ಅರವಿಂದ್‌ ಮತ್ತು ದಿವ್ಯಾ ಉರುಡುಗ ನಟಿಸಿರುವ ‘ಅರ್ಧಂಬರ್ದ ಪ್ರೇಮಕಥೆ’ ಸಿನಿಮಾ ಇದೇ ಡಿಸೆಂಬರ್‌ 1ರಂದು ತೆರೆಕಾಣುತ್ತಿದೆ. ಅರವಿಂದ್‌ ಕೌಶಿಕ್‌ ನಿರ್ದೇಶನ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟ ದ್ವಾರಕೀಶ್‌ ಪುತ್ರ ಅಭಿಲಾಷ್ ಕಾಣಿಸಿಕೊಂಡಿದ್ದಾರೆ.

‘ಬಿಗ್‌ ಬಾಸ್‌’ ಖ್ಯಾತಿಯ ದಿವ್ಯಾ ಉರುಡುಗ ಮತ್ತು ಅರವಿಂದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಅರ್ಧಂಬರ್ದ ಪ್ರೇಮಕಥೆ’ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಈ ಚಲನಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ. ಅರವಿಂದ್‌ ಕೌಶಿಕ್‌ ಈ ಹಿಂದೆ ‘ತುಘ್ಲಕ್’, ‘ನಮ್ ಏರಿಯಾಲ್ ಒಂದಿನ’, ‘ಹುಲಿರಾಯ’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಈ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಕಲಾವಿದರು ಹಾಗೂ ತಂತ್ರಜ್ಞರು ಪ್ರಸ್ತುತ ಚಿತ್ರರಂಗದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಅವರ ‘ಅರ್ಧಂಬರ್ದ ಪ್ರೇಮಕಥೆ’ ನಿರೀಕ್ಷೆ ಮೂಡಿಸಿದೆ.

ಬಕ್ಸಸ್ ಮೀಡಿಯಾ, ಆರ್ ಎ ಸಿ ವಿಶ್ಯುಯೆಲ್ಸ್‌ ಮತ್ತು ಲೈಟ್ ಹೌಸ್ ಮೀಡಿಯಾ ಚಿತ್ರ ನಿರ್ಮಿಸಿವೆ. ‘ಬಿಗ್‌ಬಾಸ್‌’ ಸ್ಪರ್ಧಿಗಳಾಗಿದ್ದ ಅರವಿಂದ್‌ ಮತ್ತು ದಿವ್ಯಾ ಉರುಡುಗ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Rapper ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಚಿತ್ರದ ಇತರೆ ಪ್ರಮುಖ ಕಲಾವಿದರು. ಹಿರಿಯ ನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೂರ್ಯ ಛಾಯಾಗ್ರಹಣ, ಸತೀಶ್‌ ಬ್ರಹ್ಮಾವರ್‌ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ. ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಅವರೇ ಸಂಕಲನ ಮಾಡಿದ್ದಾರೆ. ಇದೇ ಡಿಸೆಂಬರ್ 1 ರಂದು ಸಿನಿಮಾ ತೆರೆಗೆ ಬರುತ್ತಿದೆ.

LEAVE A REPLY

Connect with

Please enter your comment!
Please enter your name here