ಪವನ್ ಒಡೆಯರ್ ನಿರ್ದೇಶನದಲ್ಲಿ ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ ‘ರೇಮೊ’ ಸಿನಿಮಾದ ಟೀಸರ್ ನಾಳೆ ಬಿಡುಗಡೆಯಾಗಲಿದೆ. ‘ದಿ ವಿಲನ್‌’ ಸಿನಿಮಾ ನಿರ್ಮಿಸಿದ್ದ ಸಿ.ಆರ್.ಮನೋಹರ್‌ ನಿರ್ಮಾಣದ ಸಿನಿಮಾ ದುಬಾರಿ ಬಜೆಟ್‌ನಲ್ಲಿ ತಯಾರಾಗಿದೆ.

ನಿರ್ದೇಶಕ ಪವನ್ ಒಡೆಯರ್‌ ಸದ್ದಿಲ್ಲದೆ ‘ರೇಮೊ’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಳೆ ಫಸ್ಟ್‌ ಲುಕ್‌ ಟೀಸರ್ ಬಿಡುಗಡೆಯಾಗಲಿದ್ದು, ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಒಗ್ಗೂಡಿಸುವುದು ಚಿತ್ರತಂಡದ ಯೋಜನೆ. ಶಿವರಾಜಕುಮಾರ್ ಮತ್ತು ಸುದೀಪ್ ನಟಿಸಿದ್ದ ‘ದಿ ವಿಲನ್‌’ ನಿರ್ಮಾಪಕ ಸಿ.ಆರ್.ಮನೋಹರ್‌ ನಿರ್ಮಾಣದ ಚಿತ್ರವಿದು. ನಿರ್ದೇಶಕರಾದ ಯೋಗರಾಜ್ ಭಟ್‌, ಪ್ರೇಮ್‌, ಎ.ಹರ್ಷ, ಚೇತನ್ ಕುಮಾರ್, ತರುಣ್ ಸುಧೀರ್, ಎ.ಪಿ.ಅರ್ಜುನ್‌ ಹಾಗೂ ನಿರ್ಮಾಪಕರಾದ ಜಯಣ್ಣ – ಭೋಗೇಂದ್ರ, ಕೆ.ಮಂಜು, ಕಾರ್ತೀಕ್ ಗೌಡ, ಕೆ.ಪಿ.ಶ್ರೀಕಾಂತ್‌ ಸೇರಿದಂತೆ ಪ್ರಮುಖರು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿರಲಿದ್ದಾರೆ.

ನಿರ್ಮಾಪಕ ಸಿ.ಆರ್.ಮನೋಹರ್ ಅವರ ಸಹೋದರ ಇಶಾನ್‌ ‘ರೋಗ್‌’ ಕನ್ನಡ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ದೊಡ್ಡ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾಗೆ ನಿರೀಕ್ಷಿಸಿದ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಈಗ ‘ರೇಮೊ’ ಚಿತ್ರದೊಂದಿಗೆ ಅವರು ತೆರೆಗೆ ಮರಳುತ್ತಿದ್ದಾರೆ. ಇನ್ನು ನಟಿ ಆಶಿಕಾ ರಂಗನಾಥ್‌ ಸದ್ಯ ಕನ್ನಡದ ಬೇಡಿಕೆಯ ನಟಿಯರಲ್ಲೊಬ್ಬರು. ಅವರು ನಾಯಕಿಯಾಗಿರುವ ‘ಅವತಾರ ಪುರುಷ’, ‘ಮದಗಜ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ತಮಿಳಿನ ಹಿರಿಯ ನಟ ಶರತ್ ಕುಮಾರ್, ಮಧುಬಾಲಾ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಗೀತ ಪ್ರಧಾನ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದೆ.

Previous articleಅಂಬರೀಶ್ ಅಗಲಿ ಇಂದಿಗೆ ಮೂರು ವರ್ಷ; ಸಮಾಧಿಗೆ ಪೂಜೆ ಸಲ್ಲಿಸಿದ ನಟಿ, ಸಂಸದೆ ಸುಮಲತಾ, ಅಭಿಷೇಕ್
Next article‘ಅಂತಿಮ್’ನಲ್ಲಿ ಸಲ್ಮಾನ್‌ಗಿತ್ತು ರೊಮ್ಯಾಂಟಿಕ್ ಟ್ರ್ಯಾಕ್; ಕೊನೆಯ ಹಂತದಲ್ಲಿ ಪ್ರಜ್ಞಾ ಜಸ್ವಾಲ್ ಪಾತ್ರಕ್ಕೆ ಕತ್ತರಿ

LEAVE A REPLY

Connect with

Please enter your comment!
Please enter your name here