ಅಮಿತಾಬ್ ಬಚ್ಚನ್ ಅವರು 37ನೇ ರಾಷ್ಟ್ರೀಯ ಕ್ರೀಡಾಕೂಟದ ಶೀರ್ಷಿಕೆ ಗೀತೆಯ ನಿರೂಪಣೆಗೆ ತಮ್ಮ ಧ್ವನಿ ನೀಡಿದ್ದಾರೆ. ಕ್ರೀಡಾಕೂಟದ ಗೀತೆಗೆ ಸಮರ್ಪಿತ್ ಗೋಲಾನಿ ಸಂಗೀತ ಸಂಯೋಜಿಸಿದ್ದು, ಅವರು ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್ನಲ್ಲಿ ಹಾಡನ್ನು ಹಂಚಿಕೊಂಡಿದ್ದು, ಬಚ್ಚನ್ರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅಮಿತಾಬ್ ಬಚ್ಚನ್ ಅವರು 37ನೇ ರಾಷ್ಟ್ರೀಯ ಕ್ರೀಡಾಕೂಟದ ಶೀರ್ಷಿಕೆ ಗೀತೆಯ ನಿರೂಪಣೆಗೆ ತಮ್ಮ ಧ್ವನಿ ನೀಡಿದ್ದಾರೆ. ಈ ಕ್ರೀಡಾಕೂಟ ಅಕ್ಟೋಬರ್ 26ರಿಂದ ನವೆಂಬರ್ 9ರವರೆಗೆ ಗೋವಾದಲ್ಲಿ ನಡೆಯಲಿದೆ. ಅಮಿತಾಬ್ ಬಚ್ಚನ್ ಅವರು ಸಂಭಾವನೆ ಪಡೆಯದೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಗೋವಾ ರಾಜ್ಯ ಕ್ರೀಡಾ ಸಚಿವರಾದ ಗೋವಿಂದ್ ಗೌಡೆ ಅವರು ಶನಿವಾರ (ಅ.7) ಮುಂಬೈನ ಅಮಿತಾಬ್ ಬಚ್ಚನ್ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದಾರೆ. 37ನೇ ರಾಷ್ಟ್ರೀಯ ಕ್ರೀಡಾಕೂಟದ ಗೀತೆಗೆ ಸಮರ್ಪಿತ್ ಗೋಲಾನಿ ಸಂಗೀತ ಸಂಯೋಜಿಸಿದ್ದಾರೆ. ಕ್ರೀಡಾಕೂಟದ ಗೀತೆಯನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ’37ನೇ ರಾಷ್ಟ್ರೀಯ ಕ್ರೀಡಾಕೂಟದ ಗೀತೆ ಬಿಡುಗಡೆಯಾಗಿದೆ. ಭಾರತದ 37ನೇ ರಾಷ್ಟ್ರೀಯ ಕ್ರೀಡಾಕೂಟದ ಕ್ರೀಡೆಗಳ ಗೀತೆಯನ್ನು ಹಂಚಿಕೊಳ್ಳಲು ಸಂತೋಷವಾಗಿದೆ. ನನಗೆ ಈ ಅವಕಾಶ ನೀಡಿದ ಗೋವಾ ಕ್ರೀಡಾ ಸಚಿವ ಗೋವಿಂದ್ ಗೌಡೆ ಅವರಿಗೆ ಹಾಗೂ ಗೋವಾದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಮಿತಾಬ್ ಬಚ್ಚನ್ ಸರ್ ಅವರಿಗೆ ತಮ್ಮ ಧ್ವನಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಬೆಂಬಲವಾಗಿ ನಿಂತ ನನ್ನ ಕುಟುಂಬ ಮತ್ತು ಸಹೋದರ ಅರ್ಪಿತ್ ಜೈನ್ಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.