ರಾಜ್‌ಕುಮಾರ್‌ ಪೆರಿಯಸಾಮಿ ನಿರ್ದೇಶನದ ‘ಅಮರನ್’ ತಮಿಳು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಟ ಶಿವಕಾರ್ತಿಕೇಯನ್‌ ಅವರು ಚಿತ್ರದಲ್ಲಿ ಮೇಜರ್‌ ಮುಕುಂದ್‌ ವರದರಾಜನ್‌ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಕಮಲಹಾಸನ್‌ ಸಹನಿರ್ಮಾಣವಿರುವ ಚಿತ್ರದ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ.

ಶಿವಕಾರ್ತಿಕೇಯನ್ ಹೀರೋ ಆಗಿ ನಟಿಸಿರುವ ‘ಅಮರನ್’ ತಮಿಳು ಚಿತ್ರದ ಫಸ್ಟ್‌ ಲುಕ್‌ ಮತ್ತು ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದು, ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಸೇನೆಯ 44 ರಾಷ್ಟ್ರೀಯ ರೈಫಲ್ಸ್ ಚೀತಾ ಕಂಪನಿಯ ನೇತೃತ್ವ ವಹಿಸಿದ್ದ ಭಾರತೀಯ ಸೇನಾ ಅಧಿಕಾರಿ ದಿವಂಗತ ಮೇಜರ್ ಮುಕುಂದ್ ವರದರಾಜನ್ ಪಾತ್ರದಲ್ಲಿ ಶಿವಕಾರ್ತಿಕೇಯನ್ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಹೋರಾಟವು ತೀವ್ರಗೊಳ್ಳುತ್ತಿದ್ದಂತೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ಮೇಜರ್ ಸ್ಥಳೀಯ ಜನರನ್ನು ಸಿದ್ಧಗೊಳಿಸುವುದನ್ನು ಟೀಸರ್‌ನಲ್ಲಿ ಕಾಣಬಹುದು. ಮೇಜರ್ ಮುಕುಂದ್ ಅವರು ಏಪ್ರಿಲ್ 2014ರಲ್ಲಿ ಕಾಶ್ಮೀರದ ಶೋಪಿಯಾನ್‌ನಲ್ಲಿ ಉಗ್ರರ ವಿರುದ್ಧ ಹೋರಾಡುವಾಗ ಹುತಾತ್ಮರಾದರು. ಅವರಿಗೆ ಮರಣೋತ್ತರವಾಗಿ ರಾಷ್ಟ್ರದ ಅತ್ಯುನ್ನತ ಶೌರ್ಯ ಪ್ರಶಸ್ತಿ ಅಶೋಕ ಚಕ್ರವನ್ನು ನೀಡಲಾಯಿತು.

ಸಿನಿಮಾಗೆ ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದು, ಸಿ ಎಚ್ ಸಾಯಿ ಅವರ ಛಾಯಾಗ್ರಹಣ ಮತ್ತು ಕಲೈವನನ್ ಅವರ ಸಂಕಲನವಿದೆ. ಚಲನಚಿತ್ರವನ್ನು Raajkamal Films International ಮತ್ತು Sony Pictures International Productions ಬ್ಯಾನರ್‌ ಅಡಿಯಲ್ಲಿ ಕಮಲ್ ಹಾಸನ್ ಮತ್ತು ಆರ್ ಮಹೇಂದ್ರನ್ ನಿರ್ಮಿಸಿದ್ದಾರೆ. ಸಿ ಎಚ್ ಸಾಯಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ‘ಅಯಲಾನ್‌’ ಚಿತ್ರದಲ್ಲಿ ಈ ಹಿಂದೆ ಕಾಣಿಸಿಕೊಂಡ ಶಿವಕಾರ್ತಿಕೇಯನ್ ಅವರು ‘ಅಮರನ್’ ಸಿನಿಮಾ ನಂತರ ಅವರ ಮುಂದಿನ ಯೋಜನೆಗಾಗಿ ನಿರ್ಮಾಪಕ ಎ ಆರ್ ಮುರುಗದಾಸ್ ಅವರೊಂದಿಗೆ ಕೈಜೋಡಿಸಲು ಮುಂದಾಗಿದ್ದಾರೆ.

LEAVE A REPLY

Connect with

Please enter your comment!
Please enter your name here