‘ವಿಜಯನಗರ ಬಿಂಬ’ ವಿದ್ಯಾರ್ಥಿಗಳು ಪಶ್ಚಿಮದ ದೇಶಗಳ ಜನಪ್ರಿಯ ರಂಗಪ್ರಕಾರ ಇಮ್ಮೆರ್ಸೀವ್‌ ಥಿಯೇಟರ್‌ ಪ್ರಯೋಗ ನಡೆಸುತ್ತಿದ್ದಾರೆ. ಸುಷ್ಮಾ ನಿರ್ದೇಶನದಲ್ಲಿ ಆಗಸ್ಟ್‌ 12, 13 ಮತ್ತು 14ರಂದು ಪ್ರದರ್ಶನಗಳು ನಡೆಯಲಿವೆ.

ಇಮ್ಮರ್ಸಿವ್ ಥಿಯೇಟರ್ ಪಶ್ಚಿಮದ ದೇಶಗಳ ಜನಪ್ರಿಯ ರಂಗ ಪ್ರಕಾರ. ಕನ್ನಡ ರಂಗಭೂಮಿಯಲ್ಲಿ ಈ ಪ್ರಕಾರದ ಹೆಚ್ಚಿನ ಪ್ರಯತ್ನಗಳು ನಡೆದಿಲ್ಲ. ಥೆಮಾ ಥಿಯೇಟರ್ ಕಂಪನಿ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದು IC 47 ನಾಟಕ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. ಪ್ರೇಕ್ಷಕರು ಮತ್ತು ಕಲಾವಿದರನ್ನು ಬೇರ್ಪಡಿಸುವ ‘ನಾಲ್ಕನೇ ಗೋಡೆ’ ಒಡೆಯುವ ಮೂಲಕ ವಿನೂತನ ಅನುಭವ ನೀಡುವ ಪ್ರಯೋಗವಿದು. ಪ್ರೇಕ್ಷಕರು ನಾಟಕದಲ್ಲಿ ಸಕ್ರಿಯವಾಗಿ ಪಾಲ್ಗೊಂಡು , ಕಥೆ ಮತ್ತು ಭಾವನೆಗಳನ್ನು ಹೆಚ್ಚಾಗಿ ಅರ್ಥಿಸಿಕೊಳ್ಳುವಂತೆ ಮಾಡುವುದು ಈ ಪ್ರಕಾರದ ಮೂಲ ಉದ್ದೇಶ.

ಇದೇ ನಾಟಕದ ಹಿಂದಿನ ಪ್ರದರ್ಶನಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ಅತ್ಯುತ್ತಮವಾಗಿತ್ತು. ಸಮಕಾಲೀನ ಕನ್ನಡ ರಂಗಭೂಮಿಯಲ್ಲಿ ಇದು ಅತ್ಯಂತ ಧೈರ್ಯಶಾಲಿ ಪ್ರಯತ್ನಗಳಲ್ಲಿ ಒಂದು ಎನ್ನುವುದು ಪ್ರೇಕ್ಷಕರ ಅಭಿಪ್ರಾಯ. 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಥೆಮಾ ಥಿಯೇಟರ್ ಕಂಪನಿ ಆಗಸ್ಟ್ 12, 13 ಮತ್ತು 14ರಂದು ಆರು ಹೊಸ ಪ್ರದರ್ಶನಗಳನ್ನು ಹಮ್ಮಿಕೊಂಡಿದೆ. ಈ ನಾಟಕವನ್ನು ಕನ್ನಡ ರಂಗಭೂಮಿಯ ಖ್ಯಾತ ನಿರ್ದೇಶಕಿ ಹಾಗೂ ವಿಜಯನಗರ ಬಿಂಬದ ಪ್ರಾಂಶುಪಾಲರಾದ ಡಾಕ್ಟರ್ ಸುಷ್ಮಾ ಎಸ್.ವಿ. ನಿರ್ದೇಶಿಸಿದ್ದಾರೆ. ವಿಜಯನಗರ ಬಿಂಬದ ವಿದ್ಯಾರ್ಥಿ ಕೌಶಿಕ್ ಎಚ್.ಎ. ನಾಟಕ ರಚಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ್ , ಬಾಬು ಹಿರಣಯ್ಯ, ಗುಂಡಣ್ಣ, ವಿಜಯಮ್ಮ, ಸುಚೇಂದ್ರ ಪ್ರಸಾದ್, ಅಭಿಷೇಕ್ ಅಯ್ಯಂಗಾರ್ ಸೇರಿದಂತೆ ಜನಪ್ರಿಯ ರಂಗಕರ್ಮಿಗಳು ಭಾಗಿಯಾಗಲಿದ್ದಾರೆ.

LEAVE A REPLY

Connect with

Please enter your comment!
Please enter your name here