ಮೈಸೂರಿನ ವಿಷ್ಣುವರ್ಧನ್‌ ಸ್ಮಾರಕದಲ್ಲಿ ಅನಿರುದ್ಧ್‌ ನೂತನ ಸಿನಿಮಾಗೆ ಮುಹೂರ್ತ ನೆರವೇರಿದೆ. ಎಂ ಆನಂದರಾಜ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ಡಾರ್ಕ್‌ ಕಾಮಿಡಿ ಥ್ರಿಲ್ಲರ್‌ ಚಿತ್ರವಿದು. ನಿಧಿ ಸುಬ್ಬಯ್ಯ ಮತ್ತು ರಚೆಲ್‌ ಡೇವಿಡ್‌ ಚಿತ್ರದ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.

‘ಜೊತೆಜೊತೆಯಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ ನಟ ಅನಿರುದ್ಧ್‌ ಹಿರಿತೆರೆಗೆ ಮರಳುತ್ತಿದ್ದಾರೆ. ಅವರ ನೂತನ ಚಿತ್ರಕ್ಕೆ ಮೈಸೂರಿನ ವಿಷ್ಣುವರ್ಧನ್‌ ಸ್ಮಾರಕದಲ್ಲಿ ಚಾಲನೆ ಸಿಕ್ಕಿದೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಅವರು ಚಿತ್ರಕ್ಕೆ ಚಾಲನೆ ನೀಡಿ ಶುಭ ಹಾರೈಸಿದ್ದಾರೆ. ಇತ್ತೀಚಿನ ‘ರಾಘು’ ಸಿನಿಮಾ ನಿರ್ದೇಶಿಸಿದ್ದ ಎಂ ಆನಂದರಾಜ್‌ ನಿರ್ದೇಶಿಸುತ್ತಿರುವ ಡಾರ್ಕ್‌ ಕಾಮಿಡಿ ಥ್ರಿಲ್ಲರ್‌ ಜಾನರ್‌ ಚಿತ್ರವಿದು. ಆಗಸ್ಟ್ 10ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ತುಮಕೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.‌ ದಮ್ತಿ ಪಿಕ್ಚರ್ಸ್‌ ಬ್ಯಾನರ್‌ನಡಿ ರೂಪ ಡಿ ಎನ್‌ ಸಿನಿಮಾ ನಿರ್ಮಿಸುತ್ತಿದ್ದಾರೆ.

ನಿರ್ದೇಶಕರೇ ಕತೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ನಿಧಿ ಸುಬ್ಬಯ್ಯ ಮತ್ತು ‘ಲವ್‌ ಮಾಕ್ಟೇಲ್‌ 2’ ಸಿನಿಮಾ ಖ್ಯಾತಿಯ ರಚೆಲ್‌ ಡೇವಿಡ್‌ ಚಿತ್ರದ ಇಬ್ಬರು ನಾಯಕಿಯರು. ಶರತ್ ಲೋಹಿತಾಶ್ವ, ಕೆ ಎಸ್ ಶ್ರೀಧರ್, ಶಿವಮಣಿ ಇತರೆ ಪ್ರಮುಖ ಕಲಾವಿದರು. ಉದಯ ಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಆಶಿಕ್ ಕುಸುಗೊಳ್ಳಿ ಡಿ ಐ (‘ವಿಕ್ರಾಂತ್ ರೋಣ’ ಖ್ಯಾತಿ), ನರಸಿಂಹಮೂರ್ತಿ ಸಾಹಸ ನಿರ್ದೇಶನ, ಮಾಧುರಿ ಪರಶುರಾಮ್ ನೃತ್ಯ ನಿರ್ದೇಶನ ಸಿನಿಮಾಗಿದೆ.

Previous article‘Oppenheimer’ & ‘Barbie’ | ಸದ್ದು ಮಾಡುತ್ತಿವೆ ಈ ಎರಡು ಇಂಗ್ಲಿಷ್‌ ಸಿನಿಮಾಗಳು
Next articleKRG ಸ್ಟುಡಿಯೋಸ್‌ 6ನೇ ವಾರ್ಷಿಕೋತ್ಸವ | TVF ಜೊತೆ ಕೈಜೋಡಿಸಿದ ಸಂಸ್ಥೆ

LEAVE A REPLY

Connect with

Please enter your comment!
Please enter your name here