ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ 25 ಪ್ರಾದೇಷಿಕ ಭಾಷಾ ಚಿತ್ರಗಳು ಆಯ್ಕೆಯಾಗಿವೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡಿರುವ ‘ಕೂಝಂಗಳ್‌’ ತಮಿಳು ಸಿನಿಮಾ ಸೇರಿದಂತೆ ನಾಲ್ಕು ಕನ್ನಡ ಚಿತ್ರಗಳು ಈ ಪಟ್ಟಿಯಲ್ಲಿವೆ.

ಗೋವಾದಲ್ಲಿ ನಡೆಯಲಿರುವ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿವಿಧ ಪ್ರಾದೇಷಿಕ ಭಾಷೆಗಳ 25 ಫೀಚರ್ ಸಿನಿಮಾ ಹಾಗೂ 20 ನಾನ್‌ ಫೀಚರ್ ಸಿನಿಮಾಗಳು ಆಯ್ಕೆಯಾಗಿವೆ. ನವೆಂಬರ್‌ 20ರಿಂದ 28ರವರೆಗೆ ಸಿನಿಮೋತ್ಸವ ನಡೆಯಲಿದ್ದು, ಕೋವಿಡ್‌ ಕಾರಣಕ್ಕಾಗಿ ವರ್ಚ್ಯುಯೆಲ್‌ ಮತ್ತು ಫಿಸಿಕಲ್ ಎರಡೂ ಮಾದರಿಯಲ್ಲಿ ಆಯೋಜನೆಗೊಂಡಿದೆ. ಕನ್ನಡ ಚಿತ್ರನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್ ಬಾಬು ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ ಸಮಿತಿ ವಿವಿಧ ಪ್ರಾದೇಷಿಕ ಭಾಷೆಗಳ ಒಟ್ಟು 221 ಚಿತ್ರಗಳನ್ನು ವೀಕ್ಷಿಸಿ ಅವುಗಳಲ್ಲಿ 25 ಚಿತ್ರಗಳನ್ನು ಆಯ್ಕೆ ಮಾಡಿದೆ. ಏಮಿ ಬರುಹಾ ನಿರ್ದೇಶನದ ದಿಮಾಸಾ ಭಾಷೆಯ ಸಿನಿಮಾ ‘ಸೆಮ್‌ಖೋರ್‌’ ಚಿತ್ರೋತ್ಸವದ ಆರಂಭಿಕ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ.

2022ರ ಆಸ್ಕರ್ ಪುರಸ್ಕಾರಕ್ಕಾಗಿ ಭಾರತದಿಂದ ನಾಮಿನೇಟ್ ಆಗಿರುವ ‘ಕೂಝಂಗಳ್‌’ ಚಿತ್ರವೂ ಪಟ್ಟಿಯಲ್ಲಿದೆ. ಅಕ್ಟ್‌ 1978, ತಲೆದಂಡ, ಡೊಳ್ಳು ಮತ್ತು ನೀಲಿ ಹಕ್ಕಿ… IFFIಗೆ ಆಯ್ಕೆಯಾಗಿರುವ ಕನ್ನಡ ಚಿತ್ರಗಳು. ಪರಂಬ್ರತಾ ಚಟ್ಟೋಪಾಧ್ಯಾಯ ನಿರ್ದೇಶನದ ‘ಅಭಿಜಾನ್‌’ ಸೇರಿದಂತೆ ಐದು ಬೆಂಗಾಲಿ ಚಿತ್ರಗಳು, ‘ಎಯ್ಟ್‌ ಡೌನ್ ತೂಫಾನ್ ಮೇಲ್‌’, ‘ಆಲ್ಫಾ ಬೀಟಾ ಗಾಮಾ’ ಪ್ರದರ್ಶನಗೊಳ್ಳಲಿರುವ ಹಿಂದಿ ಚಿತ್ರಗಳು. ಡಾಕ್ಯುಮೆಂಟರಿ ಸಿನಿಮಾ ನಿರ್ದೇಶಕ ಎಸ್‌.ನಲ್ಲಮುತ್ತು ಅಧ್ಯಕ್ಷತೆಯಲ್ಲಿ ನಾನ್ ಫೀಚರ್ ಸಿನಿಮಾಗಳ ಆಯ್ಕೆಗೆ ಸಮಿತಿ ನೇಮಕವಾಗಿತ್ತು. ಈ ಸಮಿತಿ 203 ಸಿನಿಮಾಗಳನ್ನು ವೀಕ್ಷಿಸಿ 20 ಚಿತ್ರಗಳನ್ನು ಆಯ್ಕೆ ಮಾಡಿದೆ.

Previous articleವೀಡಿಯೊ | ಮೋಹನ್‌ಲಾಲ್‌ ‘ಮರಕ್ಕರ್‌’ ಸೆಟ್‌ನಲ್ಲಿ ಅಜಿತ್; ಇದು ದುಬಾರಿ ಮಲಯಾಳಂ ಸಿನಿಮಾ
Next articleಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು; ‘ಅಮೃತ ಅಪಾರ್ಟ್‌ಮೆಂಟ್ಸ್’ ಸಿನಿಮಾ ಹಾಡು

LEAVE A REPLY

Connect with

Please enter your comment!
Please enter your name here