‘ವಿಕ್ರಮ್‌’ ತಮಿಳು ಸಿನಿಮಾ ಬ್ಯುಸಿ ಶೆಡ್ಯೂಲ್‌ನಿಂದಾಗಿ Bigg Boss Ultimate – ಬಿಗ್‌ಬಾಸ್‌ ಓಟಿಟಿ ತಮಿಳು ವರ್ಷನ್‌ ನಿರೂಪಿಸಲು ಸಾಧ್ಯವಾಗುತ್ತಿಲ್ಲ ಎಂದು ನಟ ಕಮಲ ಹಾಸನ್‌ ಹೊರನಡೆದಿದ್ದಾರೆ. ಅವರ ಜಾಗದಲ್ಲಿ ನಿರೂಪಕನಾಗಿ ಸಿಂಬು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

Bigg Boss Ultimate – ಬಿಗ್‌ಬಾಸ್‌ ಓಟಿಟಿ ತಮಿಳು ವರ್ಷನ್‌ ನಿರೂಪಣೆಯಿಂದ ಹಿರಿಯ ನಟ ಕಮಲ ಹಾಸನ್‌ ಹೊರನಡೆದಿದ್ದಾರೆ. ಸಿನಿಮಾದ ಬ್ಯುಸಿ ಶೆಡ್ಯೂಲ್‌ನಿಂದಾಗಿ ನಿರೂಪಣೆಗೆ ಸಮಯ ಹೊಂದಿಸಲು ಸಾಧ್ಯವಾಗದು ಎಂದಿದ್ದಾರೆ. ಅವರ ಜಾಗಕ್ಕೆ ನಟ ಸಿಂಬು ಬರುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ಹೇಳುತ್ತವೆ. ಜನವರಿ ಕೊನೆಯಲ್ಲಿ ಡಿಸ್ನೀ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ Bigg Boss Ultimate ಮೊದಲ ಎಡಿಷನ್‌ ಲಾಂಚ್‌ ಆಗಿದೆ. ಮೊನ್ನೆ ಕಮಲ ಹಾಸನ್‌ ಶೋನಿಂದ ಹೊರನಡೆಯುವುದಾಗಿ ಹೇಳಿದಾಗ ಸೋಷಿಯಲ್‌ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.

“ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ನಮ್ಮ ‘ವಿಕ್ರಮ್‌’ ಚಿತ್ರದ ಚಿತ್ರೀಕರಣ ಸುಗಮವಾಗಿ ನಡೆಯಲಿಲ್ಲ. ಇದರಿಂದಾಗಿ Bigg Boss Ultimate ಶೋಗೆ ನಾನು ನೀಡಿದ್ದ ಡೇಟ್ಸ್‌ಗಳು ಓವರ್‌ಲ್ಯಾಪ್‌ ಆದವು. ಚಿತ್ರೀಕರಣದಲ್ಲಿ ಪ್ರಮುಖ ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಳ್ಳಬೇಕಿದೆ. ನನ್ನಿಂದಾಗಿ ಅವರಿಗೆ ತೊಂದರೆಯಾಗಲಿದೆ. ಸಿನಿಮಾ ಮತ್ತು ನಿರೂಪಣೆ ಎರಡನ್ನೂ ನಿಭಾಯಿಸುವುದು ಸಾಧ್ಯವಾಗದು. ಹಾಗಾಗಿ ಶೋ ನಿಂದ ಹೊರನಡೆಯುತ್ತಿದ್ದು, ಸಿನಿಮಾ ಕೆಲಸಗಳು ಮುಗಿದ ನಂತರ ಮರಳುತ್ತೇನೆ” ಎಂದಿದ್ದಾರೆ ಕಮಲ ಹಾಸನ್‌. ‘ವಿಕ್ರಮ್‌’ ತಮಿಳು ಚಿತ್ರದಲ್ಲಿ ಕಮಲ ಹಾಸನ್‌ ಅವರೊಂದಿಗೆ ವಿಜಯ್‌ ಸೇತುಪತಿ ಮತ್ತು ಫಹಾದ್‌ ಫಾಸಿಲ್‌ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here