ಸುದೀಪ್‌ ಅಭಿನಯದ ಮಹತ್ವಾಕಾಂಕ್ಷೆಯ ʼವಿಕ್ರಾಂತ್‌ ರೋಣʼ ಸಿನಿಮಾದ ರಿಲೀಸ್‌ ದಿನಾಂಕ ಘೋಷಣೆಯಾಗಿದ್ದು, 2022ರ ಫೆಬ್ರವರಿ 24ರಂದು ಪ್ರೇಕ್ಷಕರಿಗೆ ಸಿಗಲಿದೆ. ಅನೂಪ್‌ ಭಂಡಾರಿ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಿರೂಪ್‌ ಭಂಡಾರಿ, ನೀತಾ ಅಶೋಕ್‌, ರವಿಶಂಕರ್‌ ಗೌಡ ಇದ್ದಾರೆ.

ನಟ ಸುದೀಪ್‌ ಇಂದು ಟ್ವಿಟರ್‌ನಲ್ಲಿ ತಮ್ಮ ಬಹುನಿರೀಕ್ಷಿತ ʼವಿಕಾಂತ್‌ ರೋಣʼ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದಾರೆ. ಸಿನಿಮಾ 2022ರ ಫೆಬ್ರವರಿ 24ರಂದು ತೆರೆಕಾಣಲಿದೆ. ʼಇಂಡಿಯಾನಾ ಜೋನ್ಸ್‌ʼ ಹಾಲಿವುಡ್‌ ಸಿನಿಮಾ ಜಾನರ್‌ನಲ್ಲಿ ಈ ಚಿತ್ರ ತೆರೆಗೆ ಅಳವಡಿಕೆಯಾಗಿರುವಂತಿದೆ. ಈ ಮೊದಲು ಬಿಡುಗಡೆಯಾಗಿದ್ದ ಟೀಸರ್‌ ಈ ಸೂಚನೆ ನೀಡಿತ್ತು. ಕುತೂಹಲಕಾರಿ ಜಗತ್ತನ್ನು ಪ್ರವೇಶಿಸುವ ಹೀರೋ ಕತೆಯಿದು ಎನ್ನುವುದು ಚಿತ್ರತಂಡದ ಪ್ರಾಥಮಿಕ ಮಾಹಿತಿ. 2020ರ ಆಗಸ್ಟ್‌ನಲ್ಲಿ ಹೈದರಾಬಾದ್‌ನಲ್ಲಿ ಸಿನಿಮಾದ ಚಿತ್ರೀಕರಣ ಶುರುವಾಗಿತ್ತು. ಬಹುತೇಕ ಇನ್‌ಡೋರ್‌ನಲ್ಲಿ ಸೆಟ್‌ ಹಾಕಿ ಸಿನಿಮಾ ಚಿತ್ರಿಸಿದ್ದಾರೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವ ಫ್ಯಾಂಟಸಿ ಡ್ರಾಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ನಿರೂಪ್‌ ಭಂಡಾರಿ, ನೀತಾ ಅಶೋಕ್‌, ರವಿಶಂಕರ್‌ ಗೌಡ ಇದ್ದಾರೆ. ಸ್ಪೆಷಲ್‌ ಡ್ಯಾನ್ಸ್‌ನಲ್ಲಿ ಬಾಲಿವುಡ್‌ ನಟಿ ಜಾಕ್ವಲಿನ್‌ ಫರ್ನಾಂಡೀಸ್‌ ಇದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here