ಮಹೇಶ್ ಕುಮಾರ್ ನಿರ್ದೇಶನದಲ್ಲಿ ಶ್ರೀಮುರಳಿ ನಟಿಸಿರುವ ‘ಮದಗಜ’ ಸಿನಿಮಾದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ. ಕಿನ್ನಾಳ್ ರಾಜ್ ರಚಿಸಿರುವ ಗೀತೆಗೆ ರವಿ ಬಸ್ರೂರು ಸಂಗೀತ ಸಯೋಜಿಸಿದ್ದಾರೆ. ಡಿಸೆಂಬರ್‌ 3ರಂದು ಸಿನಿಮಾ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತೆರೆಕಾಣುತ್ತಿದೆ.

ಶ್ರೀಮುರಳಿ ನಟನೆಯ ದುಬಾರಿ ವೆಚ್ಚದ ‘ಮದಗಜ’ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಸಿನಿಮಾ ತೆರೆಕಾಣಲಿದ್ದು, ಶೀರ್ಷಿಕೆ ಗೀತೆಯಲ್ಲಿ ಅದ್ಧೂರಿತನ ಎದ್ದು ಕಾಣಿಸುತ್ತದೆ. ಕಿನ್ನಾಳ್ ರಾಜ್ ರಚನೆಯ ಗೀತೆಗೆ ರವಿ ಬಸ್ರೂರು ಸಂಗೀತ ಸಂಯೋಜಿದ್ದಾರೆ. ಇಂಟ್ರಡಕ್ಷನ್ ಹಾಡಾದ್ದರಿಂದ ಸಹಜವಾಗಿಯೇ ಹೀರೋನ ಗುಣಗಾನವಿದ್ದು ಅಬ್ಬರದ ಸಂಗೀತವಿದೆ. ಆಕರ್ಷಕ ಸೆಟ್‌ನಲ್ಲಿ ನೂರಾರು ಡ್ಯಾನ್ಸರ್‌ಗಳೊಂದಿಗೆ ಹೀರೋ ಶ್ರೀಮುರಳಿ ಕುಣಿದಿದ್ದಾರೆ. ಸಂಗೀತ ಸಂಯೋಜಕ ರವಿ ಬಸ್ರೂರು ಸಂಯೋಜಿಸಿರುವ ‘ಮದಗಜ’ ಸಿಗ್ನೇಚರ್ ಟ್ಯೂನ್ ಗಮನಸೆಳೆಯುತ್ತದೆ.

ಈ ಹಿಂದೆ ದರ್ಶನ್‌ ಅವರಿಗೆ ‘ರಾಬರ್ಟ್‌’ ಸಿನಿಮಾ ನಿರ್ಮಿಸಿದ್ದ ಉಮಾಪತಿ ‘ಮದಗಜ’ಕ್ಕೆ ಬಂಡವಾಳ ಹೂಡಿದ್ದು, ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಆಶಿಕಾ ರಂಗನಾಥ್‌ ಚಿತ್ರದ ಹಿರೋಯಿನ್‌. ಸತೀಶ್ ನೀನಾಸಂ ಹೀರೋ ಆಗಿದ್ದ ‘ಅಯೋಗ್ಯ’ ಸಿನಿಮಾ ಮಾಡಿ ಗೆದ್ದಿದ್ದ ಮಹೇಶ್ ಕುಮಾರ್ ‘ಮದಗಜ’ ನಿರ್ದೇಶಕ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ ಮತ್ತು ಒಂದು ವೀಡಿಯೋ ಸಾಂಗ್‌ಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಈಗ ಬಿಡುಗಡೆಯಾಗಿರುವ ಶೀರ್ಷಿಕೆ ಗೀತೆಯನ್ನು ತೆಲುಗು ಮತ್ತು ತಮಿಳಿನಲ್ಲೂ ರಿಲೀಸ್ ಮಾಡುವುದು ನಿರ್ಮಾಪಕರ ಯೋಜನೆ. ತೆಲುಗು ನಟ ಜಗಪತಿ ಬಾಬು ಚಿತ್ರದ ಪ್ರಮಖ ಪಾತ್ರದಲ್ಲಿ ನಟಿಸಿದ್ದಾರೆ.

Previous articleTSRTC ಇಮೇಜ್‌ಗೆ ಧಕ್ಕೆ; ನಟ ಅಲ್ಲು ಅರ್ಜುನ್‌ಗೆ ಲೀಗಲ್ ನೋಟೀಸ್ ಸಾಧ್ಯತೆ
Next articleಐದು ಭಾಷೆಗಳಲ್ಲಿ ‘ತೋತಾಪುರಿ’ ಸಿನಿಮಾ; ಪೋಸ್ಟರ್ ಟ್ವೀಟ್ ಮಾಡಿದ ಜಗ್ಗೇಶ್

LEAVE A REPLY

Connect with

Please enter your comment!
Please enter your name here