ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಕ್ಯಾಪ್ಚರ್‌’ ಹಾರರ್‌ – ಥ್ರಿಲ್ಲರ್‌ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಬೆಂಗಳೂರಿನ ವೀರೇಶ್‌ ಥಿಯೇಟರ್‌ ಆವರಣದಲ್ಲಿ 60 ಅಡಿ ಎತ್ತರದ ಈ ಪೋಸ್ಟರ್‌ ರಿಲೀಸ್‌ ಸಂದರ್ಭದ ವೀಡಿಯೋವನ್ನು Instagramನಲ್ಲಿ ಹಂಚಿಕೊಂಡು ಚಿತ್ರತಂಡಕ್ಕೆ ಧನ್ಯವಾದ ಹೇಳಿದ್ದಾರೆ ಚಿತ್ರದ ನಾಯಕಿ ಪ್ರಿಯಾಂಕಾ ಉಪೇಂದ್ರ.

ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹೊಸ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್‌ಲುಕ್‌ ಪೋಸ್ಟರ್​ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಕ್ಯಾಪ್ಚರ್’ ಎಂದು ಶೀರ್ಷಿಕೆ ಇಡಲಾಗಿದ್ದು, ಅಭಿಮಾನಿಗಳ ಎದುರಲ್ಲಿ ಈ ಸಿನಿಮಾದ ಪೋಸ್ಟರ್ ಅನಾವರಣ ಮಾಡಲಾಗಿದೆ. ಪೋಸ್ಟರ್​ ಬರೋಬ್ಬರಿ 60 ಅಡಿ ಎತ್ತರ ಇದೆ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ನಟಿಯೊಬ್ಬರ ದೊಡ್ಡ ಪೋಸ್ಟರ್‌ ಇದು. ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಎದುರುಗಡೆ ವಿಭಿನ್ನವಾಗಿ ‘ಕ್ಯಾಪ್ಚರ್’ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣ ಮಾಡಲಾಗಿದೆ. ಪ್ರಿಯಾಂಕಾ ಉಪೇಂದ್ರ ಅವರ 60 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿದೆ. ಇದನ್ನು ಉಪೇಂದ್ರ ಮತ್ತು ಪ್ರಜ್ವಲ್ ದೇವರಾಜ್ ಅನಾವರಣ ಮಾಡಿದರು. ಇದು ಹಾರರ್​ ಸಿನಿಮಾ ಆದ್ದರಿಂದ ಅದಕ್ಕೆ ತಕ್ಕಂತೆಯೇ ಪೋಸ್ಟರ್​ ವಿನ್ಯಾಸ
ಮಾಡಲಾಗಿದೆ.

ಲೋಹಿತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಲೋಹಿತ್​ ಮತ್ತು ಪ್ರಿಯಾಂಕಾ ಅವರು ‘ಮಮ್ಮಿ’ ಮತ್ತು ‘ದೇವಕಿ’ ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಈಗ ಅವರ ಕಾಂಬಿನೇಷನ್​ನ 3ನೇ ಚಿತ್ರವಾಗಿ ‘ಕ್ಯಾಪ್ಚರ್​’ ಮೂಡಿಬರುತ್ತಿದೆ. ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಅವರು ಈ ಚಿತ್ರವನ್ನು Shree Durgaparameshwari Productions ಬ್ಯಾನರ್‌ ಅಡಿ ನಿರ್ಮಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ಫಸ್ಟ್‌ಲುಕ್‌ ಬಿಡುಗಡೆಯ ವಿಡಿಯೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪ್ರಿಯಾಂಕ, ‘3ನೇ ಸಹಯೋಗದೊಂದಿಗೆ ಮತ್ತೆ ನಿಮ್ಮ ಮುಂದೆ ಬರಲಿದ್ದೇವೆ. ಈ ಅದ್ಭುತ ಸಂದರ್ಭಕ್ಕೆ ಚಿತ್ರತಂಡಕ್ಕೆ ಧನ್ಯವಾದ. ನಮ್ಮ ಚಿತ್ರಕ್ಕಾಗಿ ಬೃಹತ್ 65 ಅಡಿ ಕಟೌಟ್‌ ಬಿಡುಗಡೆ ಮಾಡಲಾಗಿದೆ. ನವರಾತ್ರಿಯಲ್ಲಿ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಋಣಿಯಾಗಿದ್ದೇನೆ. ಈ ನವೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಭೇಟಿಯಾಗೋಣ’ ಎಂದು ಕ್ಯಾಪ್ಶನ್‌
ನೀಡಿದ್ದಾರೆ. ಸಿನಿಮಾಗೆ ಎಸ್ ಪಾಂಡಿಕುಮಾರ್ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here