ಗರ್ತ್‌ ಎನ್ನಿಸ್‌ ಮತ್ತು ಡೇರಿಕ್‌ ರಾಬರ್ಟ್‌ಸನ್‌ ಅವರ ಬೆಸ್ಟ್‌ ಸೆಲ್ಲಿಂಗ್‌ ಕಾಮಿಕ್‌ ಆಧರಿಸಿದ ಸರಣಿ ‘ದಿ ಬಾಯ್ಸ್‌’. ಅಮೇಜಾನ್‌ ಪ್ರೈಮ್‌ನ ಈ ಜನಪ್ರಿಯ ಸರಣಿಯ 3ನೇ ಸೀಸನ್‌ ಜೂನ್‌ 3ರಿಂದ ಸ್ಟ್ರೀಮ್‌ ಆಗಲಿದೆ.

ಅಮೇಜಾನ್‌ ಪ್ರೈಮ್‌ನ ಜನಪ್ರಿಯ ಸರಣಿ ‘ದಿ ಬಾಯ್ಸ್‌’ 3ನೇ ಸರಣಿಯ ಸ್ಟ್ರೀಮಿಂಗ್‌ ಡೇಟ್ಸ್‌ ಘೋಷಣೆಯಾಗಿದೆ. ಈ ವಿಡಂಬನಾತ್ಮಕ ಸೂಪರ್‌ಹೀರೋ ಸೀರೀಸ್‌ ಜೂನ್‌ 3ರಂದು ಸ್ಟ್ರೀಮ್‌ ಆಗಲಿದೆ. ಮೊದಲ ಮೂರು ಎಪಿಸೋಡ್‌ಗಳು ಈ ದಿನಾಂಕದಂದು ಸ್ಟ್ರೀಮ್‌ ಆಗಲಿದ್ದು, ನಂತರ ಪ್ರತೀ ಶುಕ್ರವಾರದಂದು ನೂತನ ಎಪಿಸೋಡ್‌ಗಳು ಮೂಡಿಬರಲಿವೆ. ಸೀಸನ್‌ನ ಫೈನಲ್‌ ಸಂಚಿಕೆ ಜುಲೈ 8ರಂದ ಸ್ಟ್ರೀಮ್‌ ಆಗಲಿದೆ. ಗರ್ತ್‌ ಎನ್ನಿಸ್‌ ಮತ್ತು ಡೇರಿಕ್‌ ರಾಬರ್ಟ್‌ಸನ್‌ ಅವರ ದಿ ನ್ಯೂಯಾರ್ಕ್‌ ಟೈಮ್ಸ್‌ನ ಬೆಸ್ಟ್‌ ಸೆಲ್ಲಿಂಗ್‌ ಕಾಮಿಕ್‌ ಆಧರಿಸಿದ ಸರಣಿಯಿದು. ಕಾರ್ಲ್‌ ಅರ್ಬನ್‌, ಜಾಕ್‌ ಕ್ವೈದ್‌, ಆಂಟೋನಿ ಸ್ಟಾರ್‌, ಎರಿನ್‌ ಮಾರಿಯಾರ್ಟಿ, ಡಾಮಿನಿಕ್‌ ಮ್ಯಾಕ್‌ಎಲಿಗಾಟ್‌, ಜೆಸ್ಸಿ ಟಿ ಅಶ್ಶರ್‌, ಲ್ಯಾಝ್‌ ಅಲೆನ್ಝೋ ಸೇರಿದಂತೆ ದೊಡ್ಡ ತಾರಬಳಗ ಸರಣಿಯಲ್ಲಿದೆ. ಎರಿಕ್‌ ಕ್ರಿಪ್ಕೆ ನಿರ್ದೇಶನದ ಸರಣಿಯನ್ನು ಅಮೇಜಾನ್‌ ಸ್ಟುಡಿಯೋಸ್‌, ಸೋನಿ ಪಿಕ್ಚರ್ಸ್‌ ಟೆಲಿವಿಷನ್‌, ಕ್ರಿಪ್ಕೆ ಎಂಟರ್‌ಪ್ರೈಸಸ್‌, ಒರಿಜಿನಲ್‌ ಫಿಲ್ಮ್‌ ಮತ್ತು ಪಾಯಿಂಟ್‌ ಗ್ರೇ ಪಿಕ್ಚರ್ಸ್‌ ನಿರ್ಮಿಸಿವೆ.

LEAVE A REPLY

Connect with

Please enter your comment!
Please enter your name here