳ್ಳುತ್ತಿದೆ. ಸಿನಿಮಾ ನಿರ್ಮಾಣ, ತಂದೆ ಒಡೆತನದ Aha ಒಟಿಟಿಯಲ್ಲಿಯೂ ಪಾಲುದಾರಾಗಿರುವ ಅಲ್ಲು ಅರ್ಜುನ್, ಹೊಸ ಸ್ಟುಡಿಯೋ ಕೂಡ ಶುರು ಮಾಡಿದ್ದಾರೆ. ಇನ್ನು ವೃತ್ತಿ ಬದುಕಿನ ಬಗ್ಗೆ ಪ್ರಸ್ತಾಪಿಸುವುದಾದರೆ ಸದ್ಯ ಅವರು ‘ಪುಷ್ಪ 2’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here