ಕಾಲಿವುಡ್‌ನ ಪ್ರತಿಷ್ಠಿತ ಚಿತ್ರನಿರ್ಮಾಣ ಸಂಸ್ಥೆ Lyca ಜಗತ್ತಿನಾದ್ಯಂತ ಬಿಡುಗಡೆ ಮಾಡುತ್ತಿರುವ ‘ಮಿಷನ್‌: ಚಾಪ್ಟರ್‌ 1’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಹೀರೋ ಅರುಣ್‌ ವಿಜಯ್‌ ವೃತ್ತಿ ಬದುಕಿಗೆ ಇದು ದೊಡ್ಡ ಕ್ಯಾನ್ವಾಸ್‌ ಸಿನಿಮಾ. ಆಮಿ ಜಾಕ್ಸನ್‌ ವಿಶೇಷ ಪಾತ್ರದಲ್ಲಿದ್ದಾರೆ.

ಲಂಡನ್ ಜೈಲೊಂದರಲ್ಲಿ ತೆರೆದುಕೊಳ್ಳುವ ‘ಮಿಷನ್‌: ಚಾಪ್ಟರ್‌ 1’ ಟೀಸರ್ ತುಣುಕಿನಲ್ಲಿ ಜೈಲಿನಲ್ಲಿ ನಡೆಯುವ ರೋಚಕ ತಿರುವುಗಳಿವೆ. ಜೈಲು ಅಧಿಕಾರಿಯಾಗಿ ಆಮಿ‌ ಜಾಕ್ಸನ್ ಅಬ್ಬರ, ಹೊಡೆದಾಟ – ಬಡಿದಾಟದ ದೃಶ್ಯಗಳ ಜೊತೆ ಅಪ್ಪ – ಮಗಳ ಬಾಂಧವ್ಯ ಟೀಸರ್‌ನ ಹೈಲೆಟ್. ಕಾಲಿವುಡ್‌ನ ಪ್ರತಿಷ್ಠಿತ ಚಿತ್ರನಿರ್ಮಾಣ ಸಂಸ್ಥೆ Lyca ವಿಶ್ವಾದ್ಯಂತ ರಿಲೀಸ್ ಮಾಡಲಿರುವ ಮಿಷನ್: ಚಾಪ್ಟರ್-1 ಟೀಸರ್‌ ಸಿನಿಮಾದ ದೊಡ್ಡ ಕ್ಯಾನ್ವಾಸ್‌ಗೆ ಸಾಕ್ಷ್ಯ ನುಡಿಯುತ್ತದೆ. ನಾಯಕ ಅರುಣ್ ವಿಜಯ್ ಎಂಟ್ರಿ, ಭರ್ಜರಿ ಆಕ್ಷನ್‌ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಡಿಯನ್, 2.0, ಕೈದಿ-150, ಪೊನ್ನಿಯಿನ್ ಸೆಲ್ವನ್-2 ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ, ಇಂಡಿಯನ್2 ಸೇರಿದಂತೆ ಮತ್ತಷ್ಟು ಪ್ರಾಜೆಕ್ಟ್‌ಗಳನ್ನು ನಿರ್ಮಿಸುತ್ತಿರುವ ಸುಭಾಷ್ ಕರಣ್ ‘ಮಿಷನ್: ಚಾಪ್ಟರ್- 1’ ಸಿನಿಮಾವನ್ನು ವಿಶ್ವದಾದ್ಯಂತ ರಿಲೀಸ್ ಮಾಡಲಿದ್ದಾರೆ. ಎ.ಎಲ್‌.ವಿಜಯ್‌ ನಿರ್ದೇಶನದ ಚಿತ್ರದೊಂದಿಗೆ ನಟಿ ಆಮಿ ಜಾಕ್ಸನ್ ಕಾಲಿವುಡ್‌ಗೆ ಮರಳುತ್ತಿದ್ದು, ಮಾಲಿವುಡ್ ನಟಿ ನಿಮಿಷಾ ಸಜಯನ್ ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ. ಸಂದೀಪ್ ಕೆ. ವಿಜಯ್ ಛಾಯಾಗ್ರಾಹಣ. ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ. ಮೂಲ ತಮಿಳು ಸೇರಿದಂತೆ ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here