ಸ್ಯಾಂಡಲ್‌ವುಡ್ ಯುವ ನಟ, ನಿರ್ದೇಶಕ ಅರ್ಜುನ್ ಕಿಶೋರ್‌ ‘ಟ್ರಿಪಿಯಾನ’ ವೀಡಿಯೋ ಸಾಂಗ್ ಮಾಡಿದ್ದಾರೆ. ವ್ಯಕ್ತಿಯ ಭಾವಲೋಕದ ಜಗತ್ತನ್ನು ನೋಡುವ ಪ್ರಯತ್ನವಿದು.

ಈ ಹಿಂದೆ ‘ಲೈಫ್ 360’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾಗಿದ್ದರು ಅರ್ಜುನ್ ಕಿಶೋರ್ ಚಂದ್ರ. ಬಹುಮುಖ ಪ್ರತಿಭೆಯ ಯುವಕ. ನಟನೆ ಜೊತೆ ನಿರ್ದೇಶನ, ಬರವಣಿಗೆಯಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ನ್ಯಾಷನಲ್‌ ಜಿಯಾಗ್ರಫಿಕ್, ಡಿಸ್ಕವರಿ ಚಾನೆಲ್‌ಗಳ ಹಲವು ಸಾಕ್ಷ್ಯಚಿತ್ರಗಳಿಗೆ ಡಬ್ಬಿಂಗ್ ಕಲಾವಿದರಾಗಿಯೂ ಕೆಲಸ ಮಾಡಿರುವ ಅರ್ಜುನ್‌ ಕಿಶೋರ್ ಚಂದ್ರ ಇದೀಗ ‘ಟ್ರಿಪಿಯಾನ’ ವಿಡಿಯೋ ಸಾಂಗ್ ಮೂಲಕ ಸುದ್ದಿಯಾಗಿದ್ದಾರೆ. ಇದು ಅವರು ರಚಿಸಿ, ನಿರ್ದೇಶಿಸಿ, ನಟಿಸಿರುವ ವೀಡಿಯೋ ಆಲ್ಬಂ. ‘ಟ್ರಿಪಿಯಾನ’ ವ್ಯಕ್ತಿಯ ಭಾವಲೋಕದ ಜಗತ್ತಿನ ಕುರಿತ ಅಭಿವ್ಯಕ್ತಿ. ಲೌಕಿಕ ಜಗತ್ತಿನಲ್ಲಿ ಬದುಕುತ್ತಿರುವ ವ್ಯಕ್ತಿಯ ಮನಸ್ಸಿನ ತಳಮಳ, ತಾಲಕಲಾಟಗಳನ್ನು ಸಂಗೀತ ಮತ್ತು ಗ್ರಾಫಿಕ್ಸ್‌ನೊಂದಿಗೆ ಹೇಳುವ ಪ್ರಯತ್ನ ಇಲ್ಲಿ ನಡೆದಿದೆ. ಎಸ್‌ಐಡಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಆಲ್ಬಂ ರಿಲೀಸ್ ಆಗಿದ್ದು, ಎಸ್‌ಐಡಿ ಸಂಗೀತ ಸಂಯೋಜನೆ, ಅನಿಲ್ ಕುಮಾರ್ ಛಾಯಾಗ್ರಹಣ, ಅಖಿಲ್ ಪರಮೇಶ್ವರನ್‌ ನಿರ್ಮಾಣವಿದೆ.

Previous articleಫೋಟೊ ಫೀಚರ್ | ‘ಸಲಗ’ ಪ್ರೀ ರಿಲೀಸ್ ಇವೆಂಟ್; ದುನಿಯಾ ವಿಜಿ ಸಿನಿಮಾಗೆ ತಾರೆಯರ ಬೆಂಬಲ
Next articleಟಾಲಿವುಡ್‌ MAA ಎಲೆಕ್ಷನ್; ‘ಔಟ್‌ಸೈಡರ್’ ಪ್ರಕಾಶ್‌ ರೈ ವಿರುದ್ಧ ಗೆದ್ದ ‘ಇನ್‌ಸೈಡರ್’ ವಿಷ್ಣು ಮಂಚು

LEAVE A REPLY

Connect with

Please enter your comment!
Please enter your name here