ನಟ ಧನಂಜಯ ಅವರು ತಮ್ಮ ಡಾಲಿ ಪಿಕ್ಚರ್ಸ್‌ ಬ್ಯಾನರ್‌ನಡಿ ನಿರ್ಮಿಸುತ್ತಿರುವ ‘ಟಗರು ಪಲ್ಯ’ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ. ನಾಗಭೂಷಣ್‌ ಮತ್ತು ಅಮೃತಾ ಪ್ರೇಮ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ರಾಜ್ಯೋತ್ಸವದಂದು ತೆರೆಕಾಣಲಿದೆ.

‘ಇಕ್ಕಟ್’, ‘ಬಡವ ರಾಸ್ಕಲ್’ ಸಿನಿಮಾಗಳ ಖ್ಯಾತಿಯ ನಟ ನಾಗಭೂಷಣ್ ಅವರಿಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ‘ಟಗರು ಪಲ್ಯ’ ಸಿನಿಮಾ ಬಳಗದಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಅವರು ಹೀರೋ ಆಗಿ ನಟಿಸುತ್ತಿರುವ ‘ಟಗರು ಪಲ್ಯ’ ಚಿತ್ರದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ. ನಟ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ನಿರ್ಮಿಸುತ್ತಿರುವ ಮೂರನೇ ಚಿತ್ರವಿದು. ಧನಂಜಯ ಅವರ ರಚನೆಯ ಈ ಗೀತೆಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಉಮೇಶ್ ಕೆ ಕೃಪಾ ಚೊಚ್ಚಲ ನಿರ್ದೇಶನದ ಈ ಸಿನಿಮಾದ ನಾಯಕಿಯಾಗಿ ನಟ ಪ್ರೇಮ್ ಪುತ್ರಿ ಅಮೃತಾ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆಯೊಂದರ ಸುತ್ತ ಕತೆ ಹೆಣೆಯಲಾಗಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ಟೈಟಲ್ ಟ್ರ್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

Previous articleಸಿಗರೇಟಿನ ಹೊಗೆಯಲ್ಲಿ ಮಸುಕಾಗುವ ಕಥೆ, ಸಂದೇಶ
Next article‘ಸಂಜು ವೆಡ್ಸ್‌ ಗೀತಾ – 2’ ಟೈಟಲ್‌ ಟೀಸರ್‌ | ಸೆಟ್ಟೇರಿದ ನಾಗಶೇಖರ್‌ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here