ನೀರಜ್‌ ಪಾಂಡೆ ನಿರ್ದೇಶನದ ‘ಔರೋ ಮೇ ಕಹಾನ್ ದಮ್ ಥಾ!’ ಹಿಂದಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಜಯ್ ದೇವಗನ್ ಮತ್ತು ಟಬು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ.

ಅಜಯ್ ದೇವಗನ್ ಮತ್ತು ಟಬು ಅಭಿನಯದ ‘ಔರೋ ಮೇ ಕಹಾನ್ ದಮ್ ಥಾ!’ ಹಿಂದಿ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ರೊಮ್ಯಾಂಟಿಕ್‌ ಡ್ರಾಮಾವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದಾರೆ. 2024ರ ಏಪ್ರಿಲ್‌ 26ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಚಿತ್ರವು 2002 ಮತ್ತು 2023 ರ ನಡುವೆ ನಡೆದ 20 ವರ್ಷಗಳ ಅವಧಿಯ ವಿಶಿಷ್ಟವಾದ ಸಂಗೀತ ಪ್ರೇಮಕಥೆ. ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಈ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ಮುಂಬೈನಲ್ಲಿ ವ್ಯಾಪಕವಾಗಿ ಚಿತ್ರೀಕರಣಗೊಂಡಿರುವ ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಜಿಮ್ಮಿ ಶೆರ್ಗಿಲ್, ಸಾಯಿ ಮಂಜ್ರೇಕರ್ ಮತ್ತು ಶಾಂತನು ಮಹೇಶ್ವರಿ ನಟಿಸಿದ್ದಾರೆ.

‘ದೃಶ್ಯಂ 2’ ಮತ್ತು ‘ಭೋಲಾ’ ಚಿತ್ರಗಳ ನಂತರ ಇದು ಅಜಯ್ ಮತ್ತು ಟಬು ನಡುವಿನ ಸತತ ಮೂರನೇ ಸಹಯೋಗವಾಗಿದೆ. ಅವರು ಈ ಹಿಂದೆ ‘ವಿಜಯಪಥ್’ (1994), ‘ಹಕೀಕತ್’ (1995), ‘ತಕ್ಷಕ್’ (1999), ‘ದೃಶ್ಯಂ’ (2015), ‘ಫಿತೂರ್’ (2016), ‘ಗೋಲ್ಮಾಲ್ ಎಗೇನ್’ (2017) ಮತ್ತು ‘ದೇ ದೇ ಪ್ಯಾರ್ ದೇ’ (2019) ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. ನೀರಜ್‌ ಪಾಂಡೆ ಅವರ ಆರನೇ ನಿರ್ದೇಶನದ ಚಿತ್ರವಿದು. ‘ಎ ವೆಡ್ನೆಸ್‌ ಡೇ’, ‘ಸ್ಪೆಷಲ್ 26’, ‘ಎಂ ಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಅವರ ಜನಪ್ರಿಯ ಸಿನಿಮಾಗಳು. ‘ಔರೋ ಮೇ ಕಹಾನ್ ದಮ್ ಥಾ!’ ಚಿತ್ರವನ್ನು Narendra Hirawat, Reliance Entertainment ಬ್ಯಾನರ್‌ ಅಡಿಯಲ್ಲಿ ಕುಮಾರ್ ಮಂಗತ್ ಪಾಠಕ್ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here