ಖ್ಯಾತ ತೆಲುಗು ನಟ ಅಲ್ಲು ಅರ್ಜುನ್‌ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ದುಬೈನ ಮೇಡಂ ತುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್‌ ಮೇಣದ ಪ್ರತಿಮೆ ಅನಾವರಣಗೊಂಡಿದೆ. ಈ ಗೌರವಕ್ಕೆ ಭಾಜನರಾಗಿರುವ ದಕ್ಷಿಣ ಭಾರತದ ಮೊದಲ ನಟ ಎನ್ನುವ ಖ್ಯಾತಿ ಅವರದಾಗಿದೆ.

ತೆಲುಗು ನಟ ಅಲ್ಲು ಅರ್ಜುನ್‌ ಬೆಳ್ಳಿತೆರೆಗೆ ಪರಿಚಯವಾಗಿ ಈ ಹೊತ್ತಿಗೆ 21 ವರ್ಷ. 2003 ಮಾರ್ಚ್ 28ರಂದು ‘ಗಂಗೋತ್ರಿ’ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಖುಷಿಯ ಕ್ಷಣದ ನಡುವೆಯೇ ದುಬೈನ ಮೇಡಂ ತುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣಗೊಂಡಿದೆ. ‘ಅಲವೈಕುಂಠಪುರಂಲೋ’ ಚಿತ್ರದ ಅಲ್ಲು ಅರ್ಜುನ್ ಲುಕ್‌ನ ಮೇಣದ ಪ್ರತಿಮೆಯನ್ನು ಮಾರ್ಚ್ 28ರಂದು ಅನಾವರಣ ಮಾಡಲಾಯ್ತು. ತಮ್ಮದೇ ಮೇಣದ ಪ್ರತಿಮೆ ಲುಕ್‌ನಲ್ಲಿ ಕೆಂಪು ಬಣ್ಣದ ಸೂಟ್ ಧರಿಸಿ ಅಲ್ಲು ಅರ್ಜುನ್‌ ಕಾಣಿಸಿಕೊಂಡಿದ್ದಾರೆ. ಡೂಡ್ಲಿಕೇಟ್ ಪಕ್ಕ ನಿಂತು ‘ತಗ್ಗೋದೇ ಇಲ್ಲ’ ಎಂದು ಪುಷ್ಪ ಸ್ಟೈಲ್‌ನಲ್ಲಿ ಪೋಸ್ ಕೊಟ್ಟಿದ್ದಾರೆ.

ಮೇಣದ ಪ್ರತಿಮೆ ಲೋಕಾರ್ಪಣೆ ವೇಳೆ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಕೂಡ ಅಪ್ಪನ ಪ್ರತಿಮೆಯ ಪಕ್ಕದಲ್ಲಿ ನಿಂತು ಪೋಸ್ ಕೊಟ್ಟಿದ್ದಾಳೆ. ಇನ್ನು ಸ್ಟೈಲಿಶ್ ಸ್ಟಾರ್ ಕೂಡ ತಮ್ಮದೇ ಮೇಣದ ಪ್ರತಿಮೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ. ಅಲ್ಲು ಅರ್ಜುನ್‌ ಅವರಿಗೆ ಅಭಿಮಾನಿಗಳು ಅಭಿನಂದನೆ ಹೇಳುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಹಲವು ತಾರೆಯರ ಮೇಣದ ಪ್ರತಿಮೆಗಳು ಲಂಡನ್ ಮೇಡಂ ತುಸ್ಸಾಡ್ಸ್‌ ಮ್ಯೂಸಿಯಂನಲ್ಲಿವೆ. ಆದ್ರೆ ಅಲ್ಲು ಅರ್ಜುನ್ ಪ್ರತಿಮೆ ಮಾತ್ರ ದುಬೈ ಮ್ಯೂಸಿಯಂನಲ್ಲಿದೆ. ಈ ಗೌರವಕ್ಕೆ ಭಾಜನರಾಗಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಖ್ಯಾತಿ ಅಲ್ಲು ಅರ್ಜುನ್ ಅವರದ್ದಾಗಿದೆ. ಲಂಡನ್ ಮ್ಯೂಸಿಯಂನಲ್ಲಿ ಪ್ರಭಾಸ್, ಮಹೇಶ್ ಬಾಬು ಹಾಗೂ ಕಾಜಲ್ ಮೇಣದ ಪ್ರತಿಮೆಗಳಿವೆ. ‘ಪುಷ್ಪ: ದಿ ರೈಸ್’ ಚಿತ್ರದ ಮೂಲಕ ಅಲ್ಲು ಅರ್ಜುನ್ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಈಗ ‘ಪುಷ್ಪಾ 2: ದಿ ರೂಲ್’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೇ ಆಗಸ್ಟ್ 15ರಂದು ಚಿತ್ರ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here