ಶಿವರಾಜಕುಮಾರ್‌ ಹುಟ್ಟುಹಬ್ಬದಂದು ಅವರ ಹಲವು ನೂತನ ಸಿನಿಮಾಗಳು ಘೋಷಣೆಯಾಗಿವೆ. ಇವುಗಳ ಪೈಕಿ ಗಣೇಶ್‌ ಜೊತೆ ಅವರು ನಟಿಸಲಿರುವ ಚಿತ್ರವೂ ಒಂದು. ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರವನ್ನು ಖ್ಯಾತ ತಮಿಳು ಚಿತ್ರನಿರ್ದೇಶಕ ಕೆ ಎಸ್‌ ರವಿಕುಮಾರ್‌ ನಿರ್ದೇಶಿಸಲಿದ್ದಾರೆ ಎನ್ನುವುದು ವಿಶೇಷ.

ಶಿವರಾಜಕುಮಾರ್‌ ಮತ್ತು ಗಣೇಶ್ ಚಿತ್ರವೊಂದರಲ್ಲಿ ಜೊತೆಯಾಗಿ ನಟಿಸುವುದು ಖಾತ್ರಿಯಾಗಿದೆ. ಖ್ಯಾತ ತಮಿಳು ಚಿತ್ರನಿರ್ದೇಶಕ ಕೆ ಎಸ್ ರವಿಕುಮಾರ್ ಅವರು ಇನ್ನೂ ಹೆಸರಿಡದ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ‘ಕೋಟಿಗೊಬ್ಬ 2’ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಈ ಚಿತ್ರ ನಿರ್ಮಿಸಲಿದ್ದಾರೆ. ಚಿತ್ರದ ಬಗ್ಗೆ ಬೇರೆ ಮಾಹಿತಿ ಲಭ್ಯವಾಗಿಲ್ಲ. ‘ಪ್ರೊಡಕ್ಷನ್‌ ನಂ 6’ ಎನ್ನುವ ತಾತ್ಕಾಲಿಕ ಶೀರ್ಷಿಕೆ ಹೊರಬಿದ್ದಿದೆ. ಇಬ್ಬರು ನಾಯಕನಟರು ಎರಡು ಪ್ರಮುಖ ನಿರ್ಣಾಯಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ತಂತ್ರಜ್ಞರು, ನಾಯಕನಟಿಯರು ಹಾಗೂ ತಂತ್ರಜ್ಞರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ನಿರ್ಮಾಪಕರು ತಿಳಿಸುತ್ತಾರೆ. ಇನ್ನು ಮೊನ್ನೆಯಷ್ಟೇ ಬರ್ತ್‌ಡೇ ಆಚರಿಸಿಕೊಂಡ ಶಿವರಾಜಕುಮಾರ್‌ ಹೆಸರಿನಲ್ಲೀಗ ಹಲವು ನೂತನ ಸಿನಿಮಾಗಳು ಘೋಷಣೆಯಾಗಿವೆ.

ಶಿವರಾಜ್‌ ಕುಮಾರ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಘೋಸ್ಟ್’, ‘ಭೈರತಿ ರಣಗಲ್’ ಚಿತ್ರಗಳು ಚಿತ್ರೀಕರಣದ ಹಂತದಲ್ಲಿವೆ. ‘ಭೈರತಿ ರಣಗಲ್’ ಅವರದ್ದೇ ನಿರ್ಮಾಣದ ಸಿನಿಮಾ. ಇವುಗಳ ಜೊತೆ ತೆಲುಗು ನಿರ್ದೇಶಕ ರಾಮ್ ಧೂಳಿಪುಡಿ ಅವರೊಂದಿಗೆ ಒಂದು ಚಲನಚಿತ್ರಕ್ಕೆ ಶಿವರಾಜಕುಮಾರ್‌ ಕೈಜೋಡಿಸಿದ್ದಾರೆ. ಲಕ್ಕಿ ಗೋಪಾಲ್ ಅವರೊಂದಿಗೆ ‘IV ರಿಟರ್ನ್ಸ್’ ಎಂಬ ಇನ್ನೊಂದು ಚಲನಚಿತ್ರದ ಭಾಗವಾಗಿದ್ದಾರೆ, ಕಾರ್ತಿಕ್ ಅದ್ವೈತ್ ಜೊತೆ ಇನ್ನು ಹೆಸರಿಡದ ಯೋಜನೆಯಲ್ಲಿಯೂ ಶಿವರಾಜ್ ಕುಮಾರ್‌ ಕಾಣಿಸಿಕೊಳ್ಳಲಿದ್ದಾರೆ. ನಟ ಅಜಯ್‌ ರಾವ್‌ ಅವರೊಂದಿಗೆ ಶಿವರಾಜಕುಮಾರ್‌ ನಟಿಸುತ್ತಿರುವ ಒಂದು ಸಿನಿಮಾ ಘೋಷಣೆಯಾಗಿದೆ. ಬಾಹುಬಲಿ ಕತೆ, ಚಿತ್ರಕಥೆ ರಚಿಸಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರಾದ ಸೂರಿ ಜೊತೆ ‘ಟಗರು 2’, ಮತ್ತು ಸಚಿನ್ ರವಿ ಜೊತೆಗೆ ‘ಅಶ್ವತ್ಥಾಮ’ ಸೇರಿದಂತೆ ಇನ್ನೂ ಅನೇಕ ಯೋಜನೆಗಳಲ್ಲಿ ಶಿವರಾಜ್‌ ಕುಮಾರ್‌ ಭಾಗಿಯಾಗಿದ್ದಾರೆ. ರಜನಿಕಾಂತ್‌ ಅವರ ‘ಜೈಲರ್’ ಮತ್ತು ಧನುಷ್‌ ಅವರ ‘ಕ್ಯಾಪ್ಟನ್ ಮಿಲ್ಲರ್’ ತಮಿಳು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ ಶಿವರಾಜಕುಮಾರ್‌.

Previous article‘ಆರ’ ಟ್ರೈಲರ್‌ | ಪ್ರೀತಿ – ಪ್ರಣಯ, ದುಷ್ಟ ಶಕ್ತಿ, ದೈವ ಸಂಘರ್ಷದ ಕಥಾನಕ
Next article‘ಆರಾಧ್ಯ’ ಲಿರಿಕಲ್‌ ವೀಡಿಯೋ ಸಾಂಗ್‌ | ವಿಜಯ್‌ ದೇವರಕೊಂಡ – ಸಮಂತಾ ‘ಖುಷಿ’ ಸಿನಿಮಾ

LEAVE A REPLY

Connect with

Please enter your comment!
Please enter your name here