‘KGF2’ ಚಿತ್ರದ ಭರ್ಜರಿ ಯಶಸ್ಸು ಚಿತ್ರತಂಡದ ಕಲಾವಿದರು ಹಾಗೂ ತಂತ್ರಜ್ಞರಿಗೆ ಜನಮನ್ನಣೆ ತಂದುಕೊಟ್ಟಿದೆ. ರಾಖಿ ಭಾಯ್‌ ಪ್ರೇಯಸಿ, ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀನಿಧಿ ಶೆಟ್ಟಿ ಈಗ ಚಿರಪರಿಚಿತ ಹಿರೋಯಿನ್‌. ಚಿತ್ರೀಕರಣ ಸಂದರ್ಭದ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು ಅವಕಾಶಕ್ಕಾಗಿ ನಿರ್ದೇಶಕರಿಗೆ ಧನ್ಯವಾದ ಹೇಳಿದ್ದಾರೆ.

ಪ್ರಶಾಂತ್‌ ನೀಲ್‌ ನಿರ್ದೇಶನದ ‘KGF2’ ಸಿನಿಮಾ ಗಡಿಗಳನ್ನು ದಾಟಿ ಕೋಟ್ಯಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದೃಷ್ಟಿಯಿಂದ ಚಿತ್ರದ್ದು ದಾಖಲೆಗಳ ಮೇಲೆ ದಾಖಲೆ! ಈ ಚಿತ್ರವೀಗ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ. ಇನ್ನು ಒಟ್ಟಾರೆ ವಹಿವಾಟು ಸಾವಿರ ಕೋಟಿ ರೂಪಾಯಿ ಆಸುಪಾಸು ಇದೆ. ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಚಾಪ್ಟರ್‌ 1ರಲ್ಲಿ ಹೆಚ್ಚು ಸ್ಕ್ರೀನ್‌ ಸ್ಪೇಸ್‌ ಇರಲಿಲ್ಲ. ಆದರೆ ಚಾಪ್ಟರ್‌ 2ನಲ್ಲಿ ಅವರು ಮಿಂಚಿದ್ದಾರೆ. ‘ರೀನಾ ದೇಸಾಯಿ’ ಪಾತ್ರದಲ್ಲಿ ಜನರು ಅವರನ್ನು ಇಷ್ಟಪಟ್ಟಿದ್ದಾರೆ.

ಐದಾರು ವರ್ಷಗಳ ಕಾಲ ‘KGF’ ಚಿತ್ರಕ್ಕೆಂದು ಡೇಟ್ಸ್‌ ಕೊಡುವ ನಿರ್ಧಾರ ಅಷ್ಟು ಸರಳವಲ್ಲ. ವರ್ಷವೊಂದರಲ್ಲಿ ಐದಾರು ಚಿತ್ರಗಳಲ್ಲಿ ನಟಿಸುವ ಹಿರೋಯಿನ್‌ಗಳ ನಿರ್ಧಾರದ ಮುಂದೆ ಶ್ರೀನಿಧಿ ಅವರ ನಿಲುವು ತುಂಬಾ ಕಠಿಣವಾದದ್ದೇ. ತಮ್ಮ ನಿಲುವುನಿಂದಾಗಿ ಅವರೀಗ ಜನಪ್ರಿಯತೆಯ ಮನ್ನಣೆ ಪಡೆಯುತ್ತಿದ್ದಾರೆ. ಇಂದು ಟ್ವಿಟರ್‌ನಲ್ಲಿ ಚಿತ್ರದ ಮೇಕಿಂಗ್‌ ವೀಡಿಯೋಗಳನ್ನು ಹಂಚಿಕೊಂಡಿರುವ ಅವರು, “ನಮ್ಮ ನಿರ್ಧಾರಗಳು ನಮ್ಮ ಕನಸುಗಳನ್ನು ಸಾಕಾರಗೊಳಿಸಲು ನೆರವಾಗುತ್ತವೆ. ಕೆಲವೇ ಕೆಲವು ಬಾರಿ ಇತರರ ನಿರ್ಧಾರಗಳು ಕೂಡ ಬದುಕು ಬದಲಿಸಬಲ್ಲವು. ಪ್ರಶಾಂತ್‌ ನೀಲ್‌ ತಮ್ಮ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿದರು ಮತ್ತು ನನ್ನ ಬದುಕು ಬದಲಾಯಿತು. ಧನ್ಯವಾದ ಪ್ರಶಾಂತ್‌” ಎಂದು ನಿರ್ದೇಶಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

Previous articleಆಕಾಶ್‌ ಜೋಶಿ ‘ಅಂತರ್ ಕಲಹ’; ಸೈಕಾಲಾಜಿಕಲ್‌ ಥ್ರಿಲ್ಲರ್‌ ಶಾರ್ಟ್‌ಫಿಲ್ಮ್‌
Next article‘Modern Love Mumbai’ ಟ್ರೈಲರ್‌; ಪ್ರೈಮ್‌ನಲ್ಲಿ ಮೇ 13ರಿಂದ ಸರಣಿ

LEAVE A REPLY

Connect with

Please enter your comment!
Please enter your name here