ದರ್ಶನ್‌ ಅವರು ಮಾಧ್ಯಮದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆಡಿಯೋವೊಂದು ಕೆಲ ದಿನಗಳ ಹಿಂದೆ ವೈರಲ್‌ ಆಗಿತ್ತು. ಈ ಆಡಿಯೋ ಹೊರಬಿದ್ದ ನಂತರ ಮಾಧ್ಯಮಗಳು ದರ್ಶನ್‌ ಕುರಿತ ಸುದ್ದಿಗಳನ್ನು ಪ್ರಕಟಣೆ ಮಾಡುವುದನ್ನು ನಿಲ್ಲಿಸಿದ್ದವು. ದರ್ಶನ್‌ ಕ್ಷಮೆಯಾಚಿಸಿದ್ದು ತಪ್ಪು ಮರುಕಳಿಸದು ಎಂದಿದ್ದಾರೆ.

ದರ್ಶನ್‌ ಅವರು ವರಮಹಾಲಕ್ಷಿ ಹಬ್ಬದ ದಿನವಾದ ನಿನ್ನೆ(ಆಗಸ್ಟ್‌25, 2023) ತಮ್ಮ ಅಭಿಮಾನಿಗಳಿಗೆ ಮತ್ತು ಮಾಧ್ಯಮ ಮಿತ್ರರಿಗೆ ಶುಭಾಶಯಗಳನ್ನು ತಿಳಿಸುವ ಮೂಲಕ ಪತ್ರವೊಂದನ್ನು ಬರೆದು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟಿಸಿದ್ದಾರೆ. ದರ್ಶನ್‌ ಅವರು ಮಾಧ್ಯಮದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆಡಿಯೋವೊಂದು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಈ ಆಡಿಯೋ ಹೊರಬಿದ್ದ ಮೇಲೆ ಮಾಧ್ಯಮಗಳು ಸ್ವಯಂಪ್ರೇರಿತವಾಗಿ ನಟನ ಕುರಿತು ಸುದ್ದಿ ಪ್ರಕಟಣೆ, ಪ್ರಸಾರ ಮಾಡುವುದನ್ನು ನಿಲ್ಲಿಸಿದ್ದವು. ಇದೀಗ ದರ್ಶನ್‌ ಅವರು ತಪ್ಪು ಸರಿಪಡಿಸಿಕೊಂಡಿದ್ದಾರೆ. ದರ್ಶನ್‌ ಅವರು ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ. ಅಲ್ಲದೆ ದರ್ಶನ್‌ ಅವರು ಪ್ರಮುಖ ದಿನಪತ್ರಿಕೆಗಳ ಸಂಪಾದಕರ ಜೊತೆ ಒಂದು ಸಭೆ ನಡೆಸಿದ್ದಾರೆ. ದರ್ಶನ್‌ ಅವರ ‘ಕಾಟೇರ’ ಸಿನಿಮಾದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಅಲ್ಲಿ ದರ್ಶನ್‌ ಹಿಂದಿನ ತಪ್ಪು ಮರುಕಳಿಸದು ಎಂದಿದ್ದಾರೆ. ಸದ್ಯ ದರ್ಶನ್‌ ಅವರು ‘ಕಾಟೇರ’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ತರುಣ್‌ ಸುಧೀರ್‌ ನಿರ್ದೇಶನದ ಈ ಸಿನಿಮಾದ ನಾಯಕಿಯಾಗಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ನಟಿಸುತ್ತಿದ್ದಾರೆ.

Previous articleದಿಗಂತ್‌ – ಧನ್ಯಾ ನಟನೆಯ ‘ಪೌಡರ್‌’ | KRG – TVF ಮೋಷನ್‌ ಪಿಕ್ಚರ್ಸ್‌ ಸಿನಿಮಾ
Next article‘ಜಾನೇ ಜಾನ್‌’ ಟೀಸರ್‌ | ಕರೀನಾ ಕಪೂರ್‌ ಸಿನಿಮಾ ಸೆಪ್ಟೆಂಬರ್‌ 21ರಿಂದ Netflixನಲ್ಲಿ

LEAVE A REPLY

Connect with

Please enter your comment!
Please enter your name here