ಟೆಲಿವಿಷನ್‌ ಪ್ರೀಮಿಯರ್‌ ಲೀಗ್‌ ಮೂರನೇ ಸೀಸನ್‌ ಫೆಬ್ರವರಿ 28ರಿಂದ ಆರಂಭವಾಗಲಿದೆ. TPL ನ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ ಮಾಡಲಾಗಿದ್ದು ಹುಬ್ಬಳ್ಳಿಯ KSCA ಮೈದಾನದಲ್ಲಿ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿದೆ. ಒಟ್ಟು 10 ತಂಡಗಳು ಭಾಗವಹಿಸಲಿದ್ದು, 170 ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದಾರೆ.

N1 ಕ್ರಿಕೆಟ್ ಅಕಾಡೆಮಿಯು ಪ್ರಸ್ತುತ ಪಡಿಸುವ TPL (Television Premier league) ಫೆಬ್ರವರಿ 28ರಿಂದ ಮಾರ್ಚ್ 3ರವರೆಗೆ ನಡೆಯಲಿದೆ. ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ N1 ಕ್ರಿಕೆಟ್ ಅಕಾಡೆಮಿಯ ಬಿ ಆರ್ ಸುನಿಲ್ ಕುಮಾರ್ ಕಳೆದ ಎರಡು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಸುತ್ತಿದ್ದಾರೆ. ಈಗಾಗಲೇ ಯಶಸ್ವಿಯಾಗಿ 2 ಸೀಸನ್ ಮುಕ್ತಾಯಗೊಂಡಿದ್ದು, ಹುಬ್ಬಳ್ಳಿಯ KSCA ಮೈದಾನದಲ್ಲಿ ಮೂರನೇ ಸೀಸನ್ ನಡೆಯಲಿದೆ. ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲೊಂದರಲ್ಲಿ TPL ನ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ ಮಾಡಲಾಯಿತು. ನಟ ಶ್ರೀಮುರಳಿ, ನೆನಪಿರಲಿ ಪ್ರೇಮ್, ತಿಲಕ್, ಸಚಿವ ಸಂತೋಷ್ ಲಾಡ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಹನುಮಂತರಾಯಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಲಾವಿದರಿಗೆ ಶುಭ ಕೋರಿದರು.

ಶ್ರೀಮುರಳಿ ಈ ಕುರಿತು ಮಾತನಾಡಿ, ‘ಯಾವುದೇ ಕಾರ್ಯಕ್ರಮ ಚೆನ್ನಾಗಿ ಆಗಬೇಕು ಎಂದರೆ ಪಾಸಿಟಿವ್ ಮೈಂಡ್ ಸೆಟ್ ಇರಬೇಕು. ಒಳ್ಳೆ ಜನ ಹಾಗೂ ಒಂದೇ ರೀತಿ ಯೋಚಿಸುವುದು ಮುಖ್ಯ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಅಪ್ಪು ಮಾವ ನೆರಳಲ್ಲಿ ಪ್ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಯಾಗುತ್ತದೆ. ಅಪ್ಪು ಮಾವನಿಗೆ ಒಂದು ಆಸೆ ಇತ್ತು. ಎಲ್ಲರೂ ಜೊತೆಗೂಡಬೇಕು. ಬರೀ ಇಂಡಿಯಾ ಅಲ್ಲ. ವರ್ಲ್ಡ್ ವೈಡ್ ಹೋಗಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಆದರೆ ಎಲ್ಲರ ಟೈಮ್ ಸೆಟ್ ಆಗುವುದಿಲ್ಲ. ಎಲ್ಲಾ ಟೆಲಿವಿಷನ್ ಕಲಾವಿದರಿಗೂ ನನ್ನದೊಂದು ಗೌರವ. ಎಲ್ಲರೂ ಚೆನ್ನಾಗಿ ಆಡಿ. ಯಾರಾದರು ಗೆಲ್ಲಲಿ. ಭಾಗವಹಿಸುವುದು ಮುಖ್ಯ’ ಎಂದರು.

‘ವಿಶೇಷವಾದ ಆಹ್ವಾನ ನೀಡಿದ ಸುನಿಲ್ ಅವರಿಗೆ ಧನ್ಯವಾದ. ನನ್ನ ಅದೃಷ್ಟ ನಾನು ಈ ಬಾರಿ ಹುಬ್ಬಳ್ಳಿ – ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ನಿಮ್ಮೆಲ್ಲರಿಗೆ ನಮ್ಮ ಅವಳಿ ನಗರಗಳಿಗೆ ಸ್ವಾಗತಿಸುತ್ತೇನೆ’ ಎಂದು ಸಚಿವ ಸಂತೋಷ್‌ ಲಾಡ್‌ ಕಲಾವಿದರನ್ನು ಆಹ್ವಾನಿಸಿದರು. ನಟ ಪ್ರೇಮ್‌ ಮಾತನಾಡಿ, ‘ಇಲ್ಲಿರುವ ಎಲ್ಲರೂ ನನ್ನ ಆತ್ಮೀಯ ಸ್ನೇಹಿತರು. ಎಲ್ಲರೂ ಸೇರಿ ಕ್ರಿಕೆಟ್ ಆಡುತ್ತಿರುವುದು ಬಹಳ ಖುಷಿಯ ವಿಚಾರ. ಕ್ರಿಕೆಟ್ ಅಂದರೆ ಎಲ್ಲರನ್ನೂ ಒಂದು ಕಡೆ ಸೇರಿಸುವ ಆಟವಾಗಿದೆ. ಕೆಲಸ ಮಾಡಿ ಮನೆಗೆ ಹೋಗುತ್ತೇವೆ, ನಮ್ಮದೇ ಜೀವನದಲ್ಲಿ ಕಳೆದು ಹೋಗಿರುತ್ತೇವೆ. ಎಲ್ಲಾ ಸ್ನೇಹಿತರು ಒಂದು ಕಡೆ ಸೇರುವುದು ಕಷ್ಟ. ಆದ್ರೆ ಇಲ್ಲಿ ಕ್ರಿಕೆಟ್ ಈ ಕೆಲಸ ಮಾಡುತ್ತಿರುವುದು ಬಹಳ ಸಂತೋಷದ ವಿಚಾರ’ ಎಂದು ತಂಡಗಳಿಗೆ ಶುಭ ಹಾರೈಸಿದರು. ಹುಬ್ಬಳ್ಳಿಯ ರಾಜನಗರದ KSCA ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. 12 ಓವರ್‌ಗಳ ಪಂದ್ಯದಲ್ಲಿ 10 ತಂಡಗಳು ಭಾಗವಹಿಸಲಿವೆ. ಐಪಿಎಲ್‌ನಂತೆ ಬೆಟ್ಟಿಂಗ್ ಮಾಡಿ ಆಟಗಾರರ ಆಯ್ಕೆ ಮಾಡಲಾಗಿದೆ. TPL ರಾಯಭಾರಿಯಾಗಿ ರಾಗಿಣಿ ದ್ವಿವೇದಿ ಆಯ್ಕೆಯಾಗಿದ್ದು, ಲೂಸ್ ಮಾದ ಯೋಗಿ, ರವಿಶಂಕರ್ ಗೌಡ ಆಟದಲ್ಲಿ ಭಾಗಿಯಾಗಲಿದ್ದಾರೆ.

ಭಾಗವಹಿಸುವ ತಂಡಗಳು | ಒಟ್ಟು 10 ತಂಡಗಳು ಭಾಗವಹಿಸಲಿದ್ದು, 170 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದಾರೆ. ಈ 10 ತಂಡಗಳಿಗೂ ರಾಯಭಾರಿ ಹಾಗೂ ಮಾಲಿಕರಿದ್ದಾರೆ. AVR Groupsನ ಹೆಚ್ ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಶೀರ್ಷಿಕೆಗಳನ್ನು ಸ್ಪಾನ್ಸರ್ ಮಾಡಿದ್ದಾರೆ. ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ. ರಂಜಿತ್ ಕುಮಾರ್ ಎಸ್ ಮಾಲಿಕ, ಜಿಎಲ್ಆರ್ ವಾರಿಯರ್ಸ್ ತಂಡಕ್ಕೆ ಲೂಸ್ ಮಾದ ಯೋಗಿ ನಾಯಕನಾದರೆ, ರಾಜೇಶ್ ಎಲ್ ಮಾಲಿಕ, ಇನ್ಸೇನ್ ಕ್ರಿಕೆಟ್ ತಂಡಕ್ಕೆ ರವಿಶಂಕರ್ ಗೌಡ ನಾಯಕ, ಫೈಜಾನ್ ಖಾನ್ ಮಾಲಿಕ, ದಿ ಬುಲ್ ಸ್ಕ್ವಾಡ್ ತಂಡಕ್ಕೆ ಶರತ್ ಪದ್ಮನಾಭ್ ನಾಯಕ ಮತ್ತು ಮೋನಿಶ್ ಮಾಲಿಕ, ಭಜರಂಗಿ ಬಾಯ್ಸ್ ತಂಡಕ್ಕೆ ಸಾಗರ್ ಬಿಳಿಗೌಡ ನಾಯಕ, ಸ್ವಸ್ತಿಕ್ ಆರ್ಯ ಮಾಲಿಕ. ರಾಸು ವಾರಿಯರ್ಸ್ ತಂಡಕ್ಕೆ ದೀಕ್ಷಿತ್ ಶೆಟ್ಟಿ ನಾಯಕ, ರಘು ಭಟ್ ಹಾಗೂ ಸುಗುಣ ಮಾಲಿಕರು. AVR ಟಸ್ಕರ್ಸ್ ತಂಡಕ್ಕೆ ಚೇತನ್ ಸೂರ್ಯ ನಾಯಕ, ಅರವಿಂದ್ ವೆಂಕಟ್ ರೆಡ್ಡಿ ಮಾಲಿಕ. ಬಯೋಟಾಪ್ ಲೈಫ್ ಸೇವಿಯರ್ ತಂಡಕ್ಕೆ ಅಲಕಾ ನಂದ ಶ್ರೀನಿವಾಸ್ ನಾಯಕ, ವಿಶ್ವನಾಥ್, ಪ್ರಸನ್ನ ಮಾಲಿಕರು. ಕೆಕೆಆರ್ ಮೀಡಿಯಾ ಹೌಸ್ ತಂಡಕ್ಕೆ ಅರುಣ್ ರಾಮ್ ಗೌಡ ನಾಯಕ, ಲಕ್ಷ್ಮೀ ಕಾಂತ್ ರೆಡ್ಡಿ ನಾಯಕ. ಗೋಲ್ಡನ್ ಈಗಲ್ ತಂಡಕ್ಕೆ ವಿಹಾನ್ ನಾಯಕ, ಕುಶಾಲ್ ಮಾಲಿಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here